Category: ಸುದ್ದಿ

  • ಕುಂದಾಪುರ :ಊರ ಪ್ರಗತಿಗೆ ದೇವಸ್ಥಾನ ಅತೀ ಮುಖ್ಯ :ಕೆ. ಆರ್‌. ನಾಯ್ಕ್

    ಕುಂದಾಪುರ :ಊರ ಪ್ರಗತಿಗೆ ದೇವಸ್ಥಾನ ಅತೀ ಮುಖ್ಯ :ಕೆ. ಆರ್‌. ನಾಯ್ಕ್

    ಶ್ರೀ ನಂದಿಕೇಶ್ವರ ದೇವಸ್ಥಾನದ ಪುನರ್‌ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಊರಿನ ಅಭಿವೃಧ್ಧಿಗೆ ಕೇವಲ ಶಾಲಾ ಕಾಲೇಜು ಸಂಘ ಸಂಸ್ಥೆಗಳು ಹಾಗೂ ಆಸ್ಪತ್ರೆ ಮಾತ್ರ ಕಾರಣವಲ್ಲ ಊರ ಪ್ರಗತಿಗೆ ದೇವಸ್ಥಾನಗಳು ಅತೀ ಮುಖ್ಯ ಎಂದು ವಿದ್ಯುತ್ತ್ ಗುತ್ತಿಗೆದಾರರಾದ ಕೆ ಆರ್‌ ನಾಯ್ಕ್‌ ನುಡಿದರು.

    ಅವರು ನಗರದ ಮುಖ್ಯ ರಸ್ತೆಯ ಸರಕಾರಿ ಆಸ್ಪತ್ರೆಯ ಆವರಣದಲ್ಲಿರುವ ಶ್ರೀ ನಂದಿಕೇಶ್ವರ ದೇವಸ್ಥಾನದ ಪುನರ್‌ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

    ದೇವಸ್ಥಾನಗಳು ಜೀರ್ಣೋಧ್ಧಾರಗೊಂಡ ಪರಿಸರದಲ್ಲಿ ಶಾಂತಿ ಸುಭಿಕ್ಷೆ ನೆಲೆಸಲಿದ್ದು ನಂದಿಕೇಶ್ವರನ ಸನ್ನಿಧಾನವನ್ನು ಪುನರ್‌ ಪ್ರತಿಷ್ಠೆಗೊಳಿಸಿದಾಗ ಪರಿಸರದ ಭಕ್ತರಿಗೆ ಯಾವ ಕಷ್ಟ ಕಾರ್ಪಣ್ಯಗಳು ಎಂದಿಗೂ ಬರುವುದಿಲ್ಲ ಎಂದರು.

    ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ.ನಾಗೇಶ್‌ ರವರು ವಹಿಸಿದ್ದರು.

    ಆಮಂತ್ರಣ ಪತ್ರಿಕೆಯನ್ನು ಕುಂದಾಪುರ ರೆಡ್‌ ಕ್ರಾಸ್‌ ಸೊಸೈಟಿಯ ಸಭಾಪತಿಗಳಾದ ಎಸ್‌ ಜಯಕರ ಶೆಟ್ಟಿ ಅವರು ಬಿಡುಗಡೆ ಮಾಡಿದರು.

    ಮುಖ್ಯ ಅತಿಥಿಗಳಾಗಿ ಫ್ರೆಂಡ್ಸ್ ಕ್ಲಬ್‌ ಅಧ್ಯಕ್ಷರಾದ ನಾಗರಾಜ್ ಖಾರ್ವಿ ಮೈಲಾರೇಶ್ವರ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಅಣ್ಣಪ್ಪಯ್ಯ ಮಾಸ್ಟರ್ ಹೂವಿನ ವ್ಯಾಪಾರಿ ಸಂಘಗಳ ಅಧ್ಯಕ್ಷರಾದ ಸತೀಶ್ ಕುಮಾರ್ ಕುಂದಾಪುರ ನಂದಿ ಫ್ರೆಂಡ್ಸ್ ಅಧ್ಯಕ್ಷರಾದ ಶಿವಪ್ರಸಾದ್ ಅವರು ಆಗಮಿಸಿದ್ದರು
    ಗೋಪಾಲ ಪೂಜಾರಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಜೀರ್ಣೋಧ್ಧಾರ ಸಮಿತಿಯ ಅಧ್ಯಕ್ಷರಾದ ಯು ರಾಧಾಕೃಷ್ಣ ಸ್ವಾಗತಿಸಿ ಧನ್ಯವಾದವಿತ್ತರು

  • ಸಿದ್ದಾಪುರ ಶ್ರೀ ಸುಧೀಂದ್ರ ಟ್ರೇಡರ್ಸ್ ಸಂಸ್ಥೆಗೆ ಸಂಸ್ಥಾನ ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶರ ಭೇಟಿ

    ಸಿದ್ದಾಪುರ ಶ್ರೀ ಸುಧೀಂದ್ರ ಟ್ರೇಡರ್ಸ್ ಸಂಸ್ಥೆಗೆ ಸಂಸ್ಥಾನ ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶರ ಭೇಟಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೆಯರ್ ಸ್ವಾಮೀಜಿಯವರು ಬಸ್ರೂರು ಶಾಖಾ ಮಠದ ಮುಕ್ಕಾಂನಿಂದ ಆಗಮಿಸಿ ಸಿದ್ದಾಪುರದ ಪ್ರಸಿದ್ಧ ಉದ್ಯಮ ಸಂಸ್ಥೆ ಶ್ರೀ ಸುಧೀಂದ್ರ ಟ್ರೇಡರ್ಸ್ ಗೆ ಭೇಟಿ ಮಾಡಿ ಆಶಿರ್ವಚನ ಮಾಡಿದರು. ಐರ್ಬೈಲ್ ರಾಮಚಂದ್ರ ನಾಯಕ ಕುಟುಂಬದವರು ಗುರುವರ್ಯರನ್ನು ಪೂರ್ಣ ಕುಂಭ ಸ್ವಾಗತ ಮಾಡಿ, ಪಾದಪೂಜೆ ಮಾಡಿ ಸ್ವಾಮಿಜಿಯವರ ಕೃಪಾಕಟಾಕ್ಷಕ್ಕೆ ಪಾತ್ರರಾದರು.

    ಸುಧೀಂದ್ರ ಟ್ರೇಡರ್ಸ್ ಅಡಿಕೆ, ಕಾಳು ಮೆಣಸು, ಗೇರು ಬೀಜ ಇತ್ಯಾದಿ ಗ್ರಾಮೀಣ ಬೆಳೆಗಳನ್ನು ಸ್ಥಳೀಯ ಬೆಳೆಗಾರರಿಂದ ಉತ್ತಮ ಬೆಲೆಗೆ ಖರೀದಿಸಿ ವ್ಯವಹಾರ ನಡೆಸುತ್ತಿದ್ದು ಜನಮನ್ನಣೆ ಗಳಿಸಿರುತ್ತದೆ. ಐರ್ಬೈಲ್ ನಾಯಕ್ ಕುಟುಂಬದವರ ಮನವಿಯನ್ನು ಮನ್ನಿಸಿ ಪರಮಪೂಜ್ಯ ಗುರುವರ್ಯರು ಆಗಮಿಸಿ ವ್ಯವಹಾರ ಉತ್ಪನ್ನಗಳ ದಾಸ್ತಾನು, ಬೆಟ್ಟೆ ಅಡಿಕೆಯ ವಿವಿಧ ಪ್ರಕಾರಗಳ ಅವಲೋಕನ ನಡೆಸಿ ಪ್ರಶಂಸಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಐರ್ಬೈಲ್ ನಾಯಕ್ ಕುಟುಂಬದವರಿಂದ ಗುರುಗಳಿಗೆ ಪಾದಪೂಜೆ ನಡೆಯಿತು. ಧಾರ್ಮಿಕ ವಿಧಿ ವಿಧಾನಗಳನ್ನು ರಾಮಚಂದ್ರ ನಾಯಕ ದಂಪತಿಗಳು ನಡೆಸಿದರು. ಮಕ್ಕಳಾದ ಉದ್ಯಮಿ ಶ್ರೀಕಾಂತ ನಾಯಕ್, ರಾಘವೇಂದ್ರ ನಾಯಕ್, ವಾಮನ ನಾಯಕ್ ದಂಪತಿ ಸಮೇತರಾಗಿ ಗುರುವರ್ಯರ ಆಶೀರ್ವಾದ ಪಡೆದರು. ಸಂಸ್ಥೆಯ ಮಾಲೀಕ ರಾಘವೇಂದ್ರ ನಾಯಕ್ ತನ್ನ ಬಂಧು ಮಿತ್ರರನ್ನು ಆಹ್ವಾನಿಸಿದ್ದರು. ಆಗಮಿಸಿದ ಸುಮಾರು ಇನ್ನೂರಕ್ಕೂ ಹೆಚ್ಚಿನ ಭಕ್ತರು ಗುರುವರ್ಯರ ಕೃಪೆಗೆ ಪಾತ್ರರಾದರು. ಸುಧೀಂದ್ರ ಟ್ರೇಡರ್ಸ್ ಸಂಸ್ಥೆಯ ವ್ಯವಹಾರ ಸಂಕೀರ್ಣದ ಕಟ್ಟಡದ ವಿಸ್ತರಣೆಯ ಸಂದರ್ಭದಲ್ಲಿ ಆಗಮಿಸಿದ ಗುರುವರ್ಯರು ಆಶೀರ್ವಚನ ನೀಡಿ ಸರ್ವರಿಗೂ ಫಲಮಂತ್ರಾಕ್ಷತೆ ನೀಡಿದರು. ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ದಿನೇಶ್ ಪ್ರಭು ಮಾಡಿದರು, ಸಿದ್ದಾಪುರ ಪಾಂಡುರಂಗ ಪೈ ಸ್ವಾಗತಿಸಿದರು.

  • ಕುಂದಾಪುರ :ಮಾಡಬಹುದಾದ ಕೆಲಸಗಳನ್ನು ಮಕ್ಕಳಿಗೆ ಮಾಡಲು ಬಿಡಿ  – ವಂದನಾ ರೈ

    ಕುಂದಾಪುರ :ಮಾಡಬಹುದಾದ ಕೆಲಸಗಳನ್ನು ಮಕ್ಕಳಿಗೆ ಮಾಡಲು ಬಿಡಿ – ವಂದನಾ ರೈ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ನಮ್ಮ ಮಕ್ಕಳು ನಮ್ಮಷ್ಟ ಕಷ್ಟ ಪಡಬಾರದು ಎನ್ನುವ ನಿಜವಾದ ಮನಸ್ಸಿದ್ದರೆ ಪೋಷಕರು ಮಕ್ಕಳಿಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಅವಕಾಶ ಕೊಡಬೇಕು ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಂದನಾ ರೈ ಕಾರ್ಕಳ ಹೇಳಿದರು. ಅವರು ಶನಿವಾರ ಕುಂದಾಪುರದ ಲಿಟ್ಲ್ ಸ್ಟಾರ್ ಕಿಂಡರ್ ಗಾರ್ಟನ್ ಯಡಾಡಿ ಮತ್ಯಾಡಿ ಇಲ್ಲಿನ ವಿದ್ಯಾರ್ಥಿಗಳ ಪದವಿ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

    ಪೋಷಕರು ಬಹಳ ಸಲ ಮಕ್ಕಳಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಅವರ ತಟ್ಟೆ, ಲೋಟಗಳನ್ನು ತೊಳೆಯಲು ಬಿಡುವುದಿಲ್ಲ. ವೈಯುಕ್ತಿಕ ಸ್ವಚ್ಛತೆಗಳ ಬಗ್ಗೆಯೂ ಮಕ್ಕಳಿಗೆ ಅರಿವು ಮೂಡಿಸುವುದಿಲ್ಲ. ಇದರಿಂದಾಗಿ ಮಕ್ಕಳು ಬೆಳೆಯುತ್ತಾ ಹೋದಂತೆಲ್ಲಾ ಸೋಮಾರಿಗಳಾಗುತ್ತಾರೆ. ಆದ್ಧರಿಂದ ಮಕ್ಕಳಿಗೆ ಶಿಕ್ಷಣದ ಜೊತೆಗೆ ವೈಯುಕ್ತಿಕ ಕೆಲಸಗಳನ್ನು ಮಾಡಲು ಪ್ರೇರೇಪಿಸಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ, ಪೋಷಕಿಯರೊಂದಿಗೆ ಕುಣಿದು ಕುಪ್ಪಳಿಸಿದರು.

    ಸುಜ್ಞಾನ್ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಭವಿಷ್ಯದ ಅರಿವು ಮೂಡಿಸಬೇಕು. ಸಾಮಾನ್ಯವಾಗಿ ಪದವಿ, ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಗ್ರಾಜ್ಯುವೇಷನ್ ಕಾರ್ಯಕ್ರಮ ಇರುತ್ತದೆ. ಆದರೆ ನಮ್ಮ ಮಕ್ಕಳಿಗೆ ಅದರ ಅರಿವು ಬಾಲ್ಯದಲ್ಲಿಯೇ ಬರಬೇಕು ಎನ್ನುವ ಕಾರಣಕ್ಕೆ ಕಿಂಡರ್ ಗಾರ್ಡನ್ ಮಕ್ಕಳಿಗೆ ಪದವಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

    ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡುವುದರ ಜೊತೆಗೆ ಪದವಿ ಪ್ರದಾನ ಮಾಡಲಾಯಿತು. ವಂದನಾ ರೈ ಅವರನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸನ್ಮಾನಿಸಿ ಗೌರವಿಸಿದರು. ಲಿಟ್ಲ್ ಸ್ಟಾರ್ ಇಂಗ್ಲೀಷ್ ಮೀಡಿಯಂ ಶಾಲೆಯ ಮುಖ್ಯೋಪಾದ್ಯಾಯ ಪ್ರದೀಪ್ ಕೆ. ಸ್ವಾಗತಿಸಿದರು. ಸಂಯೋಜಕಿ ಪ್ರೀತಿ ಉಪಸ್ಥಿತರಿದ್ದರು. ಶಿಕ್ಷಕಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

  • ಕುಂದಾಪುರ :ಶ್ರೀ ನಂದಿಕೇಶ್ವರ ದೇವಸ್ಥಾನದ ಪುನರ್‌ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ

    ಕುಂದಾಪುರ :ಶ್ರೀ ನಂದಿಕೇಶ್ವರ ದೇವಸ್ಥಾನದ ಪುನರ್‌ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ : ನಗರದ ಮುಖ್ಯ ರಸ್ತೆಯ ಸರಕಾರಿ ಆಸ್ಪತ್ರೆಯ ಆವರಣದಲ್ಲಿರುವ ಶ್ರೀ ನಂದಿಕೇಶ್ವರ ದೇವಸ್ಥಾನದ ಪುನರ್‌ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು  ಆದಿತ್ಯವಾರ ಬೆಳಿಗ್ಗೆ 10.30 ಕ್ಕೆ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಜರುಗಲಿರುವುದು.

    ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ.ನಾಗೇಶ್‌ ರವರು ವಹಿಸಿಕೊಳ್ಳಲಿದ್ದಾರೆ.

    ಆಮಂತ್ರಣ ಪತ್ರಿಕೆಯನ್ನು ಕುಂದಾಪುರ ರೆಡ್‌ ಕ್ರಾಸ್‌ ಸೊಸೈಟಿಯ ಸಭಾಪತಿಗಳಾದ ಎಸ್‌ ಜಯಕರ ಶೆಟ್ಟಿ ಅವರು ಬಿಡುಗಡೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಫ್ರೆಂಡ್ಸ್ ಕ್ಲಬ್‌ ಅಧ್ಯಕ್ಷರಾದ ನಾಗರಾಜ್ ಖಾರ್ವಿ, ಮೈಲಾರೇಶ್ವರ ಯುವಕ ಮಂಡಲದ ಅಧ್ಯಕ್ಷರಾದ ಜಿ ಆರ್ ಪ್ರಕಾಶ್, ಹೂವಿನ ವ್ಯಾಪಾರಿ ಸಂಘಗಳ ಅಧ್ಯಕ್ಷರಾದ ಸತೀಶ್ ಕುಮಾರ್ ಕುಂದಾಪುರ ನಂದಿ ಫ್ರೆಂಡ್ಸ್ ಅಧ್ಯಕ್ಷರಾದ ಶಿವಪ್ರಸಾದ್ ಅವರು ಆಗಮಿಸಲಿದ್ದು ಶುಭಾಸಂಶನೆಯನ್ನು ವಿದ್ಯುತ್ ಗುತ್ತಿಗೆದಾರರಾದ ಶ್ರೀಯುತ ಕೆ ಆರ್ ನಾಯ್ಕ್ ರವರು ಮಾಡಲಿದ್ದಾರೆಂದು ಜೀರ್ಣೋಧ್ಧಾರ ಸಮಿತಿಯ ಅಧ್ಯಕ್ಷರಾದ ಯು ರಾಧಾಕೃಷ್ಣ ರವರು ತಿಳಿಸಿದ್ದಾರೆ.

  • ಕೋಟತಟ್ಟು ಪಡುಕರೆ – ಶಿರಸಿ ಮಾರಿಕಾಂಬಾ ದೇವಸ್ಥಾನ ವಾರ್ಷಿಕ ವರ್ಧಂತ್ಯುತ್ಸವ, ಬ್ರಹ್ಮಕಲಶಾಭಿಷೇಕ ಸಂಪನ್ನ

    ಕೋಟತಟ್ಟು ಪಡುಕರೆ – ಶಿರಸಿ ಮಾರಿಕಾಂಬಾ ದೇವಸ್ಥಾನ ವಾರ್ಷಿಕ ವರ್ಧಂತ್ಯುತ್ಸವ, ಬ್ರಹ್ಮಕಲಶಾಭಿಷೇಕ ಸಂಪನ್ನ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಕೋಟತಟ್ಟು ಪಡುಕರೆಯ ಶ್ರೀ ಶಿರಸಿ ಮಾರಿಕಾಂಬಾ ದೇಗುಲದ ವಾರ್ಷಿಕ ವರ್ಧಂತ್ಯುತ್ಸವ ಹಾಗೂ ಬ್ರಹ್ಮಕಲಶಾಭಿಷೇಕ ಮಹಾ ಅನ್ನಸಂತರ್ಪಣಾ ಕಾರ್ಯಕ್ರಮ ಮಾ.23ರಂದು ಶನಿವಾರ ನಡೆಯಿತು.

    ಆ ಪ್ರಯುಕ್ತ ಮಹಾಪೂಜೆ, ಪ್ರಸಾದ ವಿತರಣೆ, ವಿವಿಧ ಧಾರ್ಮಿಕ ವಿಧಿವಿಧಾನಗಳು ವೇ.ಮೂ ಮಧುಸೂಧನ ಬಾಯರಿ ನೇತೃತ್ವದಲ್ಲಿ ಸಂಪನ್ನಗೊಂಡಿತು.

    ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸಂಜೆ 6ರಿಂದ ತಿರುಪತಿ ದಾಸ ಸಾಹಿತ್ಯ ತಂಡ ಹಾಗೂ ಶಿರಸಿ ಮಾರಿಕಾಂಬಾ ಭಜನಾ ಮಂಡಳಿ ಕೋಟತಟ್ಟು ಪಡುಕರೆ, ಪಂಚವರ್ಣದ ಮಹಿಳಾ ಮಂಡಲ ಭಜನಾ ತಂಡದಿಂದ ಭಜನಾ ಸಂಕೀರ್ತನೆ, ರಾತ್ರಿ 8.30ರಿಂದ ಸಮಷ್ಠಿ ಮ್ಯೂಸಿಕ್ ಇವರಿಂದ ಸಾಂಸ್ಕೃತಿಕ ರಸಸಂಜೆ,ರಾತ್ರಿ 9.30ಕ್ಕೆ ಕುಂದಾಪುರ ಪ್ರಸಿದ್ಧ ನಾಟಕ ತಂಡ (ಕುಳ್ಳಪ್ಪು) ರೂಪಕಲಾ ಇವರಿಂದ ನಾಟಕ ಇನ್ಸ್ ಪೆಕ್ಟರ್ ಅಣ್ಣಪ್ಪ ಪ್ರದರ್ಶನ ನಡೆಯಿತು.

    ಈ ಸಂದರ್ಭದಲ್ಲಿ ದೇಗುಲದ ಅರ್ಚಕ ನೆಂದ್ಯಪ್ಪ ಪೂಜಾರಿ, ದೇಗುಲದ ಆಧ್ಯಕ್ಷ ರಮೇಶ್ ಪೂಜಾರಿ, ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ಪ್ರದಾನಕಾರ್ಯದರ್ಶಿ ಮಂಜುನಾಥ ನಾಯ್ಕ್, ಕೋಶಾಧಿಕಾರಿ ಕೆ.ನಾಗಪ್ಪ ಪೂಜಾರಿ, ಉಪಾಧ್ಯಕ್ಷರಾದ ಚಂದ್ರ ಪುತ್ರನ್, ಚಂದ್ರ ಪುತ್ರನ್ ಬಾರ್ಕೂರು, ಗೌರವ ಸಲಹೆಗಾರ ಸಂಜೀವ ಆರ್ ಕುಂದರ್, ಬಸವ ಕುಂದರ್, ಸಿದ್ಧಿ ಶ್ರೀನಿವಾಸ ಪೂಜಾರಿ, ಚಂದ್ರ ಮೆಂಡನ್, ಬಾಬು ಪೂಜಾರಿ, ಅಶೋಕ್ ಪೂಜಾರಿ, ಉದಯ್ ತಿಂಗಳಾಯ, ಪ್ರಕಾಶ್ ತಿಂಗಳಾಯ, ರಘು ಪೂಜಾರಿ, ಅಣ್ಣಪ್ಪ ತಿಂಗಳಾಯ, ಸುಧಾಕರ್ ಶ್ರೀಯಾನ್, ಯೋಗೇಂದ್ರ ತಿಂಗಳಾಯ, ಪ್ರಭಾಕರ್ ತಿಂಗಳಾಯ, ಆನಂದ್ ಪೂಜಾರಿ, ರಘು ಪೂಜಾರಿ, ಕೃಷ್ಣ ಪುತ್ರನ್, ಲೆಕ್ಕ ಪರಿಶೋಧಕರಾದ ಶಿವಮೂರ್ತಿ ಕೆ, ವಿಠ್ಠಲ ಪೂಜಾರಿ ಮತ್ತಿತರರು ಇದ್ದರು.

  • ಕಾರಂತ ಥೀಮ್ ಪಾರ್ಕ್ : ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರಕ್ಕೆ ಆಯ್ಕೆ

    ಕಾರಂತ ಥೀಮ್ ಪಾರ್ಕ್ : ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರಕ್ಕೆ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ : ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಅವರ ಆಶ್ರಯದಲ್ಲಿ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‍ನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕೊಡಮಾಡುವ ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರಕ್ಕೆ ಭಾರತಿ ಮಯ್ಯ, ವಾಸಂತಿ ಅಂಬಲಪಾಡಿ, ನಾಗರತ್ನ ಗುಂಡ್ಮಿ , ಪ್ರೇಮ ಬಾರ್ಕೂರು, ವಿಜಯಲಕ್ಷ್ಮೀ ಮೆಟ್ಟಿನಹೊಳೆ, ಲಿಖಿತ ಶೆಟ್ಟಿ, ಶರಣ್ಯ ಭಟ್, ಸುಮಿತಾ ಶೆಟ್ಟಿ ಉಪ್ಪುಂದ, ಯಶೋಧ ಗಾಣಿಗ, ಸುಷ್ಮಾ ಆಚಾರ್, ಅಮೃತ ಉಪಾಧ್ಯ, ಅಮಿತಾಂಜಲಿ ಕಿರಣ್, ಸದಾರಮೆ ಕಾರಂತ, ಪೂರ್ಣಿಮಾ ಯಡ್ತಾಡಿ, ಪ್ರೇಮ ಪೂಜಾರಿ ಕುಂಭಾಶಿ, ಸಂಗೀತ ಹರ್ತಟ್ಟು, ಆಶಾ ರೋಹನ್ ವಾಜ್ ಉದ್ಯಾವರ ಅವರನ್ನು ಆಯ್ಕೆ ಮಾಡಲಾಗಿದ್ದು ಮಾರ್ಚ್ 30 ರಂದು ಸಂಜೆ 5 ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರಿನಲ್ಲಿ ಚುನಾವಣೆಗೆ ಸಕಲ ಸಿದ್ಧತೆ

    ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರಿನಲ್ಲಿ ಚುನಾವಣೆಗೆ ಸಕಲ ಸಿದ್ಧತೆ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ :ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯನ್ನು ನ್ಯಾಯ ಸಮತ ಹಾಗೂ ನಿರ್ಭೀತವಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿವಿದ್ಯಾಕುಮಾರಿ ಕೆ. ಅವರು ತಿಳಿಸಿದರು.

    ಅವರು ಇಂದು ಉಡುಪಿಯ ರಜತಾದ್ರಿಯ ಕೆಸ್ವನ್ ಕೇಂದ್ರದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟ ಉಡುಪಿ ಜಿಲ್ಲಾ ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಪೂರ್ವ ಸಿದ್ಧತೆ ಕುರಿತ ಅಂತರ್ ಜಿಲ್ಲಾ ಸಮನ್ವಯ ಸಮಿತಿಯ ಸಭೆಯಲ್ಲಿ ಮಾತನಾಡುತ್ತಿದ್ದರು.

    ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನಗರ ವ್ಯಾಪ್ತಿಯಲ್ಲಿ 26 ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ 220 ಓಟ್ಟು246 ಮತಗಟ್ಟೆಗಳಿದ್ದು ,11,6310 ಪುರುಷರು,1 21413 ಮಹಿಳೆಯರು 3 ತೃತೀಯ ಲಿಂಗದವರು ಸೇರಿದಂತೆ ಒಟ್ಟು 2,37,726 ಮತದಾರರು ಇದ್ದಾರೆ ಎಂದರು.

    ಜಿಲ್ಲೆಯಲ್ಲಿ 246 ಮತದಾನ ಕೇಂದ್ರಗಳಿದ್ದು ಅವುಗಳಲ್ಲಿ 42 ಸೂಕ್ಷ್ಮ 12 ಅತಿಸೂಕ್ಷ್ಮ 190 ಸಾಮಾನ್ಯ ಮತದಾನ ಕೇಂದ್ರಗಳಿವೆ ಎಂದ ಅವರು ಎಂ.ಸಿ.ಸಿ ಉಲ್ಲಂಘನೆಯ ದೂರು ನಿರ್ವಹಣೆಗೆ ಸಹಾಯಕ ಚುನಾವಣೆ ಅಧಿಕಾರಿಗಳ ಕಚೇರಿಯಲ್ಲಿ ಕಂಟ್ರೋಲ್ 24*7 ಕಾರ್ಯ ನಿರ್ವಹಿಸಿದ್ದು ಸಂಖ್ಯೆ 18004252099 ಆಗಿರುತ್ತದೆ ಎಂದರು.

    ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಎಫ್ .ಎಸ್ .ಟಿ ,ವಿ .ಎಸ್. ಟಿ ,ಎಸ್ ,ಎಸ್, ಟಿ ಸೇರಿದಂತೆ 21ಜನ ಸೆಕ್ಟರ್ ಆಫೀಸರ್ ಗಳನ್ನು ನೇಮಕ ಮಾಡಲಾಗಿದೆ ಎಂದರು.

    ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದವರು ಈ ಕಾರ್ಯಕ್ಕೆ ಚುನಾವಣಾ ವೆಚ್ಚ ನಿಗಾ ಸಮಿತಿ, ಎಂ .ಸಿ .ಎಂ .ಸಿ ಸಮಿತಿ ಹಾಗೂ ಸಿವಿಜಲ್ ಸಮಿತಿಯು ಸಹಾಯಕ ಚುನಾವಣೆ ಅಧಿಕಾರಿಗಳ ಉಸ್ತುವಾರಿಯಲ್ಲಿ ನಡೆಯಲಿದೆ ಎಂದರು.

    ಚುನಾವಣಾ ಅಕ್ರಮಗಳನ್ನು ತಡೆಯಲು 26 ಅಂತರ್ ಜಿಲ್ಲಾ ಗಡಿಗಳಲ್ಲಿ ಚೆಕ್ ಪೋಸ್ಟ್ ಳನ್ನು ತೆರೆಯಲಾಗಿದೆ. ಎರಡು ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳು, ಪೊಲೀಸ್, ಫಾರೆಸ್ಟ್ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

    ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ಇ.ವಿ.ಎಂ ಹಾಗೂ ವಿ.ವಿಪ್ಯಾಟ್ಗಳನ್ನು ರಾಂಡಮೈಜೇಶನ್ ಮಾಡುವ ಮೂಲಕ ಹಂಚಿಕೆ ಮಾಡಲಾಗಿದೆ ಎಂದರು.

    ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
    ಶಿವಮೊಗ್ಗ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಉಡುಪಿ ಜಿಲ್ಲಾ ಅರುಣ್. ಕೆ ಶಿವಮೊಗ್ಗದ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ , ಉಡುಪಿಯ ಅಪರ ಜಿಲ್ಲಾಧಿಕಾರಿ ಮಮತ ದೇವಿ ವಿವಿಧ ಸಮಿತಿಯ ನೋಡಲ್ ಅಧಿಕಾರಿಗಳು ಹಾಗೂ ಚುನಾವಣಾ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

  • ಸಾಲಿಗ್ರಾಮ – ವಿಪ್ರ ಮಹಿಳಾ ಬಳಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

    ಸಾಲಿಗ್ರಾಮ – ವಿಪ್ರ ಮಹಿಳಾ ಬಳಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ವನಿತಾ ಉಪಾಧ್ಯರವರ ಮನೆಯಂಗಳದಲ್ಲಿ ಶುಕ್ರವಾರ ಜರಗಿತು.

    ಕಾರ್ಯಕ್ರಮವನ್ನು ಕೋಟ ವಿವೇಕ ವಿದ್ಯಾಸಂಸ್ಥೆಯ ಉಪನ್ಯಾಸಕ ಮಂಜುನಾಥ ಉಪಾಧ್ಯ ಉದ್ಘಾಟಿಸಿ ಮಾತನಾಡಿ ಪರಕೀಯರ ದಾಳಿಯಿಂದ ನಮ್ಮ ಸಂಸ್ಕೃತಿ ಸ್ವಾಭಿಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ, ಸ್ವಾತಂತ್ರ್ಯ ಪೂರ್ವದಲ್ಲೆ ಭಾರತೀಯರ ಮೇಲೆ ಅದರಲ್ಲೂ ಇಲ್ಲಿನ ಮಹಿಳೆಯ ಸ್ವಾತಂತ್ರದ ಮೇಲೆ ಪರಿಣಾಮ ,ಅಲ್ಲದೆ ನಾರಿಶಕ್ತಿ ವಿಜೃಂಭಿಸುವ ಕಾಲ ಇಂದು ಕಾಣುತ್ತಿದ್ದೇವೆ ಅಸಮಾನತೆ ತೊಡೆದು ಹಾಕಿ ಸ್ವಾವಲಂಬಿ ಬದುಕಿಗೆ ಮಹಿಳೆ ಮುನ್ನುಡಿ ಬರೆಯುತ್ತಿದ್ದಾಳೆ. ಪುರುಷ ಪ್ರದಾನವಾದ ಈ ಸಮಾಜದಲ್ಲಿ ಮಹಿಳೆ ಕೂಡಾ ಸಮಾನವಾಗಿ ನಿಂತು ವಿವಿಧ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾಳೆ ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ.

    ಸಭೆಯ ಅಧ್ಯಕ್ಷತೆಯನ್ನು ವಿಪ್ರ ಮಹಿಳಾಬಳಗದ ಅಧ್ಯಕ್ಷೆ ಗಾಯತ್ರಿ ಹೊಳ್ಳ ವಹಿಸಿದ್ದರು.

    ಮಣೂರು ಮಹಾಲಕ್ಷ್ಮೀ ಉರಾಳ ಇವರನ್ನು ವಿಪ್ರ ಮಹಿಳಾ ಬಳಗದ ಭಾಗ್ಯ ವಾದಿರಾಜ್ ಸನ್ಮಾನಿಸಿದರು.

    ಮುಖ್ಯ ಅತಿಥಿಯಾಗಿ ತೆಕ್ಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನ ಇದರ ಆಂಗ್ಲ ಮಾಧ್ಯಮ ಉಪನ್ಯಾಸಕಿ ಶಾರದಾ ಹೊಳ್ಳ ಸ್ವಾವಲಂಬಿ ಬದುಕಿನ ಬಗ್ಗೆ ವಿವರವಾಗಿ ತೀಳಿಸಿದರು.
    ಶುಭಾಶಂಸನೆ ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಪ್ರಬಂಧಕ ಮಂಜುನಾಥ ಉಪಾಧ್ಯ ಗೈದರು.

    ವರದಿಯನ್ನು ಸದಸ್ಯೆ ಸ್ಮೀತಾರಾಣಿ ವಾಚಿಸಿದರು. ವಿಪ್ರ ಮಹಿಳಾ ಬಳಗದ ಮಾಜಿ ಅಧ್ಯಕ್ಷೆ ಜ್ಞಾನವಿ ಹೇರ್ಳೆ ಸ್ವಾಗತಿಸಿದರು. ಅತಿಥಿಗಳನ್ನು ಭಾರತಿ ಮಯ್ಯ ಪರಿಚಯಿಸಿದರು. ನರ್ಮದಾ ಹೇರ್ಳೆ ಸನ್ಮಾನಪತ್ರ ವಾಚಿಸಿದರು.

    ಕಾರ್ಯಕ್ರಮವನ್ನು ವಿಪ್ರ ಮಹಿಳಾ ಬಳಗದ ಸದಸ್ಯೆ ಸುಮನ ಹೇರ್ಳೇ ನಿರೂಪಿಸಿದರು. ಸದಸ್ಯೆ ಸುಜಾತ ಬಾಯರಿ ವಂದಿಸಿದರು. ಸಂಚಾಲಕಿ ವನಿತಾ ಉಪಾಧ್ಯಾ ಕಾರ್ಯಕ್ರಮ ಸಂಯೋಜಿಸಿದರು.

  • ಲೋಕಸಭಾ ಚುನಾವಣೆ :ಸಾರ್ವಜನಿಕರು ಸಮರ್ಪಕ ದಾಖಲೆಗಳಿಲ್ಲದೆ ರೂ.50,000/- ಕ್ಕೂ ಮೀರಿದ ನಗದು ಹಣವನ್ನು ಕೊಂಡೊಯ್ಯುವಂತಿಲ್ಲ – ಜಿಲ್ಲಾಧಿಕಾರಿ

    ಲೋಕಸಭಾ ಚುನಾವಣೆ :ಸಾರ್ವಜನಿಕರು ಸಮರ್ಪಕ ದಾಖಲೆಗಳಿಲ್ಲದೆ ರೂ.50,000/- ಕ್ಕೂ ಮೀರಿದ ನಗದು ಹಣವನ್ನು ಕೊಂಡೊಯ್ಯುವಂತಿಲ್ಲ – ಜಿಲ್ಲಾಧಿಕಾರಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಮರ್ಪಕ ದಾಖಲೆಗಳಿಲ್ಲದೆ ರೂ.50,000/- ಕ್ಕೂ ಮೀರಿದ ನಗದು ಹಣವನ್ನು ಕೊಂಡೊಯ್ಯುವಂತಿಲ್ಲ. ಒಂದು ವೇಳೆ ದಾಖಲೆ ರಹಿತ ನಗದು ದೊರೆತಲ್ಲಿ ಸದ್ರಿ ನಗದನ್ನು ಮುಟ್ಟುಗೋಲು ಹಾಕಲಾಗುವುದು, ಹಾಗೂ ಸಂಬಂಧಿಸಿದವರ ಮೇಲೆ ಪ್ರಕರಣ ದಾಖಲಿಸಲಾಗುವುದು. ಆದ್ದರಿಂದ ಸಾಧ್ಯವಾದಷ್ಟು ಮಟ್ಟಿಗೆ ನಗದು ಹಣ ಸಾಗಾಣಿಕೆ ಬದಲಿಗೆ ಖಾತೆ ವರ್ಗಾವಣೆ, UPI ಹಾಗೂ ಇತರೆ ಮಾಧ್ಯಮದ ಮೂಲಕ ಹಣವನ್ನು ವರ್ಗಾಯಿಸಲು ಕ್ರಮವಹಿಸುವುದು. ಸಂಶಯಾಸ್ಪದ ವ್ಯವಹಾರಗಳ ಮೇಲೆ ನಿಗಾ ಇಡಲು ಬ್ಯಾಂಕ್‌ ಮತ್ತು ಆದಾಯ ತೆರಿಗೆ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ಚುನಾವಣಾ ಕೋಶ ಇರುತ್ತದೆ.

    ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯ ಪೂರ್ಣ ಪ್ರಮಾಣದ ಅನುಷ್ಟಾನಕ್ಕಾಗಿ ಒಟ್ಟು 15 ಚೆಕ್‌ಪೋಸ್ಟ್‌ಗಳನ್ನು ಗುರುತಿಸಿದ್ದು, ಸದರಿ ಚೆಕ್‌ಪೋಸ್ಟ್‌ಗಳಲ್ಲಿ 24×7 ಮಾದರಿಯಲ್ಲಿ ಕಾರ್ಯ ನಿರ್ವಹಿಸಲು ಒಟ್ಟು 52 SST ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ರಚಿಸಲಾಗಿದೆ. ಸದ್ರಿ ಚೆಕ್‌ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ತಮ್ಮ ವಾಹನಗಳನ್ನು ತಪಾಸಣೆಗೊಳಿಸಲು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು.

    ಪ್ರಸಕ್ತ ವರ್ಷದ ಲೋಕಸಭಾ ಚುನಾವಣೆಯಲ್ಲಿ HOME VOTING ಮಾಡಲು ಬಯಸುವ ಹಿರಿಯ ನಾಗರೀಕರ ವಯಸ್ಸನ್ನು ಆಯೋಗವು 80 ರಿಂದ 85 ವರ್ಷಕ್ಕೆ ಪರಿಷ್ಕರಿಸಲಾಗಿರುತ್ತದೆ. ಹಿರಿಯ ನಾಗರೀಕರು ಹಾಗೂ ವಿಕಲಚೇತನರ ಮನೆಯಂದಲೇ ಮತ ಚಲಾಯಿಸಲು ಅವಕಾಶವಿದೆ. ಆದಾಗ್ಯೂ  ಮತದಾನವು ಪ್ರಜಾಪ್ರಭುತ್ವ ಹಬ್ಬವಾಗಿರುತ್ತದೆ. ಮತಗಟ್ಟೆಗೆ ತೆರಳಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಈ ಹಬ್ಬದಲ್ಲಿ ಎಲ್ಲರೂ ಭಾಗವಹಿಸುವಂತಾಗಬೇಕು.  ಹಿರಿಯ ನಾಗರೀಕರು ಹಾಗೂ ವಿಕಲಚೇತನರಿಗೆ ಮತಗಟ್ಟೆಗೆ ತೆರಳಿ ಮತದಾನ ಮಾಡಲು ವಾಹನದ ವ್ಯವಸ್ಥೆಯನ್ನು ಮಾಡಲಾಗಿದ್ದು, ತೀರಾ ಅಶಕ್ತರು ಮಾತ್ರ HOME VOTING ಸೌಲಭ್ಯವನ್ನು ಪಡೆಯಬಹುದಾಗಿದೆ.

    ಎಲ್ಲಾ ಮತದಾರರು ಮತಗಟ್ಟೆಗೆ ತೆರಳಿ ಮತದಾನ ಮಾಡುವ ಮೂಲಕ  ಪ್ರಜಾಪ್ರಭುತ್ವ ಹಬ್ಬವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಲು ಸಾರ್ವಜನಿಕರು ಸಹಕಾರ ನೀಡುವಂತೆ ಉಡುಪಿ ಚಿಕ್ಕಗಳೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕುಂದಾಪುರ :ಬೆಂಗಳೂರು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯಿಂದ ಜನ್ನಾಡಿ ಕೊರಗರ ಕಾಲೋನಿಯಲ್ಲಿ 15 ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ಶಿಲಾನ್ಯಾಸ

    ಕುಂದಾಪುರ :ಬೆಂಗಳೂರು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯಿಂದ ಜನ್ನಾಡಿ ಕೊರಗರ ಕಾಲೋನಿಯಲ್ಲಿ 15 ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ಶಿಲಾನ್ಯಾಸ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಯಾರಿಗೆ ಮನೆ ಇಲ್ಲವೋ ಅವರಿಗೆ ಮನೆ ಕಟ್ಟಿಕೊಡುವಂತಹದ್ದು ಸರಕಾರದ ಜವಾಬ್ದಾರಿ. ಈ ಬಗ್ಗೆ ನಮ್ಮ ಸಂವಿಧಾನವೇ ಸ್ಪಷ್ಟವಾಗಿ ತಿಳಿಸಿದೆ ಎಂದು ಉದ್ಯಮಿ ಡಾ. ಎಚ್ಎಸ್ ಶೆಟ್ಟಿ ಹೇಳಿದರು.

    ಅವರು ಕುಂದಾಪುರ ತಾಲೂಕು, ಬಿದ್ಕಲ್ ಕಟ್ಟೆ ಸಮೀಪದ ಜನ್ನಾಡಿ ಕೊರಗರ ಕಾಲೋನಿಯಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸೊಸೈಟಿ (ರಿ) ಬೆಂಗಳೂರು ಇವರ ವತಿಯಿಂದ ಕೊರಗರ ಕಾಲೋನಿಯಲ್ಲಿ ನಿರ್ಮಿಸಲಿರುವ14 ಮನೆಗಳ ಭೂಮಿ ಪೂಜೆ ಮತ್ತೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಇತ್ತೀಚೆಗೆ ಅಯೋಧ್ಯೆಗೆ ತೆರಳಿದ ಸಂದರ್ಭ ಪೇಜಾವರ ಶ್ರೀಗಳು ರಜತ ಕಳಶವನ್ನು ನೀಡಿ ಗೌರವಿಸಿದ್ದರು. ರಾಮಜನ್ಮ ಭೂಮಿಯಲ್ಲಿ ಕುಳಿತಿದ್ದಾಗ ರಾಮ ರಾಜ್ಯದ ಕಲ್ಪನೆಯ ಕುರಿತು ಸ್ವಾಮೀಜಿಯವರು ನೀಡಿದ ಪತ್ರವನ್ನು ಓದಿ ಈ ಮನೆ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ್ದೇನೆ ಎಂದರು. ಶಿಲಾನ್ಯಾಸ ನೇರವೇರಿಸಿ, ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥರು, ಅಯೋಧ್ಯೆಯಲ್ಲಿ ರಾಮನ ಭವ್ಯ ಮಂದಿರವನ್ನು ನಿರ್ಮಿಸಲಾಗಿದೆ ಹಲವು ದಿನಗಳ ಕಾರ್ಯ ಅಲ್ಲಿ ವಿವಿಧ ಕಾರ್ಯಕ್ರಮಗಳನ್ನ ಕೂಡ ನಡೆಸಿದ್ದೇವೆ. ಆಗ ರಾಮ ನನ್ನಲ್ಲಿ, ನನಗೆ ಏನೋ ಮನೆಯಾಗಿದೆ ಆದರೆ ನಮ್ಮ ದೇಶದಲ್ಲಿ ಇನ್ನೂ ಸಾಕಷ್ಟು ಜನ ವಸತಿ ಇಲ್ಲದೆ ಪರದಾಡುತ್ತಿದ್ದಾರೆ ಅಂತವರಿಗೂ ಕೂಡ ಮನೆಯಾಗಬೇಕಾದ ಅಗತ್ಯತೆ ಇದೆ ಎಂದಾದ ಆಯ್ತು, ನಾನು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದು ಶ್ರೀರಾಮ ನಿಗೆ ತಿಳಿಸಿದೆ. ರಾಮದೇವರ ಅನಿಸಿಕೆಯನ್ನ ನನ್ನ ಸ್ನೇಹಿತ ಮಿತ್ರರಲ್ಲಿ ತಿಳಿಸಿದಾಗ ನನ್ನ ಯೋಜನೆಗೆ ಸಹಕಾರ ನೀಡಿದ್ದಾರೆ ಅವರಿಗೆ ಶ್ರೀ ರಾಮನ ಅನುಗ್ರಹವಾಗಲಿ ಎಂದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಕೇಂದ್ರದ ಮುರಳಿ ಕಡೆಕಾರ್ ಮತ್ತಿತರರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಪೇಜಾವರ ಶ್ರೀಗಳನ್ನು ಪೂರ್ಣಕುಂಭದ ಮೂಲಕ ಸ್ವಾಗತಿಸಲಾಯಿತು.

    ಕಾರ್ಯಕ್ರಮದಲ್ಲಿ ಉಡುಪಿ ಯಕ್ಷ ಕಲಾರಂಗದ ಕಾರ್ಯದರ್ಶಿ ಮುರುಳಿ ಕಡೆಕಾರ್, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸೊಸೈಟಿಯ ಉಪಾಧ್ಯಕ್ಷ ಹಾಲಾಡಿ ನಾಗರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.