ಕುಂದಾಪುರ ಮಿರರ್ ಸುದ್ದಿ…
ಕೋಟ : ಇದೇ ಬರುವ ಜನವರಿ 14, 2023 ರಂದು, ಬಾಳೆಬೆಟ್ಟು ಪ್ರೆಂಡ್ಸ್ ಮತ್ತು ಭಗತ್‍ಸಿಂಗ್ ಯುವ ವೇದಿಕೆ ವತಿಯಿಂದ ಮಣೂರಿನಲ್ಲಿ ನಡೆಯುವ ಸ್ಪರ್ಶ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಮತ್ತು ಪೋಸ್ಟರನ್ನು ಕನ್ನಡ ಚಿತ್ರರಂಗದ ಖ್ಯಾತ ಚಲನಚಿತ್ರ ನಟರಾದ ರಿಷಬ್ ಶೆಟ್ಟಿಯವರಿಗೆ ಕೊಡಮಾಡಲಾಯಿತು.
ಈ ಸಂದರ್ಭದಲ್ಲಿ ಚಿತ್ರನಟ ರಿಶಬ್ ಶೆಟ್ಟಿಯವರು ಸ್ಪರ್ಶ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸ್ವರ್ಶ ಕಾರ್ಯಕ್ರಮದ ಸಂಚಾಲಕರಾದ ಹರೀಶ್ ಕುಮಾರ್ ಶೆಟ್ಟಿ ಹಾಗೂ ವಿವೇಕ್ ಅಮೀನ್ ಮತ್ತು ಕೋಟ ಅಮೃತೇಶ್ವರಿ ದೇವಸ್ಥಾನದ ಟ್ರಸ್ಟಿ ಸುಬ್ರಾಯ ಆಚಾರ್ಯ ಮಣೂರು, ಆನೆಗುಡ್ಡೆ ದೇವಸ್ಥಾನದ ಮೋಕ್ತೇಸರರು ರಮಣ್ ಉಪಾಧ್ಯಾಯ ಉಪಸ್ಥಿತರಿದ್ದರು.











