ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: 2023ರ ಫೆಬ್ರುವರಿ 20ರಂದು ಶ್ರೀ ರಾಮ ಭಜನಾ ಮಂದಿರ ಹೊಸಹಿತ್ಲು ನಾಗೂರು ಇದರ ಸುವರ್ಣ ಮಹೋತ್ಸವದ “ವಿರಾಟ್ ಮಹಾಯಜ್ಞ ಸಂಗಮ”ಸೀತಾ ರಾಮಚಂದ್ರ ಕಲ್ಯಾಣೋತ್ಸವ,ಕೋಟಿ ರಾಮನಾಮ ತಾರಕ ಜಪಯಜ್ಞ, ಸಮುದ್ರ ಆರತಿ ಹಾಗೂ ಅಖಂಡ ಭಜನಾ ಮಹೋತ್ಸವದ ಚಪ್ಪರ ಮುಹೂರ್ತ ಕಾರ್ಯಕ್ರಮ ನಡೆಯಿತು.
ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಸುವರ್ಣ ಮಹೋತ್ಸವ ಸಮಿತಿ ಸದಸ್ಯರ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ, ಡಾ.ಎ.ಚೆನ್ನಕೇಶವ ಗಾಯತ್ರಿ ಭಟ್ ಇವರ ಪೌರೋಹಿತ್ಯದಲ್ಲಿ ಅಡಿಕೆ ಮರ ನೆಡುವುದರ ಮೂಲಕ ಚಪ್ಪರ ಮುಹೂರ್ತ ಕಾರ್ಯ ನಡೆಯಿತು.











