ಕೋಟ ಸಿ.ಎ. ಬ್ಯಾಂಕ್‍ನ ಸಭಾಭವನ, ಗೋದಾಮು, ಸೇವಾ ಕೇಂದ್ರ ಉದ್ಘಾಟನೆ
ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ಸಹಕಾರಿ ವ್ಯವಸಾಯಿಕ ಸಂಘದ ಪ್ರಧಾನ ಕಚೇರಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ನೂತನ ಸಭಾಭವನ, ಗೋದಾಮು ಮತ್ತು ಸೇವಾ ಕೇಂದ್ರದ ಉದ್ಘಾಟನೆ ಡಿ.11ರಂದು ನೆರವೇರಿತು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸಭಾಭವನ, ಪಡಿತರ ಗೋದಾಮು ಉದ್ಘಾಟಿಸಿ ಮಾತನಾಡಿ ಕೋಟ ಸಿ.ಎ. ಬ್ಯಾಂಕ್ ರೈತರು, ಬಡವರು ಮಧ್ಯಮ ವರ್ಗದವರ ಬದುಕನ್ನು ಬೆಳಗಿಸಿದ ಸಂಸ್ಥೆಯಾಗಿದೆ,ಇದರ ಸಾಧನೆ ಬಹು ಎತ್ತರಕ್ಕೆ ಬೆಳೆದಿದೆ. ಅಂದು ಕಂಡ ಸಹಕಾರಿ ಸಂಘ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ, ಇದೊಂದು ಇತರ ಸಹಕಾರಿ ಸಂಘಗಳಿಗೆ ಮಾದರಿ ಸಂಘ ಎಂದರೆ ಅತಿಶಯೋಕ್ತಿಯಲ್ಲ, ರೈತಾಪಿ ವರ್ಗದ ಪಾಲಿನ ಆಶಾಕಿರಣ ಸಂಸ್ಥೆಯಾಗಿದೆ ಎಂದು ಇದರ ಕಾರ್ಯವೈಕರಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ದ.ಕ. ಜಿ . ಕೇಂದ್ರ ಸ. ಬ್ಯಾಂಕ್ ನಿರ್ದೇಶಕ ಡಾ| ದೇವಿಪ್ರಸಾದ್ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಕಿ ಹಂದೆ, ರಾಘವೇಂದ್ರ ಶೆಟ್ಟಿ, ಮಾಜಿ ಸಿ.ಇ.ಒ. ಶ್ರೀಧರ ಸೋಮಯಾಜಿ, ಇಂಜಿನಿಯರ್ ಚೇತನ್, ಗುತ್ತಿಗೆದಾರ ಸಂತೋಷ್ ಕೋಟ, ಪವರ್ ಲಿಪ್ಟಿಂಗ್‍ನಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿದ ಕಾರ್ತಿಕ್ ಅವರನ್ನು ಸಮ್ಮಾನಿಸಲಾಯಿತು ಹಾಗೂ ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿಯವರನ್ನು ಸ್ಥಳೀಯ ಕೋಟ ಪಂಚವರ್ಣ ಯುವಕ ಮಂಡಲ ಸಂಘ ರಜತ ಗೌರವಾರ್ಪಣೆ ಸಲ್ಲಿಸಿತು ಹಾಗೂ ಸಹಕಾರಿ ಸಂಘದ ಸಿಬಂದಿಗಳ ವತಿಯಿಂದ ಗೌರವಿಸಲಾಯಿತು.
ಉಡುಪಿ ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ ಶಿವರಾಮ ಉಡುಪ, ಕೋಟ ಗ್ರಾ.ಪಂ. ಅಧ್ಯಕ್ಷ ಅಜಿತ್ ದೇವಾಡಿಗ, ಸಾಲಿಗಾಮ ಗುರುನರಸಿಂಹ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಸ್ ಕಾರಂತ್ ಹಾಗೂ ಕೋಟ ಸಹಕಾರಿ ವ್ಯಾವಸಾಯಿಕ ಸಂಘದ ಉಪಾಧ್ಯಕ್ಷ ರಾಜು ದೇವಾಡಿಗ, ನಿರ್ದೇಶಕರಾದ ಡಾ| ಕೃಷ್ಣ ಕಾಂಚನ್, ಕೆ. ಉದಯ ಕುಮಾರ ಶೆಟ್ಟಿ, ಮಹೇಶ ಶೆಟ್ಟಿ ಎಮ್., ರವೀಂದ್ರ ಕಾಮತ್, ರಾಜೇಶ ಉಪಾಧ್ಯ, ಎಚ್. ನಾಗರಾಜ ಹಂದೆ, ರಂಜಿತ್ ಕುಮಾರ್, ಗೀತಾ ಶಂಭು ಪೂಜಾರಿ, ಪ್ರೇಮ ಎಸ್., ರಶ್ಮಿತಾ, ಕೆ. ಶ್ರೀಕಾಂತ ಶೆಣೈ, ಭಾಸ್ಕರ ಶೆಟ್ಟಿಮಣೂರು, ಶ್ರೀ ಅಚ್ಚುತ ಪೂಜಾರಿ ಕಾರ್ಕಡ, ವಸಂತ್ ಶೆಟ್ಟಿ, ಮಾಜಿ ಸಿ.ಇ.ಒ. ಶೋಭಾ ಶೆಟ್ಟಿ, ಎ.ಸಿ.ಇ.ಒ. ಕುಮಾರ್,
ವಲಯ ಮೇಲ್ವಿಚಾರಕರು ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ರಾಜಾರಾಮ ಶೆಟ್ಟಿ, ಸಂಸ್ಥೆಯ ಮಾಜಿ ಅಧ್ಯಕ್ಷ ಭೋಜ ಹೆಗ್ಡೆ, ವಿವಿಧ ಸಹಕಾರಿ ಸಂಸ್ಥೆಗಳ ಅಧ್ಯಕ್ಷರಾದ ಕೊರಗ ಪೂಜಾರಿ, ಹಾವಂಜೆ ರಮೇಶ್ ಶೆಟ್ಟಿ, ಸುಧೀರ್ ಕುಮಾರ್ ಶೆಟ್ಟಿ ಹಾಗೂ ಸಮಾಜಸೇವಕ ಬಡಾಮನೆ ರತ್ನಾಕರ ಶೆಟ್ಟಿ,ಗೆಳೆಯರ ಬಳಗದ ತಾರಾನಾಥ್ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.
ನಿರ್ದೇಶಕ ಟಿ. ಮಂಜುನಾಥ ಕಾರ್ಯಕ್ರಮ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು, ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟ ವರದಿ ವಾಚಿಸಿದರು. ದೈ.ಶಿ.ಶಿಕ್ಷಕ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು,ಸಂಘದ ಸಿಬ್ಬಂದಿ ಶಾಲಿನಿ ವಂದಿಸಿದರು.ನಂತರ ಸಾಂಸ್ಕ್ರತಿಕ ಕಾರ್ಯಕ್ರಮದ ಭಾಗವಾಗಿ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಭೀಷ್ಮ ವಿಜಯ ಯಕ್ಷಗಾನ ಪ್ರದರ್ಶನ ಹಾಗೂ ಸಂಗದ ಸಿಬ್ಬಂದಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.











