Category: ಸಿನೆಮಾ

  • “ರಕ್ಕಿ” ಚಿತ್ರದ ಮೊದಲ ಹಾಡು “ರಗಡೋ ರಕ್ಕಿ” ಬಿಡುಗಡೆ.

    “ರಕ್ಕಿ” ಚಿತ್ರದ ಮೊದಲ ಹಾಡು “ರಗಡೋ ರಕ್ಕಿ” ಬಿಡುಗಡೆ.

    ನಾಯಕನ ಹೆಸರೆ ಸಿನಿಮಾ ಶೀರ್ಷಿಕೆಯಾಗಿರುವುದು ವಿಶೇಷ

    ರಾಘವೇಂದ್ರ ಅಡಿಗ ಎಚ್ಚೆನ್.

    ಬೆಂಗಳೂರು :ಬಹು ನಿರೀಕ್ಷಿತ “ರಕ್ಕಿ” ಚಿತ್ರದ “ರಗಡೋ ರಕ್ಕಿ” ಹಾಡು ಇತ್ತೀಚೆಗೆ PRK Audio ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಯುವಜನತೆ ಹಾಗೂ ಸಂಗೀತ ಪ್ರೇಮಿಗಳಲ್ಲಿ ಭಾರೀ ಸಂಚಲನ ಮೂಡಿಸಿರುವ ಈ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಇದು “ರಕ್ಕಿ” ಚಿತ್ರದ ಮೊದಲ ಗೀತೆಯಾಗಿದೆ.

    ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿರುವ ರಕ್ಕಿ ಸುರೇಶ್, ಈ ಹಾಡಿನಲ್ಲಿ ತಮ್ಮ ಎನರ್ಜಿಟಿಕ್ ಸ್ಕ್ರೀನ್ ಪ್ರೆಸೆನ್ಸ್, ಸ್ಟೈಲಿಶ್ ಲುಕ್ ಹಾಗೂ ಅದ್ಭುತ ಡ್ಯಾನ್ಸ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಭರ್ಜರಿ ನೃತ್ಯ ಸಂಯೋಜನೆ ಹಾಗೂ ಕಲರ್‌ಫುಲ್ ದೃಶ್ಯಗಳೊಂದಿಗೆ ಈ ಹಾಡು ರಕ್ಕಿ ಸುರೇಶ್ ಅವರನ್ನು ಹೊಸ ತಲೆಮಾರಿನ ಮಾಸ್ ಹೀರೋ ಆಗಿ ಪರಿಚಯಿಸುತ್ತದೆ. ಇಂದಿನ Gen Z ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಹಾಡು ಟ್ರೆಂಡಿ ಬೀಟ್ಸ್, ಯೂತ್‌ಫುಲ್ ಎನರ್ಜಿ ಮತ್ತು ಸ್ಟೈಲಿಶ್ ಮೇಕಿಂಗ್‌ನಿಂದ ವಿಶೇಷ ಆಕರ್ಷಣೆಯಾಗಿದೆ.

    “ಹಚ್ಚಿಟ್ಟಿರೋ ಪಟಾಕಿ” ಎಂಬ ಸಾಹಿತ್ಯದ ಮೂಲಕ ನಾಯಕನ ಭರ್ಜರಿ ಎಂಟ್ರಿಯನ್ನು ಹಾಡಿನಲ್ಲಿ ಬಿಂಬಿಸಲಾಗಿದ್ದು, ಸಿಡಿಯಲು ಸಿದ್ಧವಾಗಿರುವ ಪಟಾಕಿಯಂತೆ ರಕ್ಕಿ ಅವರ ಎನರ್ಜಿ ಈ ಹಾಡಿನಲ್ಲಿ ಕಾಣುತ್ತದೆ. ವೇಗದ ನೃತ್ಯ, ಸ್ಟೈಲಿಶ್ ದೃಶ್ಯ ವಿನ್ಯಾಸ ಮತ್ತು ಮಾಸ್ ಫೀಲಿಂಗ್‌ನಿಂದ ಈ ಹಾಡು ಥಿಯೇಟರ್ ಪ್ರೇಕ್ಷಕರಿಗೆ ಹಬ್ಬದ ಅನುಭವ ನೀಡುವಂತಿದೆ.

    ಈ ಹಾಡಿಗೆ ಸಂಗೀತ ಮತ್ತು ಸಾಹಿತ್ಯವನ್ನು ಲೋಕಿ ತವಸ್ಯ ನೀಡಿದ್ದಾರೆ. ಯುವಜನತೆಯನ್ನು ಸೆಳೆಯುವ ರೀತಿಯ ಸಂಗೀತ ಮತ್ತು ಸಾಹಿತ್ಯ ಹಾಡಿನ ಪ್ರಮುಖ ಆಕರ್ಷಣೆಯಾಗಿದೆ. ಕಂಬಿರಾಜು ಅವರ ನೃತ್ಯ ಸಂಯೋಜನೆ ಹಾಡಿಗೆ ಮತ್ತಷ್ಟು ಭರ್ಜರಿತನ ನೀಡಿದ್ದು, ಪ್ರತಿಯೊಂದು ಸ್ಟೆಪ್ ಕೂಡ ಪ್ರೇಕ್ಷಕರನ್ನು ಕುಣಿಯಿಸುವಂತಿದೆ. ಛಾಯಾಗ್ರಾಹಕ ಐ ಸಾಕ್ ಪ್ರಭಾಕರ್ ಅವರು ಕಲರ್‌ಫುಲ್ ಫ್ರೇಮ್ಸ್, ಸ್ಟೈಲಿಶ್ ಲೈಟಿಂಗ್ ಮತ್ತು ಅದ್ದೂರಿ ದೃಶ್ಯ ವಿನ್ಯಾಸದ ಮೂಲಕ ಹಾಡಿನ ವೈಭವವನ್ನು ಹೆಚ್ಚಿಸಿದ್ದಾರೆ.

    ವೆಂಕಟ್ ಭಾರದ್ವಾಜ್ ಅವರ ಕಥೆ, ಚಿತ್ರಕಥೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿರುವ “ರಕ್ಕಿ” ಚಿತ್ರ, ಸದ್ಯ ಸೆನ್ಸಾರ್ ಹಂತದಲ್ಲಿದ್ದು ಶೀಘ್ರದಲ್ಲೇ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಶ್ರೀಮತಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಆಶೀರ್ವಾದ ಮತ್ತು ಬೆಂಬಲ ದೊರೆತಿರುವುದು ಚಿತ್ರತಂಡಕ್ಕೆ ಮತ್ತಷ್ಟು ಪ್ರೇರಣೆಯಾಗಿದೆ.

    SNR Productions ಬ್ಯಾನರ್ ಅಡಿಯಲ್ಲಿ ಸುರೇಶ್ ಸಾಲಿಗ್ರಾಮ ನಿರ್ಮಿಸಿರುವ “ರಕ್ಕಿ” ಚಿತ್ರವು ಸಾಹಸ , ಭಾವನೆ, ಸಂಗೀತ, ಪ್ರೇಮ ಮತ್ತು ಮಾಸ್ ಅಂಶಗಳಿಂದ ಕೂಡಿದ ಯುವಜನರ ಮನಗೆಲ್ಲುವ ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರ ಆಗಲಿದೆ. ಈಗಾಗಲೇ ಬಿಡುಗಡೆಯಾದ “ರಗಡೋ ರಕ್ಕಿ” ಹಾಡು ಕನ್ನಡ ಸಿನಿ ಪ್ರೇಕ್ಷಕರಲ್ಲಿ ಅಪಾರ ಕುತೂಹಲ ಹುಟ್ಟಿಸಿದ್ದು, ಚಿತ್ರದ ಭರ್ಜರಿ ಬಿಡುಗಡೆಗೆ ವೇದಿಕೆ ಸಿದ್ಧಪಡಿಸಿದೆ. ‌ . ರಕ್ಕಿ ಸುರೇಶ್, ಪಲ್ಲವಿ ಮಂಜುನಾಥ್, ಆಶಿಕಾ ಸೋಮಶೇಖರ್, ಬಿ.ಸರೇಶ್, ಸಂಪತ್ ಮೈತ್ರೇಯ, ರಮೇಶ್ ಪಂಡಿತ್, ಬಲ ರಾಜವಾಡಿ, ಜಿ ಜಿ, ಹರಿಣಿ ಶ್ರೀಕಾಂತ್ ಮುಂತಾದವರ ಭರ್ಜರಿ ತಾರಾಬಳಗ ಈ ಚಿತ್ರದಲ್ಲಿದೆ.

  • ವಿಜಯ ರಾಘವೇಂದ್ರ ನಟನೆಯ ಕೌಟಂಬಿಕ ಕಥಾನಕ “ಶ್ರೀಮತಿ ಸಿಂಧೂರ” ಆಡಿಯೋ ಟೀಸರ್ ರಿಲೀಸ್

    ವಿಜಯ ರಾಘವೇಂದ್ರ ನಟನೆಯ ಕೌಟಂಬಿಕ ಕಥಾನಕ “ಶ್ರೀಮತಿ ಸಿಂಧೂರ” ಆಡಿಯೋ ಟೀಸರ್ ರಿಲೀಸ್

    – ರಾಘವೇಂದ್ರ ಅಡಿಗ ಎಚ್ಚೆನ್.

    ಬೆಂಗಳೂರು :ಆರ್ ಅಂಡ್ ಆರ್ ಎಂಟರ್‌ಪ್ರೈಸಸ್ ಅಡಿಯಲ್ಲಿ ರಿಯಲ್ ಎಸ್ಟೆಟ್ ಉದ್ಯಮಿ ಡಿ.ಎನ್.ನಾಗೀರೆಡ್ಡಿ ಕಥೆ-ನಿರ್ಮಾಣ, ಆರ್.ಅನಂತರಾಜು ನಿರ್ದೇಶನ, ವಿಜಯರಾಘವೇಂದ್ರ ಅಭಿನಯಿಸಿರುವ ’ಶ್ರೀಮತಿ ಸಿಂಧೂರ’ ಚಿತ್ರದ ಟೀಸರ್ ಮತ್ತು ನಾಲ್ಕು ಹಾಡುಗಳ ಬಿಡುಗಡೆ ಕಾರ್ಯಕ್ರಮವು ಎಸ್‌ಆರ್‌ವಿ ಪ್ರಿವ್ಯೂ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು.
    ನಾಯಕಿ ಪ್ರಿಯಾಹೆಗಡೆ, ಹೊಸ ಪರಿಚಯ ಡಿ.ಎನ್.ಲಿಯೋ ಮನೋಜ್, ಸಹ ನಿರ್ಮಾಪಕ ಡಿ.ಎನ್.ಜೈ ನಾರಾಯಾಣ್, ಸಾಹಿತಿ ಕವಿರಾಜ್, ಕಲಾವಿದರುಗಳಾದ ಗಣೇಶ್‌ರಾವ್ ಕೇಸರಕರ್, ರೇಷ್ಮಾ.ವಿ.ಗೌಡ, ಪ್ರಸನ್ನಬಾಗೀನ, ಉಗ್ರಂ ರವಿ, ಮಾಸ್ಟರ್ ಮೌರ್ಯ, ನೃತ್ಯ ಸಂಯೋಜಕ ಫೈವ್‌ಸ್ಟಾರ್ ಗಣೇಶ್, ಗಂಗಾಧರ್ ಅನುಭವಗಳನ್ನು ನೆನಪು ಮಾಡಿಕೊಂಡರು.
    ನಂತರ ಮಾತನಾಡಿದ ನಿರ್ಮಾಪಕರು, ಇದು ನನಗೆ ಇಪ್ಪತ್ತು ವರ್ಷದ ಕನಸು. ಸಿನಿಮಾ ಕಾರ್ಮಿಕರಿಗೆ ಏನಾದರೂ ಕೆಲಸ ಕೊಡಬೇಕೆಂಬ ಒಳ್ಳೆಯ ಉದ್ದೇಶದಿಂದ ಬಂಡವಾಳ ಹೂಡಿದ್ದೇನೆ. ಚಿತ್ರದಲ್ಲಿ ’ಹೂ ಮಳೆ’ ಹಾಡಿದೆ. ಇಂದು ಜೋರಾಗಿ ಮಳೆ ಬರುತ್ತಿದೆ. ಆದರೂ ಮಾಧ್ಯಮದವರು ಬಂದಿರುವುದು ಖುಷಿ ತಂದಿದೆ. ಆಂಜನೇಯನ ಹಾಡು ಸಿನಿಮಾದ ಹೈಲೈಟ್. ಕೈಲಾಶ್‌ಖೇರ್ ಹಾಡಿ ಇದು ಕೇವಲ ಕರ್ನಾಟಕ ಮಾತ್ರವಲ್ಲ. ಸಾರೆ ಇಂಡಿಯಾಗೆ ಹಾಡಿದ್ದೇನೆಂದು ಸಂತಸ ಪಟ್ಟರು. ಹುಡುಗಿಯೊಬ್ಬಳು ಮದುವೆ ಆದರೆ ಶ್ರೀಮತಿ ಆಗುತ್ತಾಳೆ. ಸಿಂಧೂರ ಎನ್ನುವುದು ಆಕೆಗೆ ಸಿಗುವ ಗೌರವ. ಅದೇ ರೀತಿ ಜವಬ್ದಾರಿ ಹುಡುಗನೊಬ್ಬ ಇಷ್ಟಪಟ್ಟ ಹುಡುಗಿಯನ್ನು ಮದುವೆ ಆಗುತ್ತಾನೆ. ಮುಂದೆ ಆತನಿಗೆ ಅನೇಕ ತಿರುವುಗಳು ಬರುತ್ತದೆ. ಇದರಿಂದ ಅವನು ಯಾವ ದಿಕ್ಕಿಗೆ ಹೋಗುತ್ತಾನೆ. ಏನೆಲ್ಲಾ ಬದಲಾವಣೆಗಳು ಆಗುತ್ತದೆ. ಸಂಸಾರದಲ್ಲಿ ದೈವಭಕ್ತಿ ಇರಬೇಕು. ನಾವು ನಂಬಿದ ದೇವರು ಎಂದಿಗೂ ಕೈ ಬಿಡುವುದಿಲ್ಲ. ಇದೊಂದು ಪಕ್ಕಾ ಕೌಟಂಬಿಕ ಮನರಂಜನೆಯಿಂದ ಕೂಡಿದ ಸಿನಿಮಾ ಎನ್ನಬಹುದು.
    ಗಂಗಾಧರ್ ಹೇಳಿದಂತೆ ಎಲ್ಲವನ್ನು ಅಚ್ಚುಕಟ್ಟಾಗಿ ನೋಡಿಕೊಂಡಿದ್ದಾರೆ. ಅಪ್ಪು ಜತೆ ಸಿನಿಮಾ ಮಾಡಲು ನಾನು, ಗಂಗೂ ಯೋಜನೆ ಹಾಕಿಕೊಂಡಿದ್ದೇವು. ಅದು ಆಗದಿದ್ದರೂ, ಕುಟುಂಬದ ಕುಡಿ ವಿಜಯ್ ಅವರೊಂದಿಗೆ ಮಾಡಿರುವುದು ಖುಷಿ ಕೊಟ್ಟಿದೆ. ಇಂತಹ ಕುಟುಂಬದ ಮೇಲೆ ನೀಚ ಚೇತನ್ ಮಾತನಾಡಿರುವುದನ್ನು ಖಂಡಿಸುತ್ತೇನೆ. ಒಂದು ವೇಳೆ ಸಿನಿಮಾ ಗೆದ್ದರೆ, ಲಾಭವನ್ನು ಸಿನಿಮಾಕ್ಕೆ ದುಡಿದವರೆಲ್ಲರಿಗೂ ಹಂಚುತ್ತೇನೆಂದು ಡಿ.ಎನ್.ನಾಗೀರೆಡ್ಡಿ ಭರವಸೆ ನೀಡಿದರು.
    ನಿರ್ಮಾಪಕರು ಹರಸಾಹಸ ಮಾಡಿದ್ದಾರೆ. ಮನೆಗೆ ಬಂದು ನಿರ್ದೇಶಕರು, ಗಂಗಾಧರ್ ಸಾರಾಂಶ ಹೇಳಿದಾಗ, ಸಿನಿಮಾ ನೋಡಿದಂತೆ ಭಾಸವಾಯಿತು. ಈಗಿನ ಸಿನಿಮಾಗಳ ಟ್ರೆಂಡ್ ಹೊಡಿ, ಬಡಿ, ಹಾರರ್, ಥ್ರಿಲ್ಲರ್ ಎಂದು ಹೇಳುತ್ತದೆ. ಇವುಗಳ ಮಧ್ಯೆ ಅಪ್ಪಟ ಕುಟುಂಬಸಮೇತ ಮನಸ್ಸಿಗೆ ಮುದ ನೀಡುವ ಚಿತ್ರ ಇದಾಗಿದೆ. ಇದನ್ನು ಯಾವುದೇ ಕ್ಯಾಟಗರಿಗೆ ಬೇಕಾದರೂ ಸೇರಿಸಬಹುದು. ಯಾವ ಕಾಲಕ್ಕಾದರೂ ಜನರು ಇಂತಹ ಚಿತ್ರವನ್ನು ಇಷ್ಟಪಡುತ್ತಾರೆ. ಗ್ರಾಫಿಕ್ಸ್ ಕಣ್ಣಿಗೆ ತಂಪುಕೊಡುತ್ತದೆಂದು ನಾಯಕ ವಿಜಯರಾಘವೇಂದ್ರ ಒಂದಷ್ಟು ವಿಷಯಗಳನ್ನು ಹಂಚಿಕೊಂಡರು.
    ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು ಕೈ ಜೋಡಿಸಿದ್ದರಿಂದಲೇ ಚಿತ್ರವು ಇಲ್ಲಿಗೆ ಬಂದು ನಿಂತಿದೆ. ಜನತೆಗೆ ಖಂಡಿತ ಸಿಂಧೂರ ಇಷ್ಟವಾಗುತ್ತದೆ. ಈಕೆಯ ಸುತ್ತ ಸಿನಿಮಾ ಸಾಗುತ್ತದೆ. ನಿರ್ಮಾಪಕರ ಶ್ರಮಕ್ಕೆ ಫಲ ಸಿಗುತ್ತದೆ. ಹೊಸಪೆಟೆ ಮೂಲದ ಮಾರುತಿ 6.4 ಎತ್ತರದ ವಿಶ್ವ ದೇಹದಾರ್ಡ್ಯ ಪಟು ಆಂಜನೇಯ ಸ್ವಾಮಿಯಾಗಿ ಕಾಣಿಸಿಕೊಂಡಿದ್ದಾರೆ. ಮೂಡಿಗೆರೆ, ಸಕಲೇಶಪುರ, ಚಿಕ್ಕಮಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ ಎಂದು ಆರ್.ಅನಂತರಾಜು ಮಾಹಿತಿ ಬಿಚ್ಚಿಟ್ಟರು.
    ಕವಿರಾಜ್, ಕೆ.ಕಲ್ಯಾಣ್ ಮತ್ತು ನಿರ್ದೇಶಕರ ಸಾಹಿತ್ಯಕ್ಕೆ ರಾಜೇಶ್‌ರಾಮನಾಥ್ ಗ್ಯಾಪ್ ನಂತರ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪಿ.ಕೆ.ಹೆಚ್.ದಾಸ್, ಕಾರ್ಯಕಾರಿ ನಿರ್ಮಾಪಕ ಆರ್.ಗಂಗಾಧರ್ ಅವರದಾಗಿದೆ

  • ಬೆಟ್ಟಿಂಗ್ ಆಟದ ಹಿನ್ನೆಲೆಯ ಚಿತ್ರ ’ಲೂಪ್’ ಮೇ ೮ಕ್ಕೆ ತೆರೆಗೆ

    ಬೆಟ್ಟಿಂಗ್ ಆಟದ ಹಿನ್ನೆಲೆಯ ಚಿತ್ರ ’ಲೂಪ್’ ಮೇ ೮ಕ್ಕೆ ತೆರೆಗೆ

    ರಾಘವೇಂದ್ರ ಅಡಿಗ ಎಚ್ಚೆನ್.

    ಬೆಂಗಳೂರು :ಬೆಟ್ಟಿಂಗ್ ಆಟ ಹಿನ್ನೆಲೆಯ ಕಥೆ ಇರುವ ‘ಲೂಪ್’ ಚಿತ್ರದ ಟ್ರೈಲರ್ ಮತ್ತಿತರೆ ಕಂಟೆಂಟ್ ಗಳು ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿದ್ದು ಲವ್ ಮತ್ತು ಸಸ್ಪೆನ್ಸ್ ಅಂಶಗಳನ್ನ ಹೊಂದಿರೋ ‘ಲೂಪ್’ ಸಿನಿಮಾ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಪಡೆದಿದ್ದು ಇದೇ ಮೇ ೮ಕ್ಕೆ ತೆರೆಗೆ ಬರಲಿದೆ.

    ಸ್ಟಾಪ್ ಬೆಟ್ಟಿಂಗ್ಸ್, ನೋ ಡ್ರಗ್ಸ್ ಎನ್ನುವ ಸಂದೇಶವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
    ಇತ್ತೀಚೆಗೆ ಒಳ್ಳೆ ಹುಡುಗ ಪ್ರಥಮ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಶುಭ ಕೋರಿದ್ದರು.
    ಚಿತ್ರಕ್ಕೆ ಯಶವಂತ ಆಕ್ಷನ್-ಕಟ್ ಹೇಳಿದ್ದು, ಎಸ್.ಕೆ.ಎಲ್ಲಪ್ಪ ಹಾಗೂ ಯುವಿ ಪ್ರಮೋಷನ್ ಉಮೇಶ್ K N ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
    ಶಶಿಕಿರಣ್ ಗೆ ಶೋಭಿತ ಜೋಡಿಯಾಗಿದ್ದು ಮಿಮಿಕ್ರಿ ಗೋಪಿ, ಅಪ್ಪುರಾಜ್, ಅಭಿ ಸಾಮ್ರಾಟ್, ಮಂಜುಳಾ ಅರಸ್, ಗಣೇಶ್, ಜೀವನ್ ಗೌಡ ಕೂಡ ನಟಿಸಿದ್ದಾರೆ. ಜೀವನ್ ಗೌಡ ಸಿನಿಮಾಟೋಗ್ರಾಫಿ, ಸಂತೋಷ್ ಜೋಶ್ವ ಮ್ಯೂಸಿಕ್ ಮತ್ತು ಅನಿಲ್ ಆಚಾರ್ ಸಂಕಲನ ಚಿತ್ರಕ್ಕಿದೆ.

  • ಒಂದು ರಹಸ್ಯ ಕಥೆ ಹೇಳಲು ಹೊರಟ “ಸಿಂಹಪುರಿಯ ಸಿಂಹ” ಚಿತ್ರದ ಟೀಸರ್ … ಟ್ರೇಲರ್ ಹಾಡುಗಳು ರಿಲೀಸ್

    ಒಂದು ರಹಸ್ಯ ಕಥೆ ಹೇಳಲು ಹೊರಟ “ಸಿಂಹಪುರಿಯ ಸಿಂಹ” ಚಿತ್ರದ ಟೀಸರ್ … ಟ್ರೇಲರ್ ಹಾಡುಗಳು ರಿಲೀಸ್

    – ರಾಘವೇಂದ್ರ ಅಡಿಗ ಎಚ್ಚೆನ್.

    ಬೆಂಗಳೂರು :ಇತ್ತೀಚಿಗೆ ಹೊಸಬರ ಚಿತ್ರಗಳು ಸಾಕಷ್ಟು ಸದ್ದು ಮಾಡುತ್ತಿದ್ದು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಮೈಲುಗಲ್ಲನ್ನು ಸೃಷ್ಟಿಸುತ್ತಿದೆ ಅದೇ ರೀತಿ ಒಂದು ರಹಸ್ಯ ಕಥೆಯೊಂದಿಗೆ ಬಿಡುಗಡೆ ಸಜ್ಜಾಗಿದೆ ಟೀಸರ್ ಹಾಗೂ ಒಂದು ಸಾಂಗ್ ಅನ್ನು ಬಿಡುಗಡೆ ಮಾಡಿ ಕುತೂಹಲ ಮೂಡಿಸಿದ ಚಿತ್ರ “ಸಿಂಹಪುರಿಯ ಸಿಂಹ “ ಒಂದು ರಹಸ್ಯ ಕಥೆಯೊಂದಿಗೆ ಬಿಡುಗಡೆ ಸಜ್ಜಾಗಿದೆ ಸಿಂಹಪುರಿಯ ಚಿತ್ರತಂಡ .ಚಿತ್ರದ ನಾಯಕ ನಟರಾಗಿ ಕೆ ವೈ ಮೂರ್ತಿಯವರು ಅಭಿನಯಿಸಿದ್ದು, ನಾಯಕಿಯಾಗಿ ಸೌಜನ್ಯ ಅಭಿನಯಿಸಿದ್ದಾರೆ ಇನ್ನ ಚಿತ್ರದ ವಿಲನ್ಗಳಾಗಿ ಸುಧೀನ್ ಕುಮ್ಟ & ನಿಲೇಶ್ ಗೌಡ ಅಭಿನಯಿಸಿದ್ದು. ಸಹಕಲಾವಿದರಾಗಿ ಶಂಕರ್ ಭಟ್, ಉಮೇಶ್, ಬ್ಯಾಂಕ್ ಜನಾರ್ಧನ್, ಜೂನಿಯರ್ ದ್ವಾರಕೀಶ್ ,ಪದ್ಮ ವಸಂತಿ, ರೇಖಾದಾಸ್, ಪ್ರಸನ್ನ ಹಾಗೂ ಮುತ್ತುರಾಜ್ ಇನ್ನು ಹಲವು ಕಲಾವಿದರು ಅಭಿನಯಿಸಿದ್ದಾರೆ.
    ಸಿಂಹಪುರಿಯ ಚಿತ್ರದ ,ಕಥೆಚಿತ್ರಕಥೆ ,ನಿರ್ದೇಶನ ,ನಿರ್ಮಾಪಕರು ಕೆ ವೈ ಮೂರ್ತಿಯವರು ಮಾಡಿದ್ದು. ಛಾಯಾಗ್ರಾಹಣ ಗುರುದತ್ ಮುಸುರಿ ,ಮನೋಹರ್, ಸಿ ಎಸ್ ಸತೀಶ್ ಸಂಗೀತ ಕೃಪಾಕರ್ ,ಸಂಕಲನ ಅರುಣ್ ಬೆಂಗಳೂರು ಮೂವೀಸ್ ಸಾಹಸ ದೃಶ್ಯ ಅಲ್ಟಿಮೇಟ್ ಶಿವು ,ಜಾನಿ ಮಾಸ್ಟರ್ ಸಂಭಾಷಣೆ ಸುದರ್ಶನ್ ಇನ್ನು ಈ ಚಿತ್ರದಲ್ಲಿ ಸಾಂಗುಗಳು ಇರಲಿದ್ದು .ಸಂಗೀತ ಗಾಯಕರು ರಾಜೇಶ್ ಕೃಷ್ಣನ್, ಹೇಮಂತ್, ಅನುರಾಧ ಭಟ್, ಪ್ರಿಯಾ ಯಾದವ್, ಸ್ನೇಹ ಪ್ರಿಯ ನಾಗರಾಜ್ , ಹಾಗೂ ನೃತ್ಯ ಸಂಯೋಜಕರಾಗಿ ( ಸಂಧನ್ ರಾಜ್ ) ರಾಜದೇವ್ ರವರು ಕಾರ್ಯನಿರ್ವಹಿಸಿದ್ದಾರೆ ‘ಚಿತ್ರ ಇದೆ ಏಪ್ರಿಲ್ ತಿಂಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

  • ಬೆಂಗಳೂರು :ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

    ಬೆಂಗಳೂರು :ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

    ರಾಘವೇಂದ್ರ ಅಡಿಗ ಎಚ್ಚೆನ್.

    ಕುಂದಾಪುರ :ಆಲ್ಫಾ ಅಂದರೇನೇ ಡಾಮಿನೇಶನ್. ಈ ವಾರ ತೆರೆಕಂಡ ಆಲ್ಫಾ‌ ಚಿತ್ರದಲ್ಲಿ ಡಾಮಿನೇಟ್ ಮಾಡುತ್ತಿರುವವರೇ ಚಿತ್ರದ ನಾಯಕ ಹೇಮಂತ್ ಕುಮಾರ್.

    ಹೇಮಂತ್ ಕುಮಾರ್ ಕನ್ನಡ ಚಿತ್ರರಂಗಕ್ಕೆ‌ ಅಬ್ಬರದ ಎಂಟ್ರಿ ನೀಡಿದ್ದಾರೆ. ಈ ಎಂಟ್ರಿ ನೋಡಿದರೆ ಮುಂದೊಮ್ಮೆ ಚಿತ್ರರಂಗದಲ್ಲಿ ಡಾಮಿನೇಟ್ ಮಾಡಬಲ್ಲ ಆಲ್ಫಾ ಪ್ರತಿಭೆಯಾಗಿ ಕಾಣಿಸುತ್ತಾರೆ.
    ಯಾಕೆಂದರೆ ಹೇಮಂತ್ ನಿಜವಾದ ಬದುಕಿನಲ್ಲಿಯೂ ಮುನ್ನುಗ್ಗುವ ವ್ಯಕ್ತಿತ್ವದವರು.

    ಚಿಕ್ಕ ವಯಸ್ಸಿನಿಂದಲೇ ಸಿನಿಮಾ‌ ನಾಯಕನಾಗಬೇಕು ಎಂದು ಕನಸು ಕಂಡವರು.
    ಅದಕ್ಕಾಗಿ ಏನೆಲ್ಲ ಹಾರ್ಡ್ ವರ್ಕ್ ಬೇಕೋ ಅದನ್ನೆಲ್ಲ ಮಾಡಿದ್ದಾರೆ. ಹಾಗಾಗಿಯೇ ಆಲ್ಫಾ‌ ಚಿತ್ರ ನೋಡುವಾಗ ಫೈಟ್ , ಡಾನ್ಸ್ ಎಲ್ಲವೂ ತುಂಬಿದ ಕಂಪ್ಲೀಟ್ ಪ್ಯಾಕೇಜ್ ಆಗಿ ಹೊರ ಬಂದಿದೆ. ಇದಕ್ಕೆಂದೇ ಎಲ್ಲವನ್ನೂ ಕಲಿತು, ಗಮನ ಸೆಳೆಯಲೇಬೇಕು ಅಂತ ಬಂದಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
    ಆ್ಯಕ್ಷನ್ ಹೀರೋ ಆಗಬೇಕಾದರೆ ಫಿಟ್ ಆ್ಯಂಡ್ ಫೈನ್ ಆಗಿರಲೇಬೇಕು ಎಂದು ದೇಹ ದಂಡಿಸುವ ನಿರ್ಧಾರ ಮಾಡಿದ್ದಾರೆ. ಹಾಗಾಗಿ ಮೊದಲ ನೋಟಕ್ಕೆ ಮೈಕಟ್ಟಿನಿಂದಲೇ ಗಮನ ಸೆಳೆಯುತ್ತಿದ್ದಾರೆ.

    ತೆಲುಗಿನ‌ ಖ್ಯಾತ ಸಾಹಸ ನಿರ್ದೇಶಕ ವಿಜಯ್ ಮಾಸ್ಟರ್ ಫೈಟ್ ಗಳು ಅದ್ಭುತವಾಗಿ ಮೂಡಿ‌ಬಂದಿದೆ. ಕೈ ಮೇಲೆ ನಿಜವಾಗಿಯೂ ಬೆಂಕಿ ಹಚ್ಚಿ ನಟಿಸಿದ್ದಾರೆ. ಆದರೆ ಇಷ್ಟೆಲ್ಲ‌ ಕಷ್ಟಪಟ್ಟಿದ್ದರೂ ಚಿತ್ರಕ್ಕೆ ಸಿಕ್ಕ ಅದ್ಭುತ ಪ್ರತಿಕ್ರಿಯೆಗೆ ತಾನೊಬ್ಬನೇ ಕಾರಣವಲ್ಲ ಎಂದು ವಿನಯ ಪ್ರದರ್ಶಿಸುತ್ತಾರೆ ಹೇಮಂತ್.

    ಹೇಮಂತ್ ಮಾತು ಒಂದು‌ ರೀತಿ ನಿಜ ಕೂಡ. ಒಟ್ಟು ಚಿತ್ರವೇ ಚೆನ್ನಾಗಿದೆ. ವೇಗವಾಗಿ ಸಾಗುವ ಕಥೆ ಇದೆ. ಹೀಗಾಗಿ ವೇಗವಾಗಿ‌ಯೇ ಜನರ ಮಧ್ಯೆ ಸದ್ದು ಮಾಡುತ್ತಿದೆ. ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್ ಖಳನಾಗಿ ನಟಿಸಿ ಅಚ್ಚರಿ ಮೂಡಿಸಿದ್ದಾರೆ. ಮಾತ್ರವಲ್ಲ, ಕೆ.ಜಿ.ಎಫ್ , ಕಾಂತಾರದಂಥ ಪ್ಯಾನ್ ಇಂಡಿಯಾ‌ ಸಿನಿಮಾಗಳಲ್ಲಿ ನಟಿಸಿರುವ ಕಲಾವಿದರ ದಂಡೇ ಇಲ್ಲಿದೆ.‌ ಅಚ್ಯುತ್ ಕುಮಾರ್, ಮಾನಸಿ ಸುಧೀರ್, ಅವಿನಾಶ್, ರಾಘು ಶಿವಮೊಗ್ಗ, ರಮೇಶ್ ಇಂದಿರಾ ಮೊದಲಾದ ಕಲಾವಿದರ ಭರ್ಜರಿ ತಾರಾಗಣದ ಜತೆಗೆ
    ಸಬ್ಜೆಕ್ಟ್ ಕೂಡ ಚೆನ್ನಾಗಿಯೇ ಇದೆ. ಹೀಗಾಗಿಯೇ ಟೀಸರ್, ಹಾಡು ರಿಲೀಸ್ ಆದಾಗಲೇ ತೆಲುಗು ವಿತರಕರು ಅವರಾಗಿಯೇ ಫೋನ್ ಮಾಡಿ ತೆಲುಗು ಡಬ್ಬಿಂಗ್ ರೈಟ್ಸ್ ಕೇಳಿ ಕರೆ ಮಾಡಿದ್ದರು. ಒಟ್ಟಿನಲ್ಲಿ ಕನ್ನಡ ಇಂಡಸ್ಟ್ರಿಗೆ ಒಬ್ಬ ಹೊಸ ಹೀರೋ ಎಂಟ್ರಿಯಾಗಿದ್ದಾರೆ.

  • ಕನ್ನಡದ ಹೆಸರಾಂತ ಕಿರುತೆರೆ ನಟಿ ರಶ್ಮಿ ಲೀಲಾ ನಿಧನ

    ಕನ್ನಡದ ಹೆಸರಾಂತ ಕಿರುತೆರೆ ನಟಿ ರಶ್ಮಿ ಲೀಲಾ ನಿಧನ

    ರಾಘವೇಂದ್ರ ಅಡಿಗ ಎಚ್ಚೆನ್.

    ಬೆಂಗಳೂರು :ಕೆಲ ದಿನಗಳಿಂದ ಗಂಭೀರ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡದ ಕಿರುತೆರೆ ನಟಿ ರಶ್ಮಿ ಲೀಲಾ ಸೋಮವಾರ ನಿಧನರಾಗಿದ್ದಾರೆ.
    ಶ್ವಾಸಕೋಶದ ಕಾಯಿಲೆಯಾದ ಪಲ್ಮನರಿ ಫೈಬ್ರೋಸಿಸ್‌ನಿಂದ ಬಳಲುತ್ತಿದ್ದ ಅವರಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕೆಲ ದಿನಗಳ ಹಿಂದಷ್ಟೇ ಸೂಕ್ತ ದಾನಿಗಳು ಬಂದ ಹಿನ್ನಲೆಯಲ್ಲಿ ಶ್ವಾಸಕೋಶದ ಟ್ರಾನ್ಸ್ ಪ್ಲಾಂಟ್ ಕೂಡ ಮಾಡಲಾಗಿತ್ತು ಎನ್ನಲಾಗಿದೆ.
    ಆ ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಿರುತೆರೆ ನಟಿ ರಶ್ಮಿ ಲೀಲಾಗೆ ಚಿಕಿತ್ಸೆ ಮುಂದುವರೆದಿತ್ತು. ಆದರೇ ಇಂದು ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಈ ಸುದ್ದಿಯನ್ನು ಅವರ ಪತಿ ಸಾರಕ್ಕಿ ಮಂಜು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಂದು ಬೆಳಗ್ಗೆ ಒಂದು ಪೋಸ್ಟ್ ಮಾಡಿದ್ದ ಸಾರಕ್ಕಿ ಮಂಜು, ಹೃದಯದ ಬಡಿತ ತೀವ್ರ ಇಳಿಮುಖ ಆಗುತ್ತಿದೆ. ಕೊನೆಯ ಬಾರಿಗೆ ಒಂದು ಸಲ, ಒಂದೇ ಒಂದು ಸಲ ಈ ನನ್ನ ಜೀವ ಉಳಿದು ಬಿಡಲಿ. ಉಳಿಸಿಕೊಡಲೆಂದು ನಿಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿ ಬಿಡಿ ಎಂದು ಪೋಸ್ಟ್ ಹಾಕಿದ್ದರು.
    ಬಳಿಕ ನಮ್ಮ ಪ್ರಾಣ ಹೊರಟು ಹೋಯ್ತು ಎಂದು ಮತ್ತೊಂದು ಪೋಸ್ಟ್ ಹಾಕಿ ರಶ್ಮಿ ಲೀಲಾ ನಿಧನದ ವಿಚಾರ ತಿಳಿಸಿದ್ದಾರೆ.
    2019 ರಿಂದ ಪಲ್ಮನರಿ ಫೈಬ್ರೋಸಿಸ್‌ನಿಂದ ಬಳಲುತ್ತಿದ್ದ ರಶ್ಮಿ ಲೀಲಾ ಅವರಿಗೆ ಕಳೆದ ಫೆಬ್ರವರಿಯಲ್ಲಿ ಲಂಗ್ ಟ್ರಾನ್ಸ್ ಪ್ಲಾಂಟ್ ಆಗಿತ್ತು ಎನ್ನಲಾಗಿದೆ. ಇದಕ್ಕಾಗಿ ಆರ್ಥಿಕ ಸಹಾಯ ಕೋರಿ ಕಳೆದ ಆಗಸ್ಟ್ ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಚಿಕಿತ್ಸೆಗೆ 19 ಲಕ್ಷ ರೂಪಾಯಿಗಳ ಅಗತ್ಯವಿದೆ ಎಂದು ಬರೆದುಕೊಂಡಿದ್ದರು.
    ನಟಿ ರಶ್ಮಿ ಲೀಲಾ ಅವರು ಕನ್ನಡದ ಹಲವು ಸೀರಿಯಲ್​​ಗಳಲ್ಲಿ ನಟಿಸಿ ಜನಪ್ರಿಯರಾಗಿದ್ರು, ಬಾಂಧವ್ಯ, ಕಾವ್ಯಾಂಜಲಿ, ಕುಸುಮ, ಪಾಪಾ ಪಾಂಡು, ಗೋಧೂಳಿ, ಕವಲುದಾರಿ, ಮಗಳು ಜಾನಕಿ,  ‘ಕನ್ನಡಿ’, ‘ಹೊಗ್ಲಿ ಬಿಡಿ ಸರ್’, ‘ಆನಂದ ಸಾಗರ’ ಮುಂತಾದ ಕನ್ನಡ ಸೀರಿಯಲ್‌ಗಳಲ್ಲಿ ರಶ್ಮಿ ಲೀಲಾ ಅಭಿನಯಿಸಿದ್ದರು. ‘ಪ್ರಾಣ’, ‘ಗ್ರಾಮದೇವತೆ’, ‘ಸಿಹಿ ಮುತ್ತು’, ‘ಕೆಂಪು ದೀಪ’ ಮುಂತಾದ ಸಿನಿಮಾಗಳಲ್ಲಿ ರಶ್ಮಿ ಲೀಲಾ ನಟಿಸಿದ್ದರು.
    ರಶ್ಮಿ ಲೀಲಾ ಪತಿ ಸಾರಕ್ಕಿ ಮಂಜು ಕನ್ನಡ ಕಿರುತೆರೆಯಲ್ಲಿ ಬರಹಗಾರರಾಗಿ, ಸಂಭಾಷಣೆಕಾರರಾಗಿ ಗುರುತಿಸಿಕೊಂಡಿದ್ದಾರೆ. ರಶ್ಮಿ ಲೀಲಾ – ಸಾರಕ್ಕಿ ಮಂಜು ದಂಪತಿಗೆ ಓರ್ವ ಪುತ್ರಿ ಇದ್ದಾಳೆ

  • ಉಗಾಂಡದ ಗೆಟ್ಟೋ ಕಿಡ್ಸ್ ಮತ್ತು ಕನ್ನಡ ಟಪಾಂಗ್ ಸಂಗೀತದ ಅದ್ಭುತ ಸಂಗಮ!

    ಉಗಾಂಡದ ಗೆಟ್ಟೋ ಕಿಡ್ಸ್ ಮತ್ತು ಕನ್ನಡ ಟಪಾಂಗ್ ಸಂಗೀತದ ಅದ್ಭುತ ಸಂಗಮ!

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಉಗಾಂಡದ ಗೆಟ್ಟೋ ಕಿಡ್ಸ್‌ನ ಹೈ-ಎನರ್ಜಿ ಸ್ಟೆಪ್‌ಗಳು ಮತ್ತು ಕನ್ನಡ ಟಪಾಂಗ್ ಸಂಗೀತದ ಅನನ್ಯ ಮಿಶ್ರಣವು ಇಂಟರ್ನೆಟ್‌ನಲ್ಲಿ ಕಾಡ್ಗಿಚ್ಚು ಹಚ್ಚಿದೆ. ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಆಫ್ರಿಕಾದಲ್ಲೂ ‘AFRO ಟಪಾಂಗ್‌’ ಹಾಡಿಗೆ ಹೆಜ್ಜೆ ಹಾಕಿದ ಉಗಾಂಡದ ಜಿಟೊ ಕಿಡ್ಸ್ . ಈ ಸಂಯೋಜನೆಯ ವೀಡಿಯೊ ಸಂಚಲನ ಮೂಡಿಸಿದ್ದು ಆಫ್ರೋ ಶೈಲಿಯ ಸ್ಟೆಪ್‌ಗಳು ಮತ್ತು ಕನ್ನಡ ಸೊಗಡು ಸೇರಿ ಹೊಸ ಅಲೆಯನ್ನು ಸೃಷ್ಟಿಸುತ್ತಿವೆ.

    ಬ್ರಿಟನ್‌ನ ಗೋಲ್ಡನ್ ಬಜರ್ (Britain’s Got Talent) ಸೇರಿದಂತೆ ಹಲವು ಗ್ಲೋಬಲ್ ಶೋಗಳಲ್ಲಿ ಮಿಂಚಿದ ಈ ಕಲಾವಿದರು ಈಗ AFRO ಟಪಾಂಗ್ ಹಾಡಿನೊಂದಿಗೆ ಆಫ್ರಿಕಾದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

    ನವೆಂಬರ್ 1ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ AFRO ಟಪಾಂಗ್ ಹಾಡು ಬರೋಬ್ಬರಿ 16.06 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿ,158K ಲೈಕ್ಸ್ ಪಡೆದು ಅಗಾಧ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಾಡಿನಲ್ಲಿ ಕನ್ನಡ ಸೂಪರ್‌ಸ್ಟಾರ್‌ಗಳಾದ ಶಿವರಾಜ್‌ಕುಮಾರ್, ಉಪೇಂದ್ರ, ಮತ್ತು ರಾಜ್ ಬಿ ಶೆಟ್ಟಿ ಅವರ ಪವರ್‌ಪ್ಯಾಕ್ ಪರ್ಫಾರ್ಮೆನ್ಸ್ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಮ್ಯಾಜಿಕ್ ಕಾಣಬಹುದು.
    ಹಾಡಿನ ಲಯಬದ್ಧತೆ, ಫ್ಲ್ಯಾಶ್‌ಮಾಬ್‌ಗಳು, ಸಂಕ್ಷಿಪ್ತ ಕ್ಲಿಪ್‌ಗಳು, ಮತ್ತು ಸೋಶಿಯಲ್ ಮೀಡಿಯಾ ಚಾಲೆಂಜ್‌ಗಳು ಇದರ ಜನಪ್ರಿಯತೆಯನ್ನು ಹೆಚ್ಚಿಸಿವೆ. ಇದರ ಜೊತೆಗೆ, ಹಾಲಿವುಡ್‌ನ ಪ್ರಸಿದ್ಧ VFX ಕಂಪನಿ MARZ (ಕೆನಡಾ) ಈ ಹಾಡಿನ ವಿಷುವಲ್‌ಗಳನ್ನು ಇನ್ನೂ ಹೆಚ್ಚು ಆಕರ್ಷಕವಾಗಿಸಿದೆ.

    ಈ ಹಾಡು ಕೇವಲ ಪ್ರಚಾರಕ್ಕಾಗಿ ಬಿಡುಗಡೆ ಮಾಡಿದರೂ, ಇದರ ಭರ್ಜರಿ ಪ್ರತಿಕ್ರಿಯೆ ಡಿಸೆಂಬರ್ 25ರಂದು ಬಿಡುಗಡೆಯಾಗಲಿರುವ ’45’ ಚಿತ್ರದ ಬಾಕ್ಸ್ ಆಫೀಸ್ ಯಶಸ್ಸಿಗೆ ಮುನ್ನೋಟವಾಗಿದೆ. ‘AFRO ಟಪಾಂಗ್‌’ ಹಾಡು ಸಾಮಾಜಿಕ ಮಾಧ್ಯಮದಲ್ಲಿ ಗಳಿಸಿರುವ ಈ ಭರ್ಜರಿ ಯಶಸ್ಸು, ನಿರ್ಮಾಪಕ ರಮೇಶ್‌ ರೆಡ್ಡಿ ಅವರ ಈ ಅತಿ ದೊಡ್ಡ
    ಸಾಹಸಕ್ಕೆ ಭದ್ರ ಬುನಾದಿ ಹಾಕಿದೆ. ಹಾಡಿನ ಯಶಸ್ಸಿನ ಈ ಅಲೆಯಲ್ಲಿ, ಡಿಸೆಂಬರ್ 25ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿರುವ ’45’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಓಪನಿಂಗ್‌ ಪಡೆಯುವ ನಿರೀಕ್ಷೆ ಮೂಡಿಸಿದೆ.

  • ’45’ ಚಿತ್ರದ ‘AFRO ಟಪಾಂಗ್‌’ ಹಾಡಿಗೆ ಜಾಗತಿಕ ಹವಾ ; 28.5 ಮಿಲಿಯನ್ ವೀಕ್ಷಣೆ ಮತ್ತು ಭಾರತದಲ್ಲಿ ಟ್ರೆಂಡಿಂಗ್ ಟಾಪ್!

    ’45’ ಚಿತ್ರದ ‘AFRO ಟಪಾಂಗ್‌’ ಹಾಡಿಗೆ ಜಾಗತಿಕ ಹವಾ ; 28.5 ಮಿಲಿಯನ್ ವೀಕ್ಷಣೆ ಮತ್ತು ಭಾರತದಲ್ಲಿ ಟ್ರೆಂಡಿಂಗ್ ಟಾಪ್!

    ಸದ್ಯದಲ್ಲೇ ಟ್ರೇಲರ್ ಬಿಡುಗಡೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :ಭಾರತದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ’45’ ಇದೀಗ ಅದರ ಪ್ರಮೋಷನಲ್ ಹಾಡು ‘AFRO ಟಪಾಂಗ್‌’ ಮೂಲಕ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಮತ್ತು ರಾಜ್‌ ಬಿ ಶೆಟ್ಟಿಯಂತಹ ಸ್ಯಾಂಡಲ್‌ವುಡ್‌ನ ಮೂವರು ಸ್ಟಾರ್‌ಗಳು ಒಟ್ಟಾಗಿ ನಟಿಸಿರುವ ಈ ಬಹುನಿರೀಕ್ಷಿತ ಚಿತ್ರ, ಡಿಸೆಂಬರ್ 2025ರ ಅತ್ಯಂತ ನಿರೀಕ್ಷಿತ ಸಿನಿಮಾ.

    ಸೋಶಿಯಲ್‌ ಮೀಡಿಯಾದಲ್ಲಿ ದಾಖಲೆ ಮಟ್ಟದ ವೀಕ್ಷಣೆಯನ್ನ ಪಡೆದ ‘AFRO ಟಪಾಂಗ್‌’ ಹಾಡು ಭಾರತದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಪಂಚ ಭಾಷೆಗಳಲ್ಲೂ ಟಾಪ್ ಟ್ರೆಂಡಿಂಗ್ ಸಾಂಗ್ ಆಗಿದೆ. ಈ ಹಾಡು ಜಾಗತಿಕವಾಗಿ 28.5 ಮಿಲಿಯನ್ ವೀಕ್ಷಣೆಗಳೊಂದಿಗೆ ಹೊಸ ಮೈಲಿಗಲ್ಲನ್ನು ದಾಟಿದೆ.

    ನಿರ್ಮಾಪಕ ರಮೇಶ್‌ ರೆಡ್ಡಿ ಅವರ ಈ ಅತಿ ದೊಡ್ಡ ಸಾಹಸಕ್ಕೆ (ಚಿತ್ರದ ಬಜೆಟ್ ₹100 ಕೋಟಿ ಎಂದು ಅಂದಾಜಿಸಲಾಗಿದೆ) ಈ ಭರ್ಜರಿ ಯಶಸ್ಸು ಭದ್ರ ಬುನಾದಿ ಹಾಕಿದೆ. ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಅವರ ಚೊಚ್ಚಲ ನಿರ್ದೇಶನದ ಚಿತ್ರದ ಈ ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಯಶಸ್ಸನ್ನು ಕಂಡಿದೆ.

    ಯೂಟ್ಯೂಬ್‌ನಲ್ಲಿ 28.5 ಮಿಲಿಯನ್ ವೀಕ್ಷಣೆಗಳ ಧೂಳೀಪಟ!
    ‘AFRO ಟಪಾಂಗ್‌’ ಹಾಡು ತನ್ನ ವಿಶಿಷ್ಟ ಮ್ಯೂಸಿಕ್ ಮತ್ತು ಉಗಾಂಡದ ಪ್ರಸಿದ್ಧ ಜಿಟೊ ಕಿಡ್ಸ್ (Ghetto Kids) ತಂಡದ ಆಕರ್ಷಕ ಸ್ಟೆಪ್ಸ್‌ಗಳಿಂದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜಿಟೊ ಕಿಡ್ಸ್ ತಂಡವು ಭಾರತೀಯ ಚಿತ್ರರಂಗಕ್ಕೆ ಇದೇ ಮೊದಲ ಬಾರಿಗೆ ಎಂಟ್ರಿ ಕೊಟ್ಟಿದೆ. ಈ ಪ್ರಮೋಷನಲ್ ಸಾಂಗ್‌ ಯುಟ್ಯೂಬ್‌ನಲ್ಲಿ ಬರೋಬ್ಬರಿ 28.5M ಮಿಲಿಯನ್ ವೀಕ್ಷಣೆಗಳು ಹಾಗು 265k ಲೈಕ್ಸ್ ಪಡೆಯುವ ಮೂಲಕ ದಾಖಲೆ ಸೃಷ್ಟಿಸಿದೆ.

    ಕೇವಲ ಪ್ರಚಾರಕ್ಕಾಗಿ ಬಿಡುಗಡೆ ಮಾಡಿದ ಹಾಡಿಗೆ ಇಷ್ಟೊಂದು ದೊಡ್ಡ ಮಟ್ಟದ ವೀಕ್ಷಣೆ ಮತ್ತು ಎಂಗೇಜ್‌ಮೆಂಟ್‌ ಸಿಕ್ಕಿರುವುದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ’45’ ಚಿತ್ರದ ಕಂಟೆಂಟ್‌ ಮತ್ತು ಅದರ ಮೇಲಿರುವ ನಿರೀಕ್ಷೆ ಎಷ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

    ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ವೈರಲ್ ಟ್ರೆಂಡ್!
    ಯೂಟ್ಯೂಬ್‌ನಲ್ಲಿ ಮಾತ್ರವಲ್ಲದೆ, ಇನ್‌ಸ್ಟಾಗ್ರಾಂನಲ್ಲೂ ‘AFRO ಟಪಾಂಗ್‌’ ಹಾಡು ವೈರಲ್ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಹಾಡಿನ ಡ್ಯಾನ್ಸ್‌ ಸ್ಟೆಪ್ಸ್‌ ಮತ್ತು ಆಫ್ರೋ ಬೀಟ್ಸ್ ಜನರನ್ನು ಆಕರ್ಷಿಸಿದ್ದು, ರೀಲ್ಸ್‌ಗಳ ಸೃಷ್ಟಿಗೆ ಪ್ರೇರಣೆ ನೀಡಿದೆ.

    ಹಾಲಿವುಡ್‌ ಸಂಸ್ಥೆಯ ಸಹಯೋಗ
    ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ಹಾಲಿವುಡ್‌ ಪ್ರಾಜೆಕ್ಟ್‌ಗಳಿಗೆ ಕೆಲಸ ಮಾಡಿರುವ ಕೆನಡಾದ ಪ್ರತಿಷ್ಠಿತ ವಿ.ಎಫ್.ಎಕ್ಸ್ ಸಂಸ್ಥೆ “MARZ” ಕೂಡ ಈ ಚಿತ್ರದ ಭಾಗವಾಗಿದೆ. ಇದು ಚಿತ್ರದ ತಾಂತ್ರಿಕ ಗುಣಮಟ್ಟದ ಬಗ್ಗೆ ಹೆಚ್ಚಿನ ಭರವಸೆ ಮೂಡಿಸಿದೆ.

    ‘AFRO ಟಪಾಂಗ್‌’ ಹಾಡಿನ ಯಶಸ್ಸಿನ ಈ ಅಲೆಯಲ್ಲಿ, ಡಿಸೆಂಬರ್ 25ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿರುವ ’45’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಓಪನಿಂಗ್‌ ಪಡೆಯುವ ನಿರೀಕ್ಷೆ ಮೂಡಿಸಿದೆ.

  • ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಮುಹೂರ್ತ ಫಿಕ್ಸ್ – ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ದೊಡ್ಡ ಬಜೆಟ್ ಸಿನಿಮಾ ಜ.15 ಕ್ಕೆ ತೆರೆಗೆ

    ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಮುಹೂರ್ತ ಫಿಕ್ಸ್ – ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ದೊಡ್ಡ ಬಜೆಟ್ ಸಿನಿಮಾ ಜ.15 ಕ್ಕೆ ತೆರೆಗೆ

    ದಳಪತಿ ವಿಜಯ್ ಸಿನಿ ಜೀವನಕ್ಕೆ ಗುಡ್ ಬೈ ರಾಜಕೀಯಕ್ಕೆ ಎಂಟ್ರಿ

    ಕುಂದಾಪುರ :ಜನವರಿ 15, 2026 ತಮಿಳುನಾಡಿನಲ್ಲಿ ಪೊಂಗಲ್ ಸಂಭ್ರಮದ ದಿನ. ಅದೇ ದಿನ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ದೊಡ್ಡ ಬಜೆಟ್ ಸಿನಿಮಾ ‘ಜನ ನಾಯಗನ್’ ತೆರೆಗೆ ಬರಲಿದೆ. ಈ ಸಿನಿಮಾ ಹಲವು ವಿಶೇಷಗಳಿಗೆ ಕಾರಣವಾಗಿದೆ. ಇದು ದಳಪತಿ ವಿಜಯ್ ಅಭಿನಯದ 69ನೇ ಸಿನಿಮಾ ಮತ್ತು ಸಿನಿ ಬದುಕಿನಿಂದ ನಿವೃತ್ತಿ ಪಡೆದು ಪೂರ್ಣಪ್ರಮಾಣದಲ್ಲಿ ರಾಜಕಾರಣಿಯಾಗಲು ಹೊರಟಿರುವ ವಿಜಯ್ ಅವರ ಕೊನೆಯ ಸಿನಿಮಾ. ಈ ಸಿನಿಮಾ ಹಲವು ವಿಶೇಷಗಳಿಗೆ ಕಾರಣವಾಗಿದೆ.

    ಕೆವಿಎನ್ ಪ್ರೊಡಕ್ಷನ್ಸ್ ಅಂದ್ರೆನೇ ಹಾಗೆ, ದೇಶದ ದಕ್ಷಿಣ ಸಿನಿ ಇಂಡಸ್ಟ್ರಿಯಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಮೈಲಿಗಲ್ಲನ್ನೇ ಸ್ಥಾಪಿಸಿದೆ. ಕನ್ನಡದಲ್ಲಿ ಇದೀಗ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ನಿರ್ಮಿಸುತ್ತಿದೆ. ಸಿನಿಮಾ ಅದ್ದೂರಿಯಾಗಿ ಮೂಡಿ ಬರಬೇಕು ಅನ್ನೋದು ಕೆವಿಎನ್ ಪ್ರೊಡಕ್ಷನ್ಸ್ ಒನ್ ಲೈನ್ ಅಜೆಂಡಾ. ಮತ್ತೊಂದು ಪ್ರಮುಖ ಅಜೆಂಡಾ ಅಂದ್ರೆ, ಅದು ಹಣ ಕೊಟ್ಟು ಸಿನಿಮಾ ನೋಡುವ ಸಿನಿರಸಿಕರಿಗೆ ಮೋಸವಾಗಬಾರದು.ಸಿನಿಮಾ ನೋಡಿ ಎದ್ದು ಹೊರಬರುವ ಪ್ರೇಕ್ಷಕನ ಮನದಲ್ಲಿ ಮತ್ತೊಮ್ಮೆ ಸಿನಿಮಾ ನೋಡಬೇಕು ಎನ್ನುವಷ್ಟರ ಮಟ್ಟಿಗೆ ಸಿನಿಮಾ ಮಾಡುವ ಗುರಿ ಕೆವಿಎನ್ ಪ್ರೊಡಕ್ಷನ್ಸ್ ರದ್ದು.

    ಇದೀಗ ತಮಿಳು ಚಿತ್ರರಂಗಕ್ಕೆ ಕಾಲಿಡೋ ಮೂಲಕ ಬಿಗ್ ಸರ್ಪ್ರೈಸ್ ನೀಡಿದೆ… ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಮುಖ್ಯಸ್ಥ ವೆಂಕಟ್ ಕೆ. ನಾರಾಯಣ್ ಕನ್ನಡದಲ್ಲಿ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ನಿರ್ಮಿಸುತ್ತಿದ್ದಾರೆ. ಜೊತೆಗೆ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾವನ್ನು ಮಾಡುತ್ತಿದ್ದಾರೆ. ಇದೀಗ ಇಳಯದಳಪತಿ ವಿಜಯ್ 69ನೇ ಚಿತ್ರ ಕೆವಿಎನ್ ಸಾರಥ್ಯದಲ್ಲಿ ಮೂಡಿ ಬರುತ್ತಿದೆ.

    ದಳಪತಿಯ 69ನೇ ಚಿತ್ರ ಇದಾಗಿದ್ದು, ದೊಡ್ಡ ಬಜೆಟ್ ಸಿನಿಮಾ ಇದಾಗಿದ್ದು, ಈಗಾಗಲೇ ದೊಡ್ಡ ಬಜೆಟ್ನಲ್ಲಿ ಕೆವಿಎನ್ ಕೆ ವೆಂಕಟ್ ನಾರಾಯಣ್ ಅವರು ಬಂಡವಾಳ ಹೂಡಿದ್ದಾರೆ. ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇನ್ನು ಈ ಸಿನಿಮಾ ತಮಿಳುನಾಡಿನ ಹೆಮ್ಮೆಯ ಹಬ್ಬ ಪೊಂಗಲ್ ದಿನ ತೆರೆ ಮೇಲೆ ಅಬ್ಬರಿಸಲಿದೆ. ಜನನಾಯಕನ ಆಗಮನಕ್ಕಾಗಿ ದಳಪತಿ ವಿಜಯ್ ಅಭಿಮಾನಿಗಳಷ್ಟೆ ಇಡೀ ದಕ್ಷಿಣ ಭಾರತ ಕಾಯುತ್ತಿದೆ.
    ಈ ಸಿನಿಮಾಗೆ ಬಂಡವಾಳ ಹಾಕಿರುವ ಕೆವಿಎನ್ ಪ್ರೊಡಕ್ಷನ್ಸ್ ಯಾವುದಕ್ಕೂ ಕೊರತೆ ಇಲ್ಲದಂತೆ ಚಿತ್ರ ನಿರ್ಮಾಣ ಮಾಡುತ್ತಿದೆ…ಅದು ಕೆವಿಎನ್ ಪ್ರೊಡಕ್ಷನ್ ಸ್ಟೈಲ್ ಕೂಡ… ಅವರು ಯಾವುದೇ ಸಿನಿಮಾ ಮಾಡಲಿ, ನಿರ್ಮಾಣದಲ್ಲಿ ಸಣ್ಣದೊಂದು ಹುಳುಕು ಹುಡುಕೋದು ಕಷ್ಟ. ಕೆವಿಎನ್ ಮತ್ತು ದಳಪತಿ ಒಂದಾಗಿ ಜನನಾಯಕನ ಸಿದ್ದತೆಯಲ್ಲಿ ತೊಡಗಿದ್ದಾರೆ… ಇನ್ನು ವಿದಾಯದ ಸಿನಿಮಾ ಅಂದ್ಮೇಲೆ ಏನೆಲ್ಲ ಇರಬೇಕೋ ಅದೆಲ್ಲವೂ ಇರುತ್ತದೆ ಅಂತ ಹೇಳಲಾಗ್ತಿದೆ… ಈ ಸಿನಿಮಾ ಮೂಲಕ ಒಬ್ಬ ದಳಪತಿಗೆ ಯೋಗ್ಯವಾದ ವಿದಾಯವೇ ಸಿಗುತ್ತಿದೆ… ಈ ನಿಟ್ಟಿನಲ್ಲಿ ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

    ಎನ್ ವಿನೋತ್ ನಿರ್ದೇಶಿಸಿ ಅನಿರುದ್ದ್ ರವಿಚಂದರ್ ಮ್ಯೂಸಿಕ್ ಮಾಡಿರುವ ಸಿನಿಮಾ ಕೋಟ್ಯಾನುಕೋಟಿ ದಳಪತಿ ವಿಜಯ್ ಅಭಿಮಾನಿಗಳ ಹೃದಯ ಗೆಲ್ಲೋದ್ರಲ್ಲಿ ನೋ ಡೌಟ್. ಒಂದು ಕಡೆ ಹಬ್ಬದ ಸಂಭ್ರಮ ಅವತ್ತು ಮನೆ ಮಾಡಿರುತ್ತೆ. ಮತ್ತೊಂದು ಕಡೆ ದಳಪತಿ ವಿಜಯ್ ಅದ್ದೂರಿ ಬೀಳ್ಕೊಡುಗೆ ಈ ಸಿನಿಮಾ ಮೂಲಕ ಸಿಗಲಿದೆ. ಜನನಾಯಕನ್ ನೋಡೋದಿಕ್ಕೆ ಜನ ಕೂಡ ಕಾತುರದಿಂದ ಕಾಯುತ್ತಿದ್ದಾರೆ.

    ಸಖತ್ ಸಿನಿಮಾ ಮೂಲಕ ಸಿನಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಕೆವಿಎನ್ ಪ್ರೊಡಕ್ಷನ್ಸ್ ಡಿಸ್ಟ್ರಿಬ್ಯುಷನ್ ಕಾರ್ಯದಲ್ಲೂ ಒಳ್ಳೆ ಹೆಸರು ಮಾಡಿದೆ… ಪೊಗರು, ಆರ್ ಆರ್ ಆರ್, ಸೀತಾರಾಮಂ, 777 ಚಾರ್ಲಿ, ಕೃಷ್ಣಂ ಪ್ರಣಯ ಸಖಿ, ಮಾರ್ಟಿನ್…ಹೀಗೆ ಅನೇಕ ಸಿನಿಮಾಗಳ ಹಂಚಿಕೆ ಕೆಲಸ ಮಾಡಿ ಹೆಸರು ಮಾಡಿದೆ.. ಇನ್ನು ನಿರ್ಮಾಣದ ವಿಚಾರಕ್ಕೆ ಬಂದ್ರೆ, ಸಖತ್, ಬೈಟ್ ಲವ್, ಕೆಡಿ ದಿ ಡೆವಿಲ್, ಇದೀಗ ತಮಿಳು ಚಿತ್ರರಂಗಕ್ಕೆ ದಳಪತಿ ವಿಜಯ್ ಸಿನಿಮಾ ನಿರ್ಮಾಣದ ಮೂಲಕ ಎಂಟ್ರಿ ಕೊಟ್ಟಿದೆ…ಆಲ್ ದಿ ಬೆಸ್ಟ್ ಕೆವಿಎನ್ ಪ್ರೊಡಕ್ಷನ್ಸ್

  • ಕುಂದಾಪುರ :ಕರಾವಳಿ ಸೊಗಡಿನ ದಿಂಸೋಲ್ ಚಲನಚಿತ್ರದ ಪೋಸ್ಟರ್ ಬಿಡುಗಡೆ

    ಕುಂದಾಪುರ :ಕರಾವಳಿ ಸೊಗಡಿನ ದಿಂಸೋಲ್ ಚಲನಚಿತ್ರದ ಪೋಸ್ಟರ್ ಬಿಡುಗಡೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕಿರಿಕ್ ಪಾರ್ಟಿ ಸಿನಿಮಾಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಕುಂದಾಪುರ ಮೂಲದ ಬೀಜಾಡಿಯ ನಾಗೇಂದ್ರ ಗಾಣಿಗ ಇವರ ನಿರ್ದೇಶನದ ಕನ್ನಡ ಚಲನಚಿತ್ರ ಕುಂದಾಪುರ ಭಾಷೆಯ ಜತೆಗೆ ಕರಾವಳಿ ಸಂಸ್ಕೃತಿಯ ಸೊಗಡನ್ನು ಬಿಂಬಿಸುವ ದಿಂಸೋಲ್ ಚಲನಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ತಲ್ಲೂರಿನ ರಾಜಾಡಿಯ ರಕ್ತೇಶ್ವರಿ ದೇವಸ್ಥಾನದಲ್ಲಿ ನಡೆಯಿತು.

    ಅಭಿರಾಮಚಂದ್ರ ಸಿನಿಮಾ ಮೂಲಕ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ ಆ ಚಿತ್ರದಲ್ಲಿ ಬಾಲ್ಯ, ಸ್ನೇಹದ ಜೊತೆಗೆ ತ್ರಿಕೋನ ಪ್ರೇಮಕಥೆ ಹೇಳಿದ್ದ ಅವರಿಗ ಕರಾವಳಿ ಸಂಸ್ಕೃತಿಯ ಸೊಗಡನ್ನು ದಿಂಸೋಲ್ ಸಿನಿಮಾ ಮೂಲಕ ಹೇಳಲು ಹೊರಟಿದ್ದಾರೆ.

    ದಿಂಸೋಲ್ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಅನ್ನು ವಕೀಲರಾದ ಟಿ.ಬಿ.ಶೆಟ್ಟಿ ಇವರು ಅನಾವರಣ ಮಾಡಿದ್ದಾರೆ. ನಟರಾದ ರಘು ಪಾಂಡೇಶ್ವರ್, ಯತೀಶ್ ಬೈಕಂಪಾಡಿ, ಸ್ಥಳೀಯ ಪ್ರಮುಖರು, ಗೋಪಾಡಿಯ ಮಹಿಳಾ ಭಜನಾ ಕುಣಿತ ತಂಡದವರು ಮತ್ತು ಕುಂದಾಪುರದ ಚಂಡೆ ತಂಡದ ಸದಸ್ಯರು ಉಪಸ್ಥಿತರಿದ್ದರು.

    ನಾಗೇಂದ್ರ ಗಾಣಿಗ ಇವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾಕ್ಕೆ ಕೆಜಿಎಫ್ ಮ್ಯೂಸಿಕ್ ಮಾಂತ್ರಿಕ ರವಿ ಬಸ್ರೂರ್ ಸಂಗೀತ ನಿರ್ದೇಶನವಿದೆ. ಕರಾವಳಿ ಭಾಗದಲ್ಲಿ ಶಿವರಾತ್ರಿ ಸಂದರ್ಭದಲ್ಲಿ ನಡೆಯುವ ಆಚರಣೆಯೇ ಈ ಒಂದು ದಿಂಸೋಲ್. ದಿಂಸೋಲ್ ಜತೆಗೆ ಕರಾವಳಿ ಎಲ್ಲ ಸಂಸ್ಕೃತಿಯನ್ನು ಈ ಚಿತ್ರದ ಮೂಲಕ ನಾಗೇಂದ್ರ ಅವರು ದೃಶ್ಯರೂಪಕ್ಕೆ ಇಳಿಸುತ್ತಿದ್ದಾರೆ. ಫಸ್ಟ್ ಲುಕ್ ಸಂಪೂರ್ಣ ಕೆಂಪು ಬಣ್ಣದಿಂದ ಕೂಡಿದ್ದು ಆದಿದೇವಿಯು ರಕ್ತೇಶ್ವರಿ ಉಗ್ರ ಅವತಾರ ತಾಳಿದ್ದ ಈ ಪೋಸ್ಟರ್ ನಾನಾ ಕಥೆ ಹೇಳುತ್ತದೆ.

    ಅಭಿರಾಮಚಂದ್ರ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದ ರಥಕಿರಣ್ ಹಾಗೂ ಶಿವಾನಿ ರೈ ದಿಂಸೋಲ್ ಚಿತ್ರದಲ್ಲಿಯೂ ನಾಯಕ-ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಟಿ ಮಾನಸಿ ಸುಧೀರ್, ದೇವದಾಸ್ ಕಾಪಿಕಾಡ್, ರಘು ಪಾಂಡೇಶ್ವರ್, ದೀಪಕ್ ರೈ ಪಣಾಜಿ, ಮೈಮ್ ರಾಮ್ ದಾಸ್, ಗಣೇಶ್ ಕಾರಂತ್, ಸೂರಜ್ ಹಾಗೂ ಸುರಭಿ ಹಾಗೂ ಕರಾವಳಿ ಭಾಗದ ಸಾಕಷ್ಟು ರಂಗಭೂಮಿ ಕಲಾವಿದರು ತಾರಾ ಬಳಗದಲ್ಲಿದ್ದಾರೆ. ಮುಂಬರುವ ಡಿಸೆಂಬರ್ ತಿಂಗಳಲ್ಲಿ ಇಡೀ ಕರಾವಳಿ ಭಾಗದಲ್ಲಿಯೇ ಈ ಚಿತ್ರದ ಶೂಟಿಂಗ್ ಕಾರ್ಯ ನಡೆಯಲಿದೆ.
    ಸಂದೀಪ್ ವಲ್ಲೂರಿ ಛಾಯಾಗ್ರಹಣ, ಪ್ರತೀಕ್ ಶೆಟ್ಟಿ ಸಂಕಲನ, ನಾಗೇಂದ್ರ ಗಾಣಿಗ ಸಾಹಿತ್ಯ, ಸಂಭಾಷಣೆ ಬರೆಯುತ್ತಿದ್ದು ಸಂಹಿತಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಈ ದಿಂಸೋಲ್ ಚಿತ್ರ ಮೂಡಿಬರಲಿದೆ.