ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಲ್ಲಿ ಹೆಚ್ಚಾಗಿ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಪಾಶ್ರ್ವವಾಯುನಂತಹ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ನಮ್ಮ ಜೀವನದಲ್ಲಿ ನಾವು ಮಾಡುವ ಅನೇಕ ತಪ್ಪುಗಳಿಂದ ನಮಗೆ ಬರುವ ವಿವಿಧ ಕಾಯಿಲೆಗಳು ಜೀವನ ಶೈಲಿಯ ಕಾಯಿಲೆಗಳಾಗಿರುತ್ತವೆ ಇದರಿಂದ ನಮ್ಮ ಜೀವನ ಹಾಗೂ ಜೀವಿತಾವಧಿ ಕುಂಠಿತವಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸಂಸ್ಥೆಯ ಎನ್ಎಸ್ಎಸ್ ಕಾರ್ಯಕ್ರಮಾ ಅಧಿಕಾರಿ ಉದಯ ಮಡಿವಾಳ ಎಂ ಇವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅವರು ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿನ ಬೋರ್ಡ್ ಹೈಸ್ಕೂಲ್ ನಲ್ಲಿ ಬ್ಯಾರಿಸ್ ಶಿಕ್ಷಣ ಸಂಸ್ಥೆ ಕೋಡಿ ಇಲ್ಲಿನ ಬಿ,ಎಡ್ ಪ್ರಶಿಕ್ಷಣಾರ್ಥಿಗಳ ಸೇವಾ ಪೂರ್ವ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮವನ್ನು ಸಂಸ್ಥೆಯ ಉಪಪ್ರಾಂಶುಪಾಲರಾದ ಕಿರಣ್ ಹೆಗ್ಡೆ ಯವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ವಿವಿಧ ಮನೋಲ್ಲಾಸ ಕ್ರೀಡೆಗಳು ಹಾಗೆ ವಿವಿಧ ಪಠ್ಯ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಬಹುಮಾನ ತರ ಪಟ್ಟಿಯನ್ನು ಮೇಘ ಇವರು ವಾಚಿಸಿದರು ಸಂಸ್ಥೆಯಲ್ಲಿ ತಾವು ಕಳೆದ 50 ದಿನಗಳಲ್ಲಿ ಆದ ಅನುಭವವನ್ನು ಪ್ರಶಿಕ್ಷಣಾರ್ಥಿ ವಿನಿತ ಸಭೆಯಲ್ಲಿ ಹಂಚಿಕೊಂಡರು ಬಿಎಡ್ ಪ್ರಶಿಕ್ಷಣಾರ್ಥಿಗಳಾದ ಪೂಜಾ ಕಾರ್ಯಕ್ರಮವನ್ನು ನಿರೂಪಿಸಿ, ಶುಬ್ರತಾ ಸ್ವಾಗತಿಸಿ, ವಂದನ ವಂದಿಸಿದರು.











