ದೇಶವನ್ನಾಳುವ ಮೂಲ ಕಾನೂನು ನಮ್ಮ ಸಂವಿಧಾನ : ಕುಂದಾಪುರ ಹಿರಿಯ ಸಿವಿಲ್ ನ್ಯಾಯಾಧೀಶ ರಾಜು .ಎನ್
ಕುಂದಾಪುರ ಮಿರರ್ ಸುದ್ದಿ…
ಕೋಟ: ಕುಂದಾಪುರ ತಾಲೂಕು ವಕೀಲರ ಸಂಘ ಕುಂದಾಪುರ , ಸರಕಾರಿ ಪ್ರೌಢ ಶಾಲೆ ವಡ್ಡರ್ಸೆ, ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಲಯನ್ಸ್ ಕ್ಲಬ್ ಬನ್ನಾಡಿ – ವಡ್ಡರ್ಸೆ, ವಕೀಲರ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಮಾಹಿತಿ ಕಾರ್ಯಗಾರ ಶಿಬಿರವು ಸರಕಾರಿ ಪ್ರೌಢಶಾಲೆ ವಡ್ಡರ್ಸೆಯಲ್ಲಿ ಜರುಗಿತು.
ಸಮಾರಂಭದ ಉದ್ಘಾಟನೆ ನಿರ್ವಹಿಸಿದ ನ್ಯಾಯಮೂರ್ತಿ ರಾಜು ಎನ್ ಮಾತನಾಡಿ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕನಿಗೂ ಕಾನೂನಿನ ಅರಿವು ಅತೀ ಅಗತ್ಯ .ಈ ನಿಟ್ಟನಲ್ಲಿ ಸಮೂದಾಯದೊಂದಿಗೆ ನ್ಯಾಯಾಲಯವು ಭಾಗಿತ್ವವನ್ನು ಹೊಂದುವಂತ ಕಾರ್ಯ ವಕೀಲರ ಸಂಘಟನೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಶಾಲಾ, ಕಾಲೇಜು, ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಕಾನೂನಿನ ಅರಿವು ಮಾಡಿಸುವ ಕಾರ್ಯ ಸಂಘಟ ನಾತ್ಮಕವಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದರು. ಶಾಲಾ ಮಕ್ಕಳೊಂದಿಗೆ ಸಂವಾದ ಹಾಗೂ ರಸಪ್ರಶ್ನೆಯನ್ನು ಸಾಮಾನ್ಯ ಜ್ಞಾನದಡಿಯಲ್ಲಿ ನ್ಯಾಯಾಧೀಶರು ತಿಳಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಗಾಯತ್ರಿದೇವಿ.ಎಂ. ಮುಖ್ಯ ಶಿಕ್ಷಕರು ನಿರ್ವಹಿಸಿ ಕೊಂಡು ನ್ಯಾಯಲಯದ ನ್ಯಾಯಾಧೀಶರು, ವಕೀಲರು, ಶಾಲೆಗೆ ಬಂದು ಶಾಲಾ ಮಕ್ಕಳಿಗೆ ಕಾನೂನಿನ ಅರಿವು ನೀಡಿರುವುದು ತುಂಬಾ ಮಹತ್ತರವಾದುದು ಎಂದರು. ಇದೇ ಸಂದರ್ಭದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆದ ಸಮಾರಂಭದಲ್ಲಿ ಪಂಡಿತ್ ಜವಹರಲಾಲ ನೆಹರು ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸಲಾಯಿತು.
ಬನ್ನಾಡಿ ಸೋಮನಾಥ್ ಹೆಗ್ಡೆ ಅಧ್ಯಕ್ಷರು ವಕೀಲರ ಸಂಘ ಕುಂದಾಪುರ ಇವರು ಪ್ರಾಸ್ತವಿಕವಾಗಿ ಮಾತನಾಡಿದರು.
ಉದಯ ಕುಮಾರ್ ಶೆಟ್ಟಿ ಲಯನ್ ಸದಸ್ಯರು ಉಪಸ್ಥಿತರಿದ್ದು ಮಕ್ಕಳಿಗೆ ಶುಭಾಷಯ ಸಲ್ಲಿಸಿದರು.
ರಾಜಾರಾಮ ಶೆಟ್ಟಿ ಕಲ್ಕಟ್ಟಿ ಅಧ್ಯಕ್ಷರು ಲಯನ್ಸ ಕ್ಲಬ್ ಬನ್ನಾಡಿ – ವಡ್ಡರ್ಸೆ ಕಾರ್ಯದರ್ಶಿ ಅಜಿತ್, ವಡ್ಡರ್ಸೆ ಲಯನ್ಸ್ ಕ್ಲಬ್ ಖಜಾಂಜಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಸಾಮಾನ್ಯ ಕಾನೂನು ಮಾಹಿತಿ ಕಾರ್ಯಗಾರವನ್ನು ನ್ಯಾಯವಾದಿ ಮಂಜುನಾಥ್ ಟಿ. ಗಿಳಿಯಾರು ಉಪನ್ಯಾಸದ ಮೂಲಕ ಮಾಹಿತಿ ನೀಡಿದರು. ಹಿಂದಿ ಭಾಷಾ ಶಿಕ್ಷಕಿ ಗೀತಾ ಸ್ವಾಗತಿಸಿ ನಿರ್ವಹಿಸಿದರು. ಸಹಶಿಕ್ಷಕಿ ಭಾರತಿ ವಂದಿಸಿದರು. ಹೆರಿಯ ಮಾಸ್ಟರ್ ನಿರೂಪಿಸಿದರು. ಮಾಹಿತಿಯನ್ನು ಶಾಲಾ ಶಿಕ್ಷಕ ವೃಂದ , ವಿದ್ಯಾರ್ಥಿಗಳು ಪಡದು ಕೊಂಡರು. ತದನಂತರ ಮಕ್ಕಳ ದಿನಾಚರಣೆಯ ಪ್ರಯುಕ್ತ ವಿವಿಧ ಅದೃಷ್ಟದ ಆಟವನ್ನು ಆಡಿಸಿ ಬಹುಮಾನ ನೀಡಲಾಯಿತು.











