“ವ್ಯಕ್ತಿಯ ಆದರ್ಶ ಮತ್ತೆ ಹುಟ್ಟಿ ಬರುವಂತಾಗ ಬೇಕು – ಜ್ಞಾನ ವಸಂತ ಶೆಟ್ಟಿ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕೀರ್ತಿಶೇಷ ಹದ್ದೂರು ರಾಜೀವ ಶೆಟ್ಟಿ ಶತಮಾನ ಭವನ ಉದ್ಘಾಟನೆ ಮತ್ತು ಹದ್ದೂರರ ದ್ವಿತೀಯ ಪುಣ್ಯಸ್ಮರಣೆ ಕಾರ್ಯಕ್ರಮವು ಶಂಕರನಾರಯಣ ಗ್ರಾ.ಪಂ. ಅಧ್ಯಕ್ಷೆ ಲತಾ ಡಿ ಎಸ್ ಅಧ್ಯಕ್ಷತೆಯಲ್ಲಿ ನಡೆಯಿತು.

ರೋಟರಿ ಮಾಜಿ ಗವರ್ನರ್ ಜ್ಞಾನ ವಸಂತ ಶೆಟ್ಟಿಯವರು ಹದ್ದೂರು ಸಭಾಭವನವನ್ನು ಉದ್ಘಾಟಿಸಿ ಮಾತನಾಡುತ್ತಾ “ವ್ಯಕ್ತಿಯ ಆದರ್ಶ ಮತ್ತೆ ಹುಟ್ಟಿ ಬರುವಂತಾಗ ಬೇಕು” ಎಂದು ಅಭಿಪ್ರಾಯ ಪಟ್ಟರು.
ಸಭಾ ಕಾರ್ಯಕ್ರಮವನ್ನು ಕೆ ಎಮ್ ಎಫ್ ನಿರ್ಧೇಶಕ ಹಾಗೂ ಮಾಜಿ ಅಧ್ಯಕ್ಷ ರವಿರಾಜ್ ಹೆಗ್ಡೆಯವರು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು.
ಶ್ರೀ ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಪ್ರೌಢ ಶಾಲಾ ಕನ್ನಡ ಶಿಕ್ಷಕರಾದ ಪ್ರಭಾಕರ ಶೆಟ್ಟಿ ಕೊಂಡಳ್ಳಿಯವರು ಹದ್ದೂರು ರಾಜೀವ ಶೆಟ್ಟರ ದ್ವಿತೀಯ ಪುಣ್ಯ ಸಂಸ್ಮರಣೆಯ ಅಂಗವಾಗಿ ಹದ್ದೂರರಿಗೆ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ರವಿರಾಜ್ ಹೆಗ್ಡೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ಥಿ ಪುರಸ್ಕೃತ ಜಾನಕಿ ಹಂದೆ ಮತ್ತು ಹಿರಿಯರಾದ ದೋಣಿ ನಾವಿಕರಾದ ಅಣ್ಣಪ್ಪನವನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಶಾಲೆಗೆ ರೂಪಾಯಿ ಆರು ಲಕ್ಷ ವೆಚ್ಚದಲ್ಲಿ ಕೀರ್ತಿಶೇಷ ಹದ್ದೂರು ರಾಜೀವ ಶೆಟ್ಟಿ ಶತಮಾನ ಭವನವನ್ನು ನಿರ್ಮಿಸಿ ಕೊಟ್ಟ ಹದ್ದೂರರ ಧರ್ಮ ಪತ್ನಿ ಮಮತಾ ಆರ್ ಶೆಟ್ಟಿಯವರನ್ನು ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಜಯಕರ ಶೆಟ್ಟಿ ಮೂಡುಬೈಲೂರು ಇವರು ಸನ್ಮಾನಿಸಿದರು.
ಹದ್ದೂರು ಕುಟುಂಬದವರು. ವಿಕಲಚೇತನ ಮಗು ರವಿಕುಮಾರನಿಗೆ ಗಾಲಿ ಕುರ್ಚಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಶಾಲಾ ಮಕ್ಕಳಿಗೆ ನೋಟ್ ಪುಸ್ತಕವನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ.ಅಧ್ಯಕ್ಷ ಸಂತೋಷ್ ಕುಮಾರ್, ಪ್ರಭಾಕರ ಕುಂಭಾಶಿ(ಎ.ಜೆ), ಶಂಕರನಾರಾಯಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಚ್ವಿದಾನಂದ ವೈದ್ಯ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಜಯಕರ ಶೆಟ್ಟಿ, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಶೆಶಿಧರ ಶೆಟ್ಟಿ, ಪ್ರಭಾಕರ್ ಶೆಟ್ಟಿ , ರೋಟರಿ ಮಾಜಿ ಅಧ್ಯಕ್ಷ ದಯಾನಂದ ರಾವ್ ಉಪಸ್ಥಿತರಿದ್ದರು.
ಸಹ ಶಿಕ್ಷಕಿ ಸಂದ್ಯಾ ಕೆ. ಮತ್ತು ಶ್ನಾರಾಯಣ ಅಡಿಗ ವಿಜ್ಞಾನ ಪದವೀಧರ ಶಿಕ್ಷಕರು ಸನ್ಮಾನ ಪತ್ರ ವಾಚಿಸಿದರು.
ಮಮತಾ ಆರ್ ಶೆಟ್ಟಿ ಪ್ರಸ್ತಾವನೆಗೈದರು. ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಡಿ ಸ್ವಾಗತಿಸಿದರು. ಸಹಶಿಕ್ಷಕ ಆನಂದ ಕುಲಾಲ ವಂದಿಸಿದರು ಸಹ ಶಿಕ್ಷಕ ಸಂತೋಷ ಕಾರ್ಯಕ್ರಮ ನಿರೂಪಿಸಿದರು.











