Category: ಸುದ್ದಿ

  • ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನದ ಲೋಕಾರ್ಪಣೆ : ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ

    ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನದ ಲೋಕಾರ್ಪಣೆ : ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ

    ಕುಂದಾಪುರ ಮಿರರ್ ಸುದ್ದಿ…

    ಕಜ್ಕೆ : ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಕಜ್ಕೆ ಶಾಖಾ ಮಠದ ಶ್ರೀ ಶ್ರೀ ಅನ್ನಪೂರ್ಣೇಶ್ವರಿ, ಶ್ರೀ ಗಣಪತಿ ಮತ್ತು ಶ್ರೀಆದಿ ಶಂಕರಾಚಾರ್ಯರ ಶಿಲಾಮಯ ದೇವಸ್ಥಾನದ ಲೋಕಾರ್ಪಣೆ, ಶಿಲಾ ಬಿಂಬ ಪ್ರತಿಷ್ಠೆ ಮತ್ತು ಮಹಾ ಕುಂಭಾಭಿಷೇಕವು ಇದೇ ೨೧ರಂದು ನಡೆಯಲಿದ್ದು ಮಹಾಕಾರ್ಯದ ವಿವಿಧ ಧಾರ್ಮಿಕ ವಿಧಿವಿಧಾನಗಳು ಮಂಗಳವಾರ ಆರಂಭಗೊಂಡಿತು.

    ಪರಮಪೂಜ್ಯ ಶ್ರೀಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ, ತಂತ್ರಿಯವರು, ವೈಧಿಕರ ವಿದ್ಯುಕ್ತ ಸ್ವಾಗತ, ಶಿಲ್ಪ ಪೂಜೆ, ಶಿಲ್ಪ ಗೌರವ, ಆಲಯ ಪರಿಗ್ರಹ, ಸಾಮೂಹಿಕ ದೇವತಾ ಪ್ರಾರ್ಥನೆ, ತೋರಣ ಪ್ರತಿಷ್ಠೆ, ಧ್ವಜಾರೋಹಣ ಸಹಿತ ಧಾರ್ಮಿಕ ಕಾರ್ಯಗಳು ನಡೆಯಿತು.

    ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನದ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಹೆಬ್ರಿ ಮಠದಬೆಟ್ಟು ರಾಜೇಶ ಆಚಾರ್ಯ ಲೀಲಾವತಿ ಆಚಾರ್ಯ ದಂಪತಿಗಳು ಪೂಜೆ ನೇರವೇರಿಸಿದರು.

    ತಂತ್ರತಿಗಳಾದ ವೇದಮೂರ್ತಿ ಉದ್ಯಾವರ ವಿಶ್ವನಾಥ ಪುರೋಹಿತ್‌, ವೇದಮೂರ್ತಿ ಕೇಶವ ಪುರೋಹಿತ್‌ ಮೂಡಬಿದರೆ ನೇತ್ರತ್ವದಲ್ಲಿ ನಾರಾಯಣ ಆಚಾರ್ಯ ಪೂರೋಹಿತ್, ವಿದ್ವಾನ್‌ ಚಂದ್ರಕಾಂತ್‌ ಶರ್ಮಾ ಹೆಬ್ರಿ, ರವೀಂದ್ರ ಪುರೋಹಿತ್‌ ಹೆಬ್ರಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು. ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನ ಸಮಿತಿಯ ಗೌರವ ಪ್ರಧಾನ ಮಾರ್ಗದರ್ಶಕ ಕರುಣಾಕರ ಶೆಟ್ಟಿ ಕಜ್ಕೆ, ಸ್ವಾಗತ ಸಮಿತಿಯ ಅಧ್ಯಕ್ಷ ಕಜ್ಕೆ ಕಾಶಿನಾಥ ಶೆಣೈ, ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನ ನಿರ್ಮಾಣ ಸಮಿತಿ ಮತ್ತು ಮಹಾ ಕುಂಭಾಭಿಷೇಕ ಸಮಿತಿ, ವಿವಿಧ ಉಪಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಗಣ್ಯರು, ಭಕ್ತಾಧಿಗಳು ಭಾಗಿಯಾದರು.

  • ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಾಗದೇವರ ಪ್ರತಿಷ್ಠೆ.

    ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಾಗದೇವರ ಪ್ರತಿಷ್ಠೆ.

    ಕುಂದಾಪುರ ಮಿರರ್ ಸುದ್ದಿ…

    ಕಜ್ಕೆ : ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಕಜ್ಕೆ ಶಾಖಾ ಮಠದ ಶ್ರೀ ಶ್ರೀ ಅನ್ನಪೂರ್ಣೇಶ್ವರಿ, ಶ್ರೀ ಗಣಪತಿ ಮತ್ತು ಶ್ರೀಆದಿ ಶಂಕರಾಚಾರ್ಯರ ಶಿಲಾಮಯ ದೇವಸ್ಥಾನದಲ್ಲಿ ಶ್ರೀ ನಾಗದೇವರ ಪ್ರತಿಷ್ಠೆ ಗುರುವಾರ ನೆರವೇರಿತು.
    ಪರಮಪೂಜ್ಯ ಶ್ರೀಶ್ರೀ ಶಿವಸುಜ್ಞಾನತೀರ್ಥ ಮಹಾ ಸ್ವಾಮೀಜಿ ಮಾರ್ಗದರ್ಶನ‌ ನೀಡಿದರು.

    ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನದ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಹೆಬ್ರಿ ಮಠದಬೆಟ್ಟು ರಾಜೇಶ ಆಚಾರ್ಯ ಲೀಲಾವತಿ ಆಚಾರ್ಯ ದಂಪತಿಗಳು ಪೂಜೆ ನೇರವೇರಿಸಿದರು.

    ತಂತ್ರತಿಗಳಾದ ವೇದಮೂರ್ತಿ ಉದ್ಯಾವರ ವಿಶ್ವನಾಥ ಪುರೋಹಿತ್‌, ವೇದಮೂರ್ತಿ ಕೇಶವ ಪುರೋಹಿತ್‌ ಮೂಡಬಿದರೆ ನೇತ್ರತ್ವದಲ್ಲಿ ನಾರಾಯಣ ಆಚಾರ್ಯ ಪೂರೋಹಿತ್, ವಿದ್ವಾನ್‌ ಚಂದ್ರಕಾಂತ್‌ ಶರ್ಮಾ ಹೆಬ್ರಿ, ರವೀಂದ್ರ ಪುರೋಹಿತ್‌ ಹೆಬ್ರಿ, ಸೀತಾರಾಮ‌ ಪುರೋಹಿತ್ ಮಿಯ್ಯಾರು ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು. ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನ ಸಮಿತಿಯ ಗೌರವ ಪ್ರಧಾನ ಮಾರ್ಗದರ್ಶಕ ಕರುಣಾಕರ ಶೆಟ್ಟಿ ಕಜ್ಕೆ, ಸ್ವಾಗತ ಸಮಿತಿಯ ಅಧ್ಯಕ್ಷ ಕಜ್ಕೆ ಕಾಶಿನಾಥ ಶೆಣೈ, ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನ ನಿರ್ಮಾಣ ಸಮಿತಿ ಮತ್ತು ಮಹಾ ಕುಂಭಾಭಿಷೇಕ ಸಮಿತಿ, ವಿವಿಧ ಉಪಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಗಣ್ಯರು, ಭಕ್ತಾಧಿಗಳು ಭಾಗಿಯಾದರು.

  • ಕುಂದಾಪುರ :ಪಿ.ಯು.ಸಿ.ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಶಶಾಂಕ್ ಅವರಿಗೆ ಪ್ರೋತ್ಸಾಹ ಧನ ವಿತರಣೆ

    ಕುಂದಾಪುರ :ಪಿ.ಯು.ಸಿ.ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಶಶಾಂಕ್ ಅವರಿಗೆ ಪ್ರೋತ್ಸಾಹ ಧನ ವಿತರಣೆ

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ :ಪ್ರಥಮ ಪಿ.ಯು.ಸಿ.ವ್ಯಾಸಾಂಗ ಮಾಡುತ್ತಿರುವ ಕುಂದಾಪುರ ತಾಲೂಕಿನ ಕೊಡ್ಲಾಡಿ ಗ್ರಾಮದ ಶಶಾಂಕ್ ತೀರ ಬಡತನ ಕುಟುಂಬದ,ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಹೆಮ್ಮಾಡಿಯ ಸಮರ್ಪಣಾ ಎಜುಕೇಶನಲ್ ಟ್ರಸ್ಟ್ ವತಿಯಿಂದ ಟ್ರಸ್ಟ್‌ ನ ಅಧ್ಯಕ್ಷರು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರರವರು ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ 25,000 ರೂಪಾಯಿಗಳ ಚೆಕ್ ಹಸ್ತಾಂತರಿಸಿದರು ಹಾಗೂ ವಿದ್ಯಾರ್ಥಿಯ ಪಿ.ಯು.ಸಿ ವ್ಯಾಸಂಗದ ಕುರಿತು ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.

  • ಬೈಲೂರು :ಆಕಾಶ ವೀಕ್ಷಣೆ ಹವ್ಯಾಸ ಮಕ್ಕಳಲ್ಲಿ ಖಗೋಳದ ಬಗ್ಗೆ ಕೂತೂಹಲವನ್ನು ಹೆಚ್ಚಿಸುತ್ತದೆ. – ಅತುಲ್‌ ಭಟ್

    ಬೈಲೂರು :ಆಕಾಶ ವೀಕ್ಷಣೆ ಹವ್ಯಾಸ ಮಕ್ಕಳಲ್ಲಿ ಖಗೋಳದ ಬಗ್ಗೆ ಕೂತೂಹಲವನ್ನು ಹೆಚ್ಚಿಸುತ್ತದೆ. – ಅತುಲ್‌ ಭಟ್

    ನಭದ ಕಡೆಗೊಂದು ನೋಟ ಆಕಾಶ ವೀಕ್ಷಣೆ ಕಾರ್ಯಕ್ರಮ

    ಕುಂದಾಪುರ :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಫೆ.15 ಸಂಜೆ 6 ಗಂಟೆಯಿಂದ ನಡೆದ ನಭದ ಕಡೆಗೊಂದು ನೋಟ ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಅತುಲ್‌ ಭಟ್‌ರವರು ಮಕ್ಕಳಿಗೆ ಆಕಾಶ ಕಾಯಗಳನ್ನು ಪರಿಚಯಿಸುತ್ತ “ಆಕಾಶ ವೀಕ್ಷಣೆ ಹವ್ಯಾಸ ಮಕ್ಕಳಲ್ಲಿ ಖಗೋಳದ ಬಗ್ಗೆ ಕೂತೂಹಲವನ್ನು ಹೆಚ್ಚಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

    ಎಸ್‌ ಡಿ ಎಮ್‌ ಸಿ ಅಧ್ಯಕ್ಷರಾದ ಶ್ರುತಿ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಂದಾಪುರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ರಾಮ ಮೊಗವೀರ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ಇಲ್ಲಿನ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಿಲ್ಟನ್‌ ರೋಹಿತ್‌ ಕ್ರಾಸ್ತಾ ಸಭೆಯಲ್ಲಿ ಉಪಸ್ಥಿತರಿದ್ದರು.

    ನಂತರದಲ್ಲಿ ಸಂಪನ್ಮೂಲ ವ್ಯಕ್ತಿ ಅತುಲ್‌ ಭಟ್‌ರವರು ತಮ್ಮ ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿಗಳಾದ ದಿನೇಶ ಹೆಬ್ಬಾರ್‌ ಮತ್ತು ಭೂಮಿಕಾ ಇವರ ಸಹಕಾರದೊಂದಿಗೆ ಮಕ್ಕಳಿಗೆ ದೂರದರ್ಶಕದ ಮೂಲಕ ಚಂದ್ರ, ಗುರು ಮತ್ತು ಅದರ ನಾಲ್ಕು ಉಪಗ್ರಹಗಳನ್ನು ತೋರಿಸಿ ಆಕಾಶದ ವಿವಿಧ ನಕ್ಷತ್ರ ಪುಂಜಗಳು ಮತ್ತು ನಕ್ಷತ್ರಗಳನ್ನು ಗುರುತಿಸುವುದನ್ನು ಮಕ್ಕಳಿಗೆ ಪರಿಚಯಿಸಿದರು.

    ಈ ಸಂದರ್ಭದಲ್ಲಿ ಎಸ್‌ ಡಿ ಎಮ್‌ ಸಿ ಸದಸ್ಯರು, ಪೋಷಕರು, ಹಳೆವಿದ್ಯಾರ್ಥಿಗಳು ಮತ್ತು ಸ್ಥಳೀಯ ಖಗೋಳ ಆಸಕ್ತ ಶಿಕ್ಷಕರು ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಡಿ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಿಸಿದ ಆನಂದ ಕುಲಾಲ ಪ್ರಸ್ತಾವನೆಗೈದರು. ಅತಿಥಿ ಶಿಕ್ಷಕಿ ಶ್ರೀಮತಿ ಪ್ರಮೀಳಾ ವಂದಿಸಿದರು. ಸಹಶಿಕ್ಷಕಿ ಸಂಧ್ಯಾ ಕೆ. ಕಾರ್ಯಕ್ರಮ ನಿರೂಪಿಸಿದರು.

  • ಕುಂದಾಪುರ :ಮನೋರಂಜನೆಯೊಂದಿಗೆ ಮೌಲ್ಯಯುತ ಶಿಕ್ಷಣ ಯಕ್ಷಗಾನದ ಕೊಡುಗೆ – ಪ್ರದೀಪ ಕುಮಾರ ಕಲ್ಕೂರ

    ಕುಂದಾಪುರ :ಮನೋರಂಜನೆಯೊಂದಿಗೆ ಮೌಲ್ಯಯುತ ಶಿಕ್ಷಣ ಯಕ್ಷಗಾನದ ಕೊಡುಗೆ – ಪ್ರದೀಪ ಕುಮಾರ ಕಲ್ಕೂರ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : “ಜಾತಿ ಮತ ಕುಲ ಧರ್ಮಗಳ ಭೇದವಿಲ್ಲದೆ ಜನಸಾಮಾನ್ಯರನ್ನು ಆಕರ್ಷಿಸಿದ ಕಲೆ ಯಕ್ಷಗಾನ. ಚೌಕಿಯ ಪೂಜೆಯ ಮೊದಲ ಪ್ರಸಾದ ದಕ್ಕುವುದು ಭಾಗವತನಿಗೆ. ಭಾಗವತನ ಸ್ಥಾನಕ್ಕೆ ಬೆಲೆ ಹೊರತೂ ಅವನ ಜಾತಿಗಲ್ಲ. ಮನೋರಂಜನೆಯೊಂದಿಗೆ ಮೌಲ್ಯಯುತ ಶಿಕ್ಷಣವನ್ನು ನೀಡಿದ ಶ್ರೀಮಂತ ಕಲೆ ಯಕ್ಷಗಾನ. ಈ ಕಲೆಯ ಮೂಲಕ ಸಂಸ್ಕೃತಿಯ ಉಳಿವು ಸಾಧ್ಯವಾಗಿದೆ” ಎಂದು ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಹೇಳಿದರು.

    ಫೆಬ್ರುವರಿ 12ರ ಸೋಮವಾರ ಸಂಜೆ ಪಟೇಲರ ಮನೆಯ ಆವರಣದಲ್ಲಿ ಕೋಟದ ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳ ಮತ್ತು ಮಂಗಳೂರಿನ ಕರ್ಣಾಟಕ ಯಕ್ಷಧಾಮ ಜಂಟಿಯಾಗಿ ಆಯೋಜಿಸಿದ ‘ಕಲೋತ್ಸವ 2024-ಕಲಾವಿದಾಭಿನಂದನ, ಬಯಲಾಟ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಕಲ್ಕೂರ ಮಾತನಾಡಿದರು. ಈ ಸಂದರ್ಭ ಪೆರ್ಡೂರು ಮೇಳದ ಎಲ್ಲಾ ಹಿಮ್ಮೇಳ, ಮುಮ್ಮೇಳ ಮತ್ತು ನೇಪಥ್ಯ ಕಲಾವಿದರನ್ನು ಗೌರವಿಸಲಾಯಿತು.

    ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಉಪ ಮಹಾ ಪ್ರಬಂಧಕ ಮಹೇಶ್ ಜೆ., ಪೆರ್ಡೂರು ಮೇಳದ ಯಜಮಾನ ವೈ. ಕರುಣಾಕರ ಶೆಟ್ಟಿ, ಗೆಳೆಯರ ಬಳಗ ಸಾಲಿಗ್ರಾಮದ ತಾರಾನಾಥ ಹೊಳ್ಳ, ಕಲಾ ಸಾಹಿತಿ ಜನಾರ್ದನ ಹಂದೆ, ನಿವೃತ್ತ ಅಧ್ಯಾಪಕ ಹರಿಕೃಷ್ಣ ಹೊಳ್ಳ, ಯಕ್ಷ ದೇಗುಲದ ಸುದರ್ಶನ ಉರಾಳ ಉಪಸ್ಥಿತರಿದ್ದರು. ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಸ್ವಾಗತಿಸಿದರು. ಶ್ರೀರಾಮ್ ಮಧ್ಯಸ್ಥ ವಂದಿಸಿದರು. ಹಾರ್ಯಾಡಿ ರಘುಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಪೆರ್ಡೂರು ಮೇಳದ ಕಲಾವಿದರಿಂದ ಬ್ರಹ್ಮಕಪಾಲ ಮತ್ತು ಸುಭದ್ರಾ ಕಲ್ಯಾಣ ಎಂಬ ಯಕ್ಷಗಾನ ಬಯಲಾಟ ಸಂಪನ್ನಗೊಂಡಿತು.

  • ಕುಂದಾಪುರ :ಶ್ರೀ ವಿನಾಯಕ ಯುವಕ ಸಂಘದ ರಜತ ಮಹೋತ್ಸವ – “ನೆಂಪು ಉತ್ಸವ”

    ಕುಂದಾಪುರ :ಶ್ರೀ ವಿನಾಯಕ ಯುವಕ ಸಂಘದ ರಜತ ಮಹೋತ್ಸವ – “ನೆಂಪು ಉತ್ಸವ”

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: 25 ವರ್ಷಗಳನ್ನು ಪೂರೈಸಿರುವ ಶ್ರೀ ವಿನಾಯಕ ಯುವಕ ಸಂಘದ ರಜತ ಮಹೋತ್ಸವ “ನೆಂಪು ಉತ್ಸವ”ಕ್ಕೆ ಸಿದ್ಧತೆ ನಡೆಸಿದೆ. ಫೆಬ್ರವರಿ 24ರ ಶನಿವಾರದಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಂಪುವಿನಲ್ಲಿ “ನೆಂಪು ಉತ್ಸವ”ದಲ್ಲಿ ಸಹಾಯ ಹಸ್ತ, ರಜತ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

    ಸಂಸ್ಥೆಯ ಆರಂಭದಿಂದಲೂ ಒಂದಲ್ಲ ಒಂದು ರೀತಿಯ ಸೇವಾ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿರುವ ಶ್ರೀ ವಿನಾಯಕ ಯುವಕ ಸಂಘವು ನೆಂಪು ಉತ್ಸವದಲ್ಲಿಯೂ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಉತ್ಸವ ವೇದಿಕೆಯಲ್ಲಿ ಹತ್ತು ಅಶಕ್ತ ಕುಟುಂಬಕ್ಕೆ ನೆರವಾಗುವುದು ಹಾಗೂ ವಿದ್ಯಾರ್ಥಿ ವೇತನ ವಿತರಿಸಲಾಗುತ್ತದೆ. ಅದರ ಜೊತೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರಣಕಟ್ಟೆ ಶ್ರೀ ಕೃಷ್ಣಮೂರ್ತಿ ಮಂಜರಿಗೆ ರಜತ ಪುರಸ್ಕಾರ ಅರ್ಪಿಸಿ ಗೌರವಿಸಲಾಗುತ್ತದೆ. ಉದ್ಯಮ ಕ್ಷೇತ್ರದಲ್ಲಿ ಸಾಧನೆಗೈದು, ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮೂವರು ಹಟ್ಟೂರ ಸಾಧಕರಾದ ಸೀತಾರಾಮ್ ಶೆಟ್ಟಿ ನೆಂಪು, ಶ್ರೀನಿವಾಸ್ ಮೆಂಡನ್ ಬಳ್ಳಿಹಿತ್ಲು, ಶಿವರಾಮ್ ಮಂಗಲಸನಕಟ್ಟೆಯವರಿಗೆ ಹುಟ್ಟೂರು ಸನ್ಮಾನ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗ್ರಾಮದ ಸಾಧಕರನ್ನು ಸನ್ಮಾನಿಸಲಾಗುತ್ತದೆ.

    ಜುಗಲ್ ಬಂಧಿ ಭರತನಾಟ್ಯ, ಜೊತೆಗೆ X TREAM DANCE ACADEMY UDUPI ಇವರಿಂದ ನೃತ್ಯೋತ್ಸವ, ಪ್ರಸಿದ್ಧ ಸಿನಿ ಗಾಯಕರಿಂದ ಸಂಗೀತೋತ್ಸವ, ಕಲಾಚಿಗುರು ಕಲಾತಂಡ ಹಳ್ಳಾಡಿ ಇವರಿಂದ ತ್ರಿವಳಿ ಚೇತನ್ ರವರ ಅಭಿನಯದ “ಹೆಂಗ್ಸ್ರ ಪಂಚೆತಿ” ಹಾಗೂ ತೆಂಕು ಬಡಗು ಸ್ಪರ್ಧಾತ್ಮಕ ಗಾನ ವೈಭವ “ನೆಂಪು ಯಕ್ಷ ಕಂಪು”, ಜೀ ಕನ್ನಡ ಡ್ರಾಮಾ ಜೂನಿಯರ್ಸ್ ವಿಜೇತೆ “ಸಮೃದ್ಧಿ ಕುಂದಾಪುರ” ಇವರಿಂದ ಯಕ್ಷಗಾನ ನೃತ್ಯವನ್ನೊಳಗೊಂಡ ಬಹುದೊಡ್ಡ ವೇದಿಕೆಯ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.

  • ಸಾಲಿಗ್ರಾಮ ಪ.ಪಂ : ಎರಡು ದಿನಗಳಿಗೊಮ್ಮೆ ನೀರು ಸರಬರಾಜು

    ಸಾಲಿಗ್ರಾಮ ಪ.ಪಂ : ಎರಡು ದಿನಗಳಿಗೊಮ್ಮೆ ನೀರು ಸರಬರಾಜು

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ : ಸಾಲಿಗ್ರಾಮ ಪಟ್ಟಣ ಪಂಚಾಯತ್ ವಾಪ್ತಿಯಲ್ಲಿ ಅಂತರ್ ಜಲ ಮಟ್ಟ ಕಡಿಮೆಯಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಸಂಭವವಿದ್ದು ಫೆಬ್ರವರಿ 15 ರಿಂದ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 2 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮರ ಗಿಡಗಳಿಗೆ ನೀರನ್ನು ಬಿಡದೇ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಿ ಪಟ್ಟಣ ಪಂಚಾಯತ್‌ನೊಂದಿಗೆ ಸಹಕರಿಸಬೇಕಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

  • ಕೋಟ :ಹೊಳಪು-2024- ಉಪ್ಪಿನಂಗಡಿ ಗ್ರಾಮ ಪಂಚಾಯತ್ ಚಾಂಪಿಯನ್

    ಕೋಟ :ಹೊಳಪು-2024- ಉಪ್ಪಿನಂಗಡಿ ಗ್ರಾಮ ಪಂಚಾಯತ್ ಚಾಂಪಿಯನ್

    ಕುಂದಾಪುರ ಮಿರರ್ ಸುದ್ದಿ…

    ಕೋಟ : ಕೋಟತಟ್ಟು ಗ್ರಾಮ ಪಂಚಾಯತ್, ಡಾ|| ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ ಅವರ ಆಶ್ರಯದಲ್ಲಿ ನಡೆಯುವ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ಕ್ರೀಡೋತ್ಸವ – ಸಾಂಸ್ಕೃತಿಕ ಸ್ಪರ್ಧೆ ಹೊಳಪು-2024( ಗ್ರಾಮ ಸರಕಾರದ ದಿಬ್ಬಣ) ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

    ಪಥ ಸಂಚಲನದಲ್ಲಿ ಪ್ರಥಮ ಕಾಪು ಪುರಸಭೆ, ದ್ವಿತೀಯ ಯಡ್ತಾಡಿ ಗ್ರಾಮ ಪಂಚಾಯತ್ ತೃತೀಯ ಕೋಟ ಗ್ರಾಮ ಪಂಚಾಯತ್ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.ಸಮಾಧಾನಕರ ಬಹುಮಾನದಲ್ಲಿ ವಾರಂಬಳ್ಳಿ ಗ್ರಾಮ ಪಂಚಾಯತ್, ಕೋಟತಟ್ಟು ಗ್ರಾಮ ಪಂಚಾಯತ್, ತೆಕ್ಕಟ್ಟೆ ಗ್ರಾಮ ಪಂಚಾಯತ್, ಆರೂರು ಗ್ರಾಮ ಪಂಚಾಯತ್, ಬಿಲ್ಲಾಡಿ ಗ್ರಾಮ ಪಂಚಾಯತ್, ಕುತ್ಯಾರು ಗ್ರಾಮ ಪಂಚಾಯತ್, ವಡ್ಡರ್ಸೆ ಗ್ರಾಮ ಪಂಚಾಯತ್, ಕುಂದಾಪುರ ಪುರಸಭೆ, ಕುಕ್ಕಂದೂರು ಗ್ರಾಮ ಪಂಚಾಯತ್, ಗೋಪಾಡಿ ಗ್ರಾಮ ಪಂಚಾಯತ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಪ್ರಶಸ್ತಿ ಪಡೆದು ಕೊಂಡಿತು. ಟ್ಯಾಬ್ಲೋ ವಿಭಾಗದಲ್ಲಿ ಹೊಂಬಾಡಿ ಮುಂಡಾಡಿ ಗ್ರಾಮ ಪಂಚಾಯತ್ ಪ್ರಥಮ, ಆರೂರು ಗ್ರಾಮ ಪಂಚಾಯತ್ ದ್ವೀತಿಯ, ನಾರಾವಿ ಗ್ರಾಮ ಪಂಚಾಯತ್ ತೃತೀಯ ಸ್ಥಾನ ಪಡೆದವು. 100ಮೀ ಓಟ 45 ವರ್ಷ ಒಳಗಿನ ಪುರುಷರು ವಿಭಾಗದಲ್ಲಿ ವಾರಂಗ ಗ್ರಾಮ ಪಂಚಾಯತ್ ನ ಸುನೀಲ್ ಪೂಜಾರಿ ಪ್ರಥಮ, ಕೆರಿಗಲ್ ಗ್ರಾಮ ಪಂಚಾಯತ್ ನ ರಾಘವೇಂದ್ರ ಪೂಜಾರಿ ದ್ವಿತೀಯ, ನಲ್ಲೂರು ಗ್ರಾಮ ಪಂಚಾಯತ್ ಜಯಕೀರ್ತಿ ತೃತೀಯ, 100ಮೀ ಓಟ 45 ವರ್ಷ ಮೇಲ್ಪಟ್ಟು ಪುರುಷರು ಕುಟ್ರುಪಾಡಿ ಗ್ರಾಮ ಪಂಚಾಯತ್ ನ ಮೋನಪ್ಪ ಗೌಡ ಪ್ರಥಮ, ಕಾರ್ಕಳ ಪುರಸಭೆಯ ಯೋಗಿಶ್ ದೇವಾಡಿಗ ದ್ವೀತೀಯ, ಕುಕ್ಕಂದೂರು ಗ್ರಾಮ ಪಂಚಾಯತ್ ರಾಜೇಶ್ ಶೆಟ್ಟಿ ತೃತೀಯ, 100ಮೀ ಓಟ 45ವರ್ಷ ಒಳಗಿನ ಮಹಿಳೆಯರ ವಿಭಾಗ ಚಾರ್ಮಾಡಿ ಗ್ರಾಮ ಪಂಚಾಯತ್ ನ ಪ್ರಿಯಾ ಹರೀಶ್ ಪ್ರಥಮ, ಬಳಪ ಗ್ರಾಮ ಪಂಚಾಯತ್ ನೇತ್ರಾವತಿ ದ್ವಿತೀಯ,ಮಣಿಪುರ ಗ್ರಾಮ ಪಂಚಾಯತ್ ನ ಸುರೇಖಾ ತೃತೀಯ, 100ಮೀ ಓಟ 45 ವರ್ಷ ಮೇಲ್ಪಟ್ಟು ಮಹಿಳೆಯರ ವಿಭಾಗ ವಾರಂಗ ಗ್ರಾಮ ಪಂಚಾಯತ್ ನ ಬೇಬಿ ಪ್ರಥಮ, ಕುವೆಟ್ಟು ಗ್ರಾಮ ಪಂಚಾಯತ್ ರಚನಾ ದ್ವಿತೀಯ, ಕೆದಿಲ ಗ್ರಾಮ ಪಂಚಾಯತ್ ವನಿತಾ ಶ್ರೀಧರ್ ತೃತೀಯ, 200ಮೀ ಓಟ 45 ವರ್ಷ ಒಳಗಿನ ಪುರುಷರ ವಿಭಾಗ ಕೆರಿಗಲ್ ಗ್ರಾಮ ಪಂಚಾಯತ್ ನ ರಾಘವೇಂದ್ರ ಪೂಜಾರಿ, ವಾರಣಗ ಗ್ರಾಮ ಪಂಚಾಯತ್ ನ ಸುನೀಲ್ ಪೂಜಾರಿ ದ್ವಿತೀಯ, ನಲ್ಲೂರು ಗ್ರಾಮ ಪಂಚಾಯತ್ ಜಯಕೀರ್ತಿ ತೃತೀಯ, 200ಮೀ ಓಟ 45 ವರ್ಷ ಮೇಲ್ಪಟ್ಟು ಪುರುಷರು ವಿಭಾಗ ಕಲ್ಲ್ಮೂಂಡ್ಕೂರು ಗ್ರಾಮ ಪಂಚಾಯತ್ ವಸಂತ ನಾಯ್ಕ್ ಪ್ರಥಮ, ಕುಟ್ರುಪಾಡಿ ಮೋನಪ್ಪ ಗೌಡ ದ್ವೀತೀಯ, ಎಕ್ಕೂರು ಗ್ರಾಮ ಪಂಚಾಯತ್ ಸುದೀಪ್ ಆರ್ ಅಮೀನ್ ತೃತೀಯ, 200 ಮೀ ಓಟ 45 ವರ್ಷ ಒಳಗಿನ ಮಹಿಳೆಯರು ಕೊಲ್ಯ ಗ್ರಾಮ ಪಂಚಾಯತ್ ನ ಸುಪ್ರೀಯ ಕೋಟ್ಯಾನ್ ಪ್ರಥಮ, ಉಪ್ಪನಂಗಡಿ ಗ್ರಾಮ ಪಂಚಾಯತ್ ಹೇಮಾವತಿ ದ್ವಿತೀಯ, ಆಜ್ರಿ ಗ್ರಾಮ ಪಂಚಾಯತ್ ಮಲ್ಲಿಕಾ ಶೆಟ್ಟಿ ತೃತೀಯ, 200ಮೀ ಓಟ 45 ವರ್ಷ ಮೇಲ್ಪಟ್ಟ ಮಹಿಳೆಯರು ವಾರಂಗ ಗ್ರಾಮ ಪಂಚಾಯತ್‍ನ ಬೇಬಿ ಪ್ರಥಮ, ಕುವೆಟ್ಟು ಗ್ರಾಮ ಪಂಚಾಯತ್‍ನ ರಚನಾ ದ್ವಿತೀಯ, ಕೊಲ್ಲೂರು ಗ್ರಾಮ ಪಂಚಾಯತ್‍ನ ಹೇಮಾ ತೃತೀಯ, ಗುಂಡೆಸೆತ ಮಹಿಳೆಯರು ಸೀನಿಯರ್ ಈದು ಗ್ರಾಮ ಪಂಚಾಯತ್‍ನ ಸವಿತಾ ಪ್ರಥಮ, ಸಾಲಿಗ್ರಾಮ ಪಟ್ಟಣ ಪಂಚಾಯತ್‍ನ ಸುಲತಾ ಹೆಗ್ಡೆ ದ್ವಿತೀಯ, ಹೊಸಂಗಡಿ ಗ್ರಾಮ ಪಂಚಾಯತ್‍ನ ಯಶೋಧಾ ಶೆಟ್ಟಿ ತೃತೀಯ, ಗುಂಡೆಸೆತ ಮಹಿಳೆಯರು ಜ್ಯೂನಿಯರ್ ಕಾರ್ಕಳ ಪುರಸಭೆ ಅಮೃತಾ ಕಾರ್ಕಳ ಪ್ರಥಮ, ಶೋಭಾ ನಲ್ಲೂರು ಕಾರ್ಕಳ ಗ್ರಾಮ ಪಂಚಾಯತ್ ದ್ವಿತೀಯ, ಕಡಬ ಗ್ರಾಮ ಪಂಚಾಯತ್‍ನ ಮಮತ ತೃತೀಯ, ಗುಂಡೆಸೆತ ಪುರುಷರು ಸೀನಿಯರ್ ಮಿಯ್ಯಾರು ಗ್ರಾಮ ಪಂಚಾಯತ್‍ನ ಗಿರೀಶ್ ಅಮೀನ್ ಪ್ರಥಮ, ನಿಟ್ಟೆ ಗ್ರಾಂ ಪಂಚಾಯತ್‍ನ ಸತೀಶ್ ದ್ವಿತೀಯ, ಉಳ್ಳಾಲ ನಗರ ಸಭೆಯ ಖಲೀಲ್ ಇಬ್ರಾಹಿಂ ತೃತೀಯ, ಗುಂಡೆಸೆತ ಪುರುಷರು ಜ್ಯೂನಿಯರ್ ಪಳ್ಳಿ ಗ್ರಾಮ ಪಂಚಾಯತ್‍ನ ಸಂದೀಪ್ ಅಮೀನ್ ಪ್ರಥಮ, ಗೋಳ್ತಮಜಲು ಗ್ರಾಮ ಪಂಚಾಯತ್‍ನ ಹ್ಯಾರಿಸ್ ದ್ವಿತೀಯ, ಉದ್ಯಾವರ ಗ್ರಾಮ ಪಂಚಾಯತ್‍ನ ಸಚಿನ್ ಸುವರ್ಣ ತೃತೀಯ, ಗ್ರಾಮ ಪಂಚಾಯತ್ ಸದಸ್ಯರಿಗೆ ರಿಂಗ್ – ಇನ್- ದ ವಿಕೆಟ್ 45 ವರ್ಷ ಒಳಗಿನ ಪುರುಷರು ಉಪ್ಪಿನಂಗಡಿ ಗ್ರಾಮ ಪಂಚಾಯತ್‍ನ ಸಂಜೀವ ಮಡಿವಾಳ ಪ್ರಥಮ, ಬಾಳಿಲ ಗ್ರಾಮ ಪಂಚಾಯತ್‍ನ ರವೀಂದ್ರ ರೈ ದ್ವಿತೀಯ, ಕೌಕ್ರಾಡಿ ಗ್ರಾಮ ಪಂಚಾಯತ್‍ನ ಉದಯ ಕುಮಾರ್ ತೃತೀಯ, ಗ್ರಾಮ ಪಂಚಾಯತ್ ಸದಸ್ಯರಿಗೆ ರಿಂಗ್ – ಇನ್- ದ ವಿಕೆಟ್ 45 ವರ್ಷ ಮೇಲ್ಪಟ್ಟ ಪುರುಷರು ಕೌಕ್ರಾಡಿ ಗ್ರಾಮ ಪಂಚಾಯತ್ ಎಂ. ಹನೀಫ್ ಪ್ರಥಮ, ಹೆಜಮಾಡಿ ಗ್ರಾಮ ಪಂಚಾಯತ್‍ನ ಮೋಹನ್ ಸುವರ್ಣ ದ್ವಿತೀಯ, ನಿಟ್ಟೆ ಗ್ರಾಮ ಪಂಚಾಯತ್‍ನ ರಾಜೇಶ ಆಚಾರ್ಯ ತೃತೀಯ, ಗ್ರಾಮ ಪಂಚಾಯತ್ ಸದಸ್ಯರಿಗೆ ರಿಂಗ್ – ಇನ್- ದ ವಿಕೆಟ್ 45 ವರ್ಷ ಒಳಗಿನ ಮಹಿಳೆಯರು ಶಿರೂರು ಗ್ರಾಮ ಪಂಚಾಯತ್‍ನ ಭಾರತಿ ಪ್ರಥಮ, ಕುಕ್ಕಂದೂರು ಗ್ರಾಮ ಪಂಚಾಯತ್‍ನ ಸುಮನಾ ದ್ವಿತೀಯ, ಗ್ರಾಮ ಪಂಚಾಯತ್ ಸದಸ್ಯರಿಗೆ ರಿಂಗ್ – ಇನ್- ದ ವಿಕೆಟ್ 45 ವರ್ಷ ಮೇಲ್ಪಟ್ಟ ಮಹಿಳೆಯರು ಕೊಲ್ಲೂರು ಗ್ರಾಮ ಪಂಚಾಯತ್‍ನ ಪ್ರಸನ್ನಾ ಶರ್ಮಾ ಪ್ರಥಮ, ಗಂಗೊಳ್ಳಿ ಗ್ರಾಮ ಪಂಚಾಯತ್‍ನ ಜಯಂತಿ ಖಾರ್ವಿ ದ್ವಿತೀಯ, ಶಿರೂರು ಗ್ರಾಮ ಪಂಚಾಯತ್‍ನ ಪದ್ಮಾವತಿ ತೃತೀಯ, ರಿಂಗ್ – ಇನ್- ದ ವಿಕೆಟ್ ಪುರುಷರು ಸಿಬ್ಬಂದಿಗೆ ಕಿರಿಮಂಜೇಶ್ವರ ಗ್ರಾಮ ಪಂಚಾಯತ್‍ನ ರಾಘವೇಂದ್ರ ಪ್ರಥಮ, ಉಪ್ಪಿನಂಗಡಿ ಗ್ರಾಮ ಪಂಚಾಯತ್‍ನ ಇಕ್ಬಾಲ್, ಸುಳ್ಯ ನಗರ ಪಂಚಾಯತ್‍ನ ಲೋಕೇಶ್ ಕುಮಾರ್ ತೃತೀಯ, ರಿಂಗ್ – ಇನ್- ದ ವಿಕೆಟ್ ಮಹಿಳೆಯರು ಸಿಬ್ಬಂದಿಗೆ ಕೋಟೇಶ್ವರ ಗ್ರಾಮ ಪಂಚಾಯತ್‍ನ ಭಾರತಿ ಪ್ರಥಮ, ಉಪ್ಪಿನಂಗಡಿ ಗ್ರಾಮ ಪಂಚಾಯತ್‍ನ ಗೀತಾ ಶೇಖರ್ ದ್ವಿತೀಯ, ಸುಳ್ಯ ಗ್ರಾಮ ಪಂಚಾಯತ್‍ನ ಸ್ವಾತಿ ತೃತೀಯ, ಮಡಿಕೆ ಒಡೆಯುವುದು ಪುರುಷರು ಸದಸ್ಯರಿಗೆ ಕುಂದಾಪುರ ಪುರಸಭೆ ರಾಘವೇಂದ್ರ ಪ್ರಥಮ, ನರಿಮೊಗ್ಗು ಗ್ರಾಮ ಪಂಚಾಯತ್‍ನ ಗಣೇಶ್ ಪುತ್ತೂರು ದ್ವಿತೀಯ, ಮೂಡುಬಿದ್ರೆ ಪುರಸಭೆ ಪ್ರಸಾದ್ ಕುಮಾರ್ ತೃತೀಯ, ಮಡಿಕೆ ಒಡೆಯುವುದು ಮಹಿಳೆಯರು ಸದಸ್ಯರಿಗೆ ಎಕ್ಕೂರು ಗ್ರಾಮ ಪಂಚಾಯತ್‍ನ ಸುರೇಖಾ ರೈ ಪ್ರಥಮ, ಪಾಂಡೇಶ್ವರ ಗ್ರಾಮ ಪಂಚಾಯತ್‍ನ ಸಂಧ್ಯಾ ರಾವ್ ದ್ವಿತೀಯ, ಶಿರಿಯಾರ ಗ್ರಾಮ ಪಂಚಾಯತ್‍ನ ಮೀನಾಕ್ಷಿ ತೃತೀಯ, ಮಡಿಕೆ ಒಡೆಯುವುದು ಪುರುಷರು ಸಿಬ್ಬಂದಿ ಬೈಂದೂರು ಗ್ರಾಮ ಪಂಚಾಯತ್‍ನ ಕಾರ್ತಿಕ್ ಪ್ರಥಮ, ಪುತ್ತೂರು ಗ್ರಾಮ ಪಂಚಾಯತ್‍ನ ಇಕ್ಬಾಲ್ ದ್ವಿತೀಯ, ಕೊಲ್ಲೂರು ಗ್ರಾಮ ಪಂಚಾಯತ್‍ನ ರಾಘವೇಂದ್ರ ತೃತೀಯ, ಮಡಿಕೆ ಒಡೆಯುವುದು ಮಹಿಳೆಯರು ಸಿಬ್ಬಂದಿ ಕುಂದಾಪುರ ಪುರಸಭೆ ಶಿಲ್ಪಾ ಪ್ರಥಮ, ಶಿರಿಯಾರ ಗ್ರಾಮ ಪಂಚಾಯತ್‍ನ ದೇವಕಿ ಕುಂದಾಪುರ ದ್ವಿತೀಯ, ಶಿರಿಯಾರ ಗ್ರಾಮ ಪಂಚಾಯತ್‍ನ ಸಂಗೀತ ತೃತೀಯ, ಛದ್ಮವೇಷ ಮಹಿಳೆಯರು ಕುಂಭಾಶಿ ಗ್ರಾಮ ಪಂಚಾಯತ್‍ನ ಶ್ವೇತಾ ಎಸ್. ಆರ್ ಪ್ರಥಮ, ಮರ್ನಾಡು ಗ್ರಾಮ ಪಂಚಾಯತ್‍ನ ಅಶ್ವಿನಿ ಬಿ ದ್ವಿತೀಯ, ತಲ್ಲೂರು ಗ್ರಾಮ ಪಂಚಾಯತ್‍ನ ರತ್ನ ತೃತೀಯ, ಛದ್ಮವೇಷ ಪುರುಷರು ಮೂಡುಬಿದ್ರೆ ಪುರಸಭೆ ನಾಗರಾಜ ಪೂಜಾರಿ ಪ್ರಥಮ, ಗಂಗೊಳ್ಳಿ ಗ್ರಾಮ ಪಂಚಾಯತ್‍ನ ಅನಿಲ್ ದ್ವಿತೀಯ, ಎಕ್ಕೂರು ಗ್ರಾಮ ಪಂಚಾಯತ್‍ನ ಸುದೀಪ್ ಆರ್ ಅಮೀನ್ ತೃತೀಯ, ಸಮಾದಾನಕರ ಬಹುಮಾನ ಪಡೆದವರು ಹಾರಾಡಿ ಗ್ರಾಮ ಪಂಚಾಯತ್‍ನ ಕುಮಾರ್ ಸುವರ್ಣ, ಪಾರಂಪಳ್ಳಿ ಗ್ರಾಮ ಪಂಚಾಯತ್‍ನ ಉದಯ ಪೂಜಾರಿ, ಮಾಳ ಗ್ರಾಮ ಪಂಚಾಯತ್‍ನ ಅಶೋಕ ಬರ್ವೆ,
    ಸೂಪರ್ ಮಿನಿಟ್ ಪರುಷರು ಉಪ್ಪಿನಂಗಡಿ ಗ್ರಾಮ ಪಂಚಾಯತ್‍ನ ಸುರೇಶ್ ಅತ್ರಮಜಲ್ ಪ್ರಥಮ, ಎಡಪದವು ಗ್ರಾಮ ಪಂಚಾಯತ್‍ನ ಕುಶಲ ಕುಮಾರ್ ದ್ವಿತೀಯ, ಕಾವಡಿ ಗ್ರಾಮ ಪಂಚಾಯತ್‍ನ ಪ್ರಕಾಶ ಚಂದ್ರ ಶೆಟ್ಟಿ ತೃತೀಯ, ಸೂಪರ್ ಮಿನಿಟ್ ಮಹಿಳೆಯರು ನಿಟ್ಟೆ ಗ್ರಾಮ ಪಂಚಾಯತ್‍ನ ಐಶ್ವರ್ಯ ಕಾರ್ಕಳ ಪ್ರಥಮ, ಕಿರಿಮಂಜೇಶ್ವರ ಗ್ರಾಮ ಪಂಚಾಯತ್‍ನ ಸುಶ್ಮಾ ಶೆಟ್ಟಿ ದ್ವಿತೀಯ, ತೋನ್ಸೆ ಗ್ರಾಮ ಪಂಚಾಯತ್‍ನ ವತ್ಸಲಾ ವಿನೋದ ಉಡುಪಿ ತೃತೀಯ, ಸಂಗೀತ ಸ್ಪರ್ಧೆ ಪುರುಷರು ಮಾಳ ಗ್ರಾಮ ಪಂಚಾಯತ್‍ನ ಅಶೋಕ ಬರ್ವ ಪ್ರಥಮ, ಕಾವ್ರಾಡಿ ಗ್ರಾಮ ಪಂಚಾಯತ್‍ನ ಲಿಯಾಕತ್ ಬೆಟಿ ದ್ವಿತೀಯ, ಅಳಿಕೆ ಗ್ರಾಮ ಪಂಚಾಯತ್‍ನ ಸದಾಶಿವ ಶೆಟ್ಟಿ ತೃತೀಯ, ಸಂಗೀತ ಸ್ಪರ್ಧೆ ಮಹಿಳೆಯರು ತೆಂಕ ಮಿಜಾರು ಗ್ರಾಮ ಪಂಚಾಯತ್‍ನ ನಮಿತ ಪ್ರಥಮ, ಗುತ್ತಿಗಾರು ಗ್ರಾಮ ಪಂಚಾಯತ್‍ನ ಲೀಲಾವತಿ ದ್ವಿತೀಯ, ಮುಚ್ಚೂರು ಗ್ರಾಮ ಪಂಚಾಯತ್‍ನ ಜಯಂತಿ ಶಂಕರ್ ತೃತೀಯ, ನಗರಾಡಳಿತ ಸಂಸ್ಥೆಗಳ ಹಗ್ಗಜಗ್ಗಾಟ 9 ಜನರ ಪುರುಷರ ತಂಡ ಕಾಪು ಪುರಸಭೆ ಪ್ರಥಮ, ಕಾರ್ಕಳ ಪುರಸಭೆ ದ್ವಿತೀಯ, ನಗರಾಡಳಿತ ಸಂಸ್ಥೆಗಳ ಹಗ್ಗಜಗ್ಗಾಟ 9 ಜನರ ಮಹಿಳೆಯರ ತಂಡ ಸೋಮೇಶ್ವರ ಗ್ರಾಮ ಪಂಚಾಯತ್ ಪ್ರಥಮ, ಉಳ್ಳಾಲ ಗ್ರಾಮ ಪಂಚಾಯತ್ ದ್ವಿತೀಯ, ಗ್ರಾಮ ಪಂಚಾಯತ್ ಹಗ್ಗಜಗ್ಗಾಟ 5 ಜನರ ಮಹಿಳೆಯರ ತಂಡ ನಿಟ್ಟೆ ಗ್ರಾಮ ಪಂಚಾಯತ್ ಪ್ರಥಮ, ಬೆಳ್ತಂಗಡಿ ಗ್ರಾಮ ಪಂಚಾಯತ್ ದ್ವಿತೀಯ, ಗ್ರಾಮ ಪಂಚಾಯತ್ ಹಗ್ಗಜಗ್ಗಾಟ 9 ಜನರ ಪುರುಷರ ತಂಡ ಶಿರ್ಲಾಡಿ ಗ್ರಾಮ ಪಂಚಾಯತ್ ಪ್ರಥಮ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ದ್ವಿತೀಯ, ಉದ್ಯಾವರ ಗ್ರಾಮ ಪಂಚಾಯತ್ ತೃತೀಯ, ಗ್ರಾಮ ಪಂಚಾಯತ್ ಹಗ್ಗಜಗ್ಗಾಟ 5 ಜನರ ಪುರುಷರ ತಂಡ ಕೌಕ್ರಾಡಿ ಗ್ರಾಮ ಪಂಚಾಯತ್ ಪ್ರಥಮ, ಮಾಳ ಗ್ರಾಮ ಪಂಚಾಯತ್ ದ್ವಿತೀಯ, ನಗರಾಡಳಿತ ಸಂಸ್ಥೆಗಳ 7 ಜನರ ಮಹಿಳೆಯರ ತ್ರೋಬಾಲ್ ತಂಡ ಕಾರ್ಕಳ ಪುರಸಭೆ ಪ್ರಥಮ, ಕುಂದಾಪುರ ಪುರಸಭೆ ದ್ವಿತೀಯ, ಗ್ರಾಮ ಪಂಚಾಯತ್ 7 ಜನರ ಮಹಿಳೆಯರ ತ್ರೋಬಾಲ್ ತಂಡ ಕುರ್ಕಾಲು ಗ್ರಾಮ ಪಂಚಾಯತ್ ಪ್ರಥಮ, ತಲ್ಲೂರು ಗ್ರಾಮ ಪಂಚಾಯತ್ ದ್ವಿತೀಯ ಸ್ಥಾನ ಪಡೆದುಕೊಂಡಿತು.

     

  • ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ಸಂಘಕ್ಕೆ ಶಿವಮೂರ್ತಿ ಕೆ. ಅವಿರೋಧ ಆಯ್ಕೆ

    ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ಸಂಘಕ್ಕೆ ಶಿವಮೂರ್ತಿ ಕೆ. ಅವಿರೋಧ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಐದನೇ ಬಾರಿಗೆ ಶಿವಮೂರ್ತಿ ಕೆ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಉಪಾಧ್ಯಕ್ಷರಾಗಿ ಭಾಸ್ಕರ್ ಶೆಟ್ಟಿ ಮಣೂರು, ನಿರ್ದೇಶಕರಾಗಿ ಎಂ.ಜಯರಾಮ ಶೆಟ್ಟಿ, ಪಾರ್ವತಿ, ದಿನೇಶ್ ಶೆಟ್ಟಿ , ಸಣ್ಣಕ್ಕ, ಸುಜಾತ ಶೆಟ್ಟಿ, ಕೃಷ್ಣಯ್ಯ ಶೆಟ್ಟಿ, ಶೈಲಜ ಆರ್ ಐತಾಳ್,ಸಾಧು ಪೂಜಾರಿ, ವಿಜಯ ಕುಂದರ್, ಅಕ್ಕಮ್ಮ ಸಿ ಅಯ್ಕೆಯಾಗಿದ್ದಾರೆ.

     

  • ಕೋಟ :ಹೋಬಳಿ ಮಟ್ಟದ ಗೋ ಕರುಗಳ ಪ್ರದರ್ಶನ, ಸ್ಪರ್ಧೆ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ

    ಕೋಟ :ಹೋಬಳಿ ಮಟ್ಟದ ಗೋ ಕರುಗಳ ಪ್ರದರ್ಶನ, ಸ್ಪರ್ಧೆ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ

    ಹೈನುಗಾರರಿಗೆ ಪ್ರೋತ್ಸಾಹಕ್ಕೆ ಪೂರಕ ವಾತಾವರಣ ಅಗತ್ಯ- ಸಮಾಜಸೇವಕ ಆನಂದ್ ಸಿ ಕುಂದರ್

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಹೈನುಗಾರಿಕೆಗೆ ಪ್ರೋತ್ಸಾಹಕರ ವಾತಾವರಣ ನಿರ್ಮಾಣಕ್ಕೆ ಸರಕಾರ ಯೋಜನೆಗಳನ್ನು ರೂಪಿಸಬೇಕಾದ ಅಗತ್ಯತೆ ಇದೆ ಎಂದು ಜನತಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆನಂದ್ ಸಿ ಕುಂದರ್ ಹೇಳಿದರು.

    ಇದೇ ಫೆ.20ರಂದು ಕೋಟದ ಶಾಂಭವೀ ಶಾಲಾ ಮೈದಾನದಲ್ಲಿ ವಿವಿಧ ಇಲಾಖೆ ಹಾಗೂ ಸಂಘಟನೆ ಮತ್ತು ಕರುಗಳ ಪ್ರದರ್ಶನ ಸಮಿತಿ ನೇತೃತ್ವದಲ್ಲಿ ಸಮಾಜಸೇವಕ ಆನಂದ್ ಸಿ ಕುಂದರ್ ರವರ ಹುಟ್ಟಹಬ್ಬದ ವರ್ಷೋತ್ಸವದ ಅಮೃತ ಗೌರವದ ಹಿನ್ನಲ್ಲೆಯಲ್ಲಿ ಹೋಬಳಿ ಮಟ್ಟದ ಗೋ ಕರುಗಳ ಪ್ರದರ್ಶನ, ಸ್ಪರ್ಧೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಪ್ರಸ್ತುತ ವಿದ್ಯಾಮಾನಗಳಲ್ಲಿ ಹೈನುಗಾರಿಕೆ ಸಂಕಷ್ಟ ಸ್ಥಿತಿಯನ್ನು ಅನುಭವಿಸುತ್ತಿದೆ ಈ ದಿಸೆಯಲ್ಲಿ ಹೊಸ ಹೊಸ ಆವಿಷ್ಕಾರಗಳ ಮೂಲಕ ಹೈನುಗಾರಿಕೆಯನ್ನು ಗಟ್ಟಿಗೊಳಿಸಬೇಕಾದ ಅಗತ್ಯತೆಯನ್ನು ಮನವರಿಕೆ ಮಾಡಿ ತಮ್ಮ ಹುಟ್ಟುಹಬ್ಬದ ವರ್ಷೋತ್ಸವಕ್ಕೆ ಪ್ರಕೃತಿದತ್ತವಾದ ಗೋ ಕರುಗಳ ಪ್ರದರ್ಶನಕ್ಕೆ ವೇದಿಕೆಯಾಗಿರಿಸಿದನ್ನು ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದರು.

    ಈ ವೇಳೆ ಗೋ ಕರುಗಳ ಸ್ಪರ್ಧೆ ಹಾಗೂ ಪ್ರದರ್ಶನ ಸಮಿತಿ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಸದಸ್ಯ ಕೆ.ಅನಂತಪದ್ಮನಾಭ ಐತಾಳ್,ಪಾರಂಪಳ್ಳಿ ಪರಿಸರದ ಹಿರಿಯ ಕೃಷಿಕ ರಘು ಮಧ್ಯಸ್ಥ,ಕೋಟತಟ್ಟು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶಿವಮೂರ್ತಿ ಕೆ,ಜನತಾ ಫಿಶ್ ಮಿಲ್ ನಿರ್ದೇಶಕ ಪ್ರಶಾಂತ್ ಎ. ಕುಂದರ್,ವ್ಯವಸ್ಥಾಪಕ ಶ್ರೀನಿವಾಸ್ ಕುಂದರ್,ಕೆ.ಎಂ ಎಫ್ ವಿಸ್ತೀರ್ಣಾಧಿಕಾರಿ ಸರಸ್ವತಿ ,ಕೋಟ ಪಶು ಆಸ್ಪತ್ರೆ ಇದರ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್,ಸಂತೆಕಟ್ಟೆ ಪಶು ಆಸ್ಪತ್ರೆ ಇದರ ವೈದ್ಯಾಧಿಕಾರಿ ಡಾ.ಮಂಜುನಾಥ ಅಡಿಗ,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಕೋಟ ಸಹಕಾರಿ ವ್ಯವಸಾಯಕ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ,ಪಂಚವರ್ಣ ಯುವಕ ಮಂಡಲದ ಸದಸ್ಯರು ಇದ್ದರು.ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರೆ, ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು.