ಕುಂದಾಪುರ ಮಿರರ್ ಸುದ್ದಿ…
ಕೋಟ: ಸಮಾಜಮುಖಿಕಾರ್ಯದ ಜೊತೆ ಭಾಷಾಭಿಮಾನದ ಕಂಪು ಪಸರಿಸುವ ಕಾರ್ಯಕ್ರಮ ಶ್ಲಾಘನೀಯ ಎಂದು ಸಾಲಿಗ್ರಾಮ ಪ.ಪಂ ಅಧ್ಯಕ್ಷೆ ಸುಲತಾ ಹೆಗ್ಡೆ ಹೇಳಿದ್ದಾರೆ.
ಫ್ರೆಂಡ್ಸ್ ಗುಂಡ್ಮಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರತಿ ಗ್ರಾಮದಲ್ಲಿ ಸಾಮಾಜಿಕ ಬದ್ಧತೆ ಪ್ರದರ್ಶಿಸುವ ಸಂಘಸಂಸ್ಥೆಗಳು ಸೃಷ್ಠಿಯಾಗಬೇಕು ಆ ಮೂಲಕ ಗ್ರಾಮದ ಅಭಿವೃದ್ಧಿಯಲ್ಲೊ ಕೈಜೋಡಿಸುವಂತ್ತಾಗಬೇಕು ಎಂದು ಕರೆಇತ್ತರು
ಕಾರ್ಯಕ್ರಮದ ನ್ಯಾಯವಾದಿ ಮೊಹಮ್ಮದ್ ಸುಹಾನ್ ಅಧ್ಯಕ್ಷತೆಯನ್ನು ವಹಿಸಿದ್ದರು.
ನಂಚಾರು ಕಾಮಧೇನು ಗೋ ಶಾಲೆಗೆ ಮೇವು ಹಾಗೂ ಸ್ಥಳೀಯ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಸಾಧಕ ವಿದ್ಯಾರ್ಥಿನಿ ಗ್ರೀಷ್ಮಾ ಪ್ರತಿಭಾ ಪುರಸ್ಕಾರ,
ಅಂಗನವಾಡಿ ಶಿಕ್ಷಕಿ ಅಹಲ್ಯ ಟೀಚರ್ ,ಸಕು ಟೀಚರ್, ಲತಾ ಟೀಚರ್ ಇವರುಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಫ್ರಂಡ್ಸ್ ಗುಂಡ್ಮಿ ಅಧ್ಯಕ್ಷ ಜಗನಾಥ್ ಪೂಜಾರಿ,ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯ ರವೀಂದ್ರ ಕಾಮತ್, ಕ.ಸಾ.ಪ ಬ್ರಹ್ಮಾವರ ತಾಲೂಕು ಅಧ್ಯಕ್ಷ ರಾಮಚಂದ್ರ ಐತಾಳ್,ಕಾಮಧೇನು ಗೋ ಶಾಲೆ ಮುಖ್ಯಸ್ಥ ರಾಜೇಂದ್ರ ಚಕ್ಕೇರ,ಐರೋಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಮೊಸೆಸ್ ರೂಡ್ರೀಗ್ರಸ್,ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಸಿಂಧೂ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪ್ರವೀಣ್ ಗುಂಡ್ಮಿ ನಿರೂಪಿಸಿದರು.ಶಶಿಕಲಾ ವಿಜಯ್ ವಂದಿಸಿದರು.











