ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಸದ್ಗುರು ಮಹಿಳಾ ವೇದಿಕೆ ಪಾಂಡೇಶ್ವರ ಸಾಸ್ತಾನ. ಇದರ ಮಹಿಳಾ ಸದಸ್ಯರು ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠದ ಗೋಶಾಲೆಗೆ ಶ್ರಮದಾನದ ಮೂಲಕ ಹಸಿ ಹುಲ್ಲುಗಳನ್ನು ನೀಡಿದರು.


ಶ್ರೀ ಮಠದ ಪೂಜ್ಯ ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಮಹಿಳಾ ಸದಸ್ಯರಿಗೆ ಆಶೀರ್ವಾದಿಸಿ ಶ್ರೀ ದೇವರ ಪ್ರಸಾದ ವನ್ನು ನೀಡಿ ಮಾತನಾಡಿ ಗೋ ಸೇವೆ ಜಗತ್ತಿನಲ್ಲಿ ಎಲ್ಲವುದಕ್ಕಿಂತ ಶ್ರೇಷ್ಠತೆ ಹೊಂದಿದೆ ಅಂತಹ ಗೋ ಮಾತೆ ಸೇವೆ ನಿರಂತರವಾಗಿ ಕೈಗೊಳ್ಳಿ ಪ್ರತಿಫಲ ತಾನಾಗಿಯೇ ಸಿಗುತ್ತದೆ ಎಂದು ಆಶ್ರ್ರೀವಚಿಸಿದರು. ಈ ಸಂದರ್ಭದಲ್ಲಿ ಶ್ರೀ ಮಠದ ಮ್ಯಾನೇಜರ್ ಮಂಜುನಾಥ್ ಭಟ್, ಶ್ರೀ ಸದ್ಗುರು ಮಹಿಳಾ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಉಷಾ ಗಣೇಶ್ ಪೂಜಾರಿ. ಉಪಾಧ್ಯಕ್ಷರಾದ ಪೂರ್ಣಿಮಾ ಸುದರ್ಶನ್ ಜೊತೆ ಕೋಶಾಧಿಕಾರಿ ಆಶಾ ವಸಂತ ಮತ್ತಿತರರು ಉಪಸ್ಥಿತರಿದ್ದರು.
ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠಕ್ಕೆ ಶ್ರೀ ಸದ್ಗುರು ಮಹಿಳಾ ವೇದಿಕೆ ಪಾಂಡೇಶ್ವರ ಸಾಸ್ತಾನ ಇದರ ಮಹಿಳಾ ಸದಸ್ಯರು ಶ್ರಮದಾನದ ಮೂಲಕ ಅಲ್ಲಿನ ಗೋ ಶಾಲೆಗೆ ಮೇವು ಹಸ್ತಾಂತರಿಸಿದರು. ಶ್ರೀ ಮಠದ ಪೂಜ್ಯ ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಆಶ್ರ್ರೀವಚಿಸಿದರು. ಶ್ರೀ ಸದ್ಗುರು ಮಹಿಳಾ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಉಷಾ ಗಣೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಕೋಟ.ಆ29 ಬಾಳೆಕುದ್ರು ಮಠಕ್ಕೆ ಮೇವು ಹಸ್ತಾಂತರ











