ಜಿಲ್ಲಾಧಿಕಾರಿ ಜಿ.ಜಗದೀಶ್ ವರ್ಗಾವಣೆ: ನೂತನ ಜಿಲ್ಲಾಧಿಕಾರಿಯಾಗಿ ಕೂರ್ಮ ರಾವ್ ನೇಮಕ

0
624

Click Here

Click Here

ಕುಂದಾಪುರ ಮಿರರ್ ಸುದ್ದಿ
ಉಡುಪಿ
: ಕಳೆದ 2 ವರ್ಷಗಳಿಂದ ಉಡುಪಿಯ ಜಿಲ್ಲಾಧಿಕಾರಿ ಆಗಿ ಸೇವೆ ಸಲ್ಲಿಸುತಿದ್ದ ಜಿ. ಜಗದೀಶ್ ಅವರನ್ನು ಭಾನುವಾರದಂದು ಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಎಂಡಿ ಅಗಿ ಕಾರ್ಯನಿರ್ವಹಿಸುತಿದ್ದ ಕುರ್ಮಾ ರಾವ್(ಐಎಎಸ್) ಇವರನ್ನು ಉಡುಪಿಯ ನೂತನ ಜಿಲ್ಲಾಧಿಕಾರಿ ಆಗಿ ಸರಕಾರ ನೇಮಿಸಿದೆ. ಜಿ. ಜಗದೀಶ್ ರವರನ್ನು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಕಳೆದ 2 ವರ್ಷಗಳಿಂದ ಜಿ. ಜಗದೀಶ್ ಉಡುಪಿಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಜನಸ್ನೇಹಿಯಾಗಿದ್ದರು. ಕೊರೊನಾ ಸಂಧರ್ಭದಲ್ಲಿ ಜಿಲ್ಲೆಯ ಜನತೆಯ ಆತ್ಮ ಸ್ಥೈರ್ಯವನ್ನು ಹೆಚ್ಚಿಸುವ ಸಲುವಾಗಿ ಜನರೊಂದಿಗೆ ನೇರ ಸಂಪರ್ಕವನ್ನು ಇರಿಸಿಕೊಂಡಿದ್ದರು. ಜನ ಸಾಮಾನ್ಯರೂ ಕೂಡಾ ನೇರವಾಗಿ ಜಿಲ್ಲೆಯ ಜಿಲ್ಲಾದಿಕಾರಿಗಳನ್ನು ಭೇಟಿಯಾಗುವ ಅವಕಾಶವನ್ನುಜಿ.ಜಗದೀಶ್ ಅವರು ಕಲ್ಪಿಸಿದ್ದರು.ಕೊರೊನಾ ಮೊದಲನೆ ಮತ್ತು ಎರಡನೆ ಅಲೆಯನ್ನು ಸಮರ್ಥವಾಗಿ ನಿರ್ವಹಿಸಲು ಜಿಲ್ಲಾಧಿಕಾರಿಯಾಗಿ ಯಶಸ್ವಿಯಾಗಿದ್ದರು.

Click Here

ಪ್ರಸ್ತುತ ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಐಎಎಸ್ ಶ್ರೇಣಿಯ ಕುರ್ಮಾ ರಾವ್(ಐಎಎಸ್) ರಾವ್ ಇವರನ್ನು ನೂತನ ಜಿಲ್ಲಾಧಿಕಾರಿ ಆಗಿ ನೇಮಕ ಮಾಡಿದ್ದು ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ನೀಡಲಾಗಿದೆ.

Click Here

LEAVE A REPLY

Please enter your comment!
Please enter your name here