ಕುಂದಾಪುರ :ರೈತ ಸಂಘಟನೆಗಳಿಗೆ ರೈತರ ಸಮಸ್ಯೆಗಳ ಅರಿವಿರಬೇಕು-ಜಯಶೀಲ ಶೆಟ್ಟಿ

0
538

Click Here

Click Here

ಉಡುಪಿ ಜಿಲ್ಲಾ ರೈತ ಸಂಘ ರಾಷ್ಟ್ರೀಯ ರೈತ ದಿನಾಚರಣೆ

ಕುಂದಾಪುರ ಮಿರರ್ ‌ಸುದ್ದಿ…
ಕುಂದಾಪುರ :ರೈತ ಸಂಘಟನೆಗಳಿಗೆ ರೈತರ ಸಮಸ್ಯೆಗಳ ಅರಿವಿರಬೇಕು. ರಾಜಕೀಯ ಹೊರತು ಪಡಿಸಿ ಮುನ್ನೆಡೆದಾಗ ಯಶಸ್ವಿಯಾಗುತ್ತದೆ. ಉಡುಪಿ ಜಿಲ್ಲಾ ರೈತ ಸಂಘ ಪ್ರಾಮಾಣಿಕ, ಶಕ್ತಿಯುತ ನಾಯಕ ಕೆ.ಪ್ರತಾಪಚಂದ್ರ ಶೆಟ್ಟರ ನೇತೃತ್ವದಲ್ಲಿ ಸಮರ್ಥವಾಗಿ ಮುನ್ನೆಡೆಯುತ್ತಿದೆ ತೋಟಗಾರಿಕೆ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಜಯಶೀಲ ಶೆಟ್ಟಿ ಹೇಳಿದರು.

ಅವರು ಉಡುಪಿ ಜಿಲ್ಲಾ ರೈತ ಸಂಘ ರಿ., ನೇತೃತ್ವದಲ್ಲಿ ಡಿ.23 ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾಜಿ ಪ್ರಧಾನಿ ಚೌದರಿ ಚರಣ್ ಸಿಂಗ್ ್ಲ ರೈತರ ಬಗ್ಗೆ ಗರಿಷ್ಠ ಕಾಳಜಿಯನ್ನು ಎತ್ತಿ ಹಿಡಿದವರು. ಲಾಲ್ ಬಹದ್ದೂರ್ ಶಾಸ್ತ್ರೀಯವರು ಕೂಡಾ ರೈತರ ಬಗ್ಗೆ ಪ್ರಾಮಾಣಿಕ ಪ್ರಯತ್ನ ಪಟ್ಟಿರುವುದು ಸ್ಮರಿಸಲೇಬೇಕು ಎಂದರು.

Click Here

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಪ್ರತಾಪಚಂದ್ರ ಶೆಟ್ಟಿ ಮಾತನಾಡಿ ಎಲ್ಲಾ ಸರಕಾರಗಳು ಜನಪರವಾಗಿ, ರೈತರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಟಾನಿಸುತ್ತಿವೆಯಾದರೂ ರೈತರ ಕಡೆಗಣನೆ ಆಗುತ್ತಿದೆ ಎನ್ನುವ ವಿಚಾರವೂ ಹೌದು. ಸೌಲಭ್ಯಗಳು ದೊರೆಯುತ್ತಿವೆಯಾದರೂ ಸಮರ್ಪಕವಾಗಿ ಅದು ಆರ್ಹ ರೈತರಿಗೆ ತಲುಪುತ್ತಿಲ್ಲ ಎನ್ನುವ ಅಸಮಾಧಾನವೂ ಇದೆ. ಪ್ರಾಮಾಣಿಕವಾಗಿ ಭತ್ತ ಬೆಳೆದ ರೈತನಿಗೆ ಬೆಂಬಲ ಬೆಲೆ ಪ್ರಯೋಜನ ಸಿಗುತ್ತಿಲ್ಲ. ಹಿಂದೆ ಗ್ರಾಮ ಮಟ್ಟಕೊಬ್ಬರು ಗ್ರಾಮಸೇವಕರು ಇದ್ದರು. ಈಗ ಅದು ಹೋಬಳಿಗೊಂದು ಆಗಿದೆ. ಕಾಡುಪ್ರಾಣಿಗಳ ಉಪಟಳ, ಕೋತಿಗಳ ಹಾವಳಿ ಇತ್ಯಾದಿ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳದೆ ಇರುವುದು ರೈತರಲ್ಲಿ ನಿರಾಸಕ್ತಿ ಮೂಡಿಸುತ್ತದೆ. ರೈತರು ಸರಿಯಾಗಿ ಪ್ರೋತ್ಸಾಹಿಸದೆ ಇದ್ದರೆ ರೈತರು ಕೃಷಿಕ್ಷೇತ್ರದಿಂದ ಕಾಣೆಯಾಗುವ ಭೀತಿ ಇದೆ ಎಂದರು.

ಇವತ್ತು ಕಿಂಡಿ ಅಣೆಕಟ್ಟುಗಳು ರೈತರನ್ನು, ಹಳ್ಳಗಳನ್ನು ಹುಡುಕಿಕೊಂಡು ಬರುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಾದರೂ ಆ ಕಿಂಡಿ ಅಣೆಕಟ್ಟು ನಿರ್ಮಾಣವಾಗುವುದನ್ನು ಸ್ಥಳೀಯ ರೈತರು ಗಮನಿಸಬೇಕು. ಕಳಪೆಯಾಗಿ ನಿರ್ಮಾಣವಾದರೆ ಮುಂದೆ ಅದರಲ್ಲಿ ನೀರು ನಿಲ್ಲದೇ ವ್ಯರ್ಥವಾದಾಗ ರೈತ ಪಶ್ಚಾತ್ತಾಪ ಪಡಬೇಕಾಗುತ್ತದೆ. ನಿರ್ಮಾಣ ಸಂದರ್ಭದಲ್ಲಿ ರೈತರ ಕಾಳಜಿಯೂ ಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾರತೀಯ ಕಿಸಾನ್ ಸಂಘದ ಕುಂದಾಪುರ ತಾಲೂಕು ಅಧ್ಯಕ್ಷರಾದ ಸೀತಾರಾಮ ಗಾಣಿಗ ಭಾಗವಹಿಸಿದ್ದರು. ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ದ,ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಂ.ಮಹೇಶ ಹೆಗ್ಡೆ, ಜಯರಾಮ ಶೆಟ್ಟಿ ಸುರ್ಗೊಳಿ, ಸಂಜೀವ ಶೆಟ್ಟಿ ಸಂಪಿಗೇಡಿ, ದೀನಪಾಲ ಶೆಟ್ಟಿ, ರೈತ ಸಂಘದ ಎಲ್ಲ ವಲಯಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉದಯಕುಮಾರ ಶೆಟ್ಟಿ, ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ಡಾ|ಅತುಲ್ ಕುಮಾರ್ ಶೆಟ್ಟಿ ಚಿತ್ತೂರು, ವಂಡ್ಸೆ ವಲಯ, ಪ್ರಗತಿಪರ ಕೃಷಿಕ ಬಸವ ರಾಜ್ ಪೂಜಾರಿ ಕೊರವಡಿ, ಬೀಜಾಡಿ ವಲಯ, ಸಮಗ್ರ ಕೃಷಿ ಸಾಧಕ ಚಿತ್ತರಂಜನ್ ರಾವ್ ಹಾಲಾಡಿ ವಲಯ, ಚಂದ್ರಶೇಖರ ಉಡುಪ ಮಸ್ವಾಡಿ, ಕಾವ್ರಾಡಿ ವಲಯ, ಪ್ರಗತಿಪರ ಕೃಷಿಕ ಜಯಕರ ಶೆಟ್ಟಿ, ಮಂದರ್ತಿ ವಲಯ, ಮಲ್ಲಿಗೆ ಕೃಷಿ ಸಾಧಕಿ ಲಲಿತಾ ಶೆಟ್ಟಿ ಕೋಟೇಶ್ವರ ವಲಯ, ಕೃಷಿ, ಹೈನುಗಾರಿಕೆ, ಸಹಕಾರಿ ಸಾಧಕ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಕಂಬದಕೋಣೆ ವಲಯ, ಕೃಷಿ, ಸಮಾಜ ಸೇವೆಯಲ್ಲಿ ಪ್ರಸಾದ್ ಹೆಗ್ಡೆ ಹೆಬ್ರಿ ವಲಯ, ಪ್ರಗತಿಪರ ಕೃಷಿಕ ಬಿ.ರತ್ನಾಕರ ಶೆಟ್ಟಿ ಸಿದ್ಧಾಪುರ ವಲಯ, ಪ್ರಗತಿಪರ ಕೃಷಿಕ ಸುಕೇಶ ಶೆಟ್ಟಿ ಬೈಂದೂರು ವಲಯ, ಹೈನುಗಾರರಾದ ಸತೀಶ ಶೆಟ್ಟಿ ಪೆರ್ಡೂರು ವಲಯ, ಪ್ರಗತಿಪರ ಕೃಷಿಕ ವೆಂಕಟ ಪೂಜಾರಿ ತ್ರಾಸಿ ವಲಯ ಇವರುಗಳನ್ನು ಸನ್ಮಾನಿಸಿಲಾಯಿತು.

ಈ ಸಂದರ್ಭದಲ್ಲಿ ರೈತ ಸಂಘದ 2023ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ವೆ ಸತೀಶ್ ಕಿಣಿ ಸ್ವಾಗತಿಸಿ, ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ವಿಕಾಸ್ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಡುಪಿ ಜಿಲ್ಲಾ ರೈತ ಸಂಘದ ಅಶೋಕ್ ಶೆಟ್ಟಿ ಚೋರಾಡಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

Click Here

LEAVE A REPLY

Please enter your comment!
Please enter your name here