ಉಡುಪಿ :ಸ್ವಾತಂತ್ರ್ಯ ಹೋರಾಟಗಾರ ಕೆ.ದಾಸ ಸೇರಿಗಾರ್ ಮನೆಗೆ ನಾಮಫಲಕ ಅನಾವರಣ

0
288

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಜ. 1 ರಂದು ಉಡುಪಿ ತಾಲೂಕು ಶಿರಿಬೀಡು ಪಂಚಾಯತ್ ವ್ಯಾಪ್ತಿಯ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಕೆ.ದಾಸ ಸೇರಿಗಾರ್ ಇವರ ಮನೆಗೆ ನಾಮ ಫಲಕ ಅಳವಡಿಸಲಾಯಿತು.

“ಸ್ವರಾಜ್ಯ ೭೫” 22ನೇ ಮನೆ ಯಲ್ಲಿ ರಾಷ್ಟ್ರೀಯ ಚಿಂತನೆಯ ಲೇಖಕರು ಪ್ರಖರ ವಾಗ್ಮಿಯಾಗಿರುವ ಪ್ರಕಾಶ್ ಮಲ್ಪೆ ಯೋಂದಿಗೆ ದಾಸ್ ಸೇರಿಗಾರ್ ಒಡನಾಟ ಹೊಂದಿರುವ ಸಂಜೀವ ಸೇರಿಗಾರ್ ಇವರು ನಾಮ ಫಲಕ ಅನಾವರಣ ನೆರವೇರಿಸಿ ಮಾತನಾಡಿದರು.

ರಾಷ್ಟ್ರ ಧ್ವಜಕ್ಕೆ ಪುಷ್ಪಾರ್ಚನೆಯ ಮೂಲಕ ಸೀತಾರಾಮ ಕೆ. ದೇವಾಡಿಗ ಚಾಲನೆ ನೀಡಿದರು.

Click Here

ರವೀರಾಜ್ ಎಚ್.ಪಿ ಕ.ಸಾ.ಪ ಉಡುಪಿ ತಾಲೂಕು ಅಧ್ಯಕ್ಷರು, ಹಾಗೂ ಲಕ್ಷ್ಮೀಕಾಂತ್ ಬೆಸ್ಕೂರು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಅಧ್ಯಕ್ಷರಾಗಿ ಎಮ್.ಎಸ್.ಆರ್.ಎಸ್.ಕಾಲೇಜು ಶಿವ೯ ಪ್ರೋ. ಮುರುಗೇಶ .ಟಿ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿಗರ ಕೊಡುಗೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

ಸ್ವರಾಜ್ಯ75 ಸಂಘಟನೆಯ ನೇತ್ರತ್ವದಲ್ಲಿ, ಎಮ್
.ಎಸ್.ಆರ್ ಎಸ್ ಕಾಲೇಜು ಶಿರ್ವ ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕ , ಜನ ಸೇವಾ ಟ್ರಸ್ಟ್ ಮೂಡುಗಿಳಿಯಾರು,ಉಸಿರು ಕೋಟ,ಹಸ್ತ ಚಿತ್ತ ಫೌಂಡೇಶನ್, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಉಡುಪಿ ತಾಲೂಕು ಘಟಕ, ಕುಟುಂಬಸ್ಥರು ,ಗಣೇಶ್ ದೇವಾಡಿಗ ಬಾರಕೂರು,ಪ್ರದೀಪ ದೇವಾಡಿಗ ಬಾರಕೂರು ಗ್ರಾಮಸ್ಥರ ಸಹಕಾರದಿಂದ ಕಾಯ೯ಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರಾದ ಯು.ಶಿವಾನಂದ ಸೇರಿಗಾರ್ ಮತ್ತಿತ್ತರ ಗಣ್ಯರು ಉಪಸ್ಧಿತರಿದ್ದರು.

ಕಾರ್ಯಕ್ರಮ ನಿರೂಪಣೆ ಅನುಷ ಶೆಟ್ಟಿ ಇಡೂರು ,ಪ್ರಾಸ್ತಾವಿಕವನ್ನು ಸ್ವರಾಜ್ಯ ೭೫ ಕಾರ್ಯಕ್ರಮ ಸಂಚಾಲಕರು ಆಗಿರುವ ಪ್ರದೀಪ
ಕುಮಾರ್ ಬಸ್ರೂರು ನಡೆಸಿದರು. ದಿಶಾಂತ್ ವಂದಿಸಿದರು.

Click Here

LEAVE A REPLY

Please enter your comment!
Please enter your name here