Category: ಸುದ್ದಿ

  • ಕೋಟ ಗ್ರಾ.ಪಂಗೆ ಅಧ್ಯಕ್ಷರಾಗಿ ಜ್ಯೋತಿ ಬಿ.ಶೆಟ್ಟಿ, ಉಪಾಧ್ಯಕ್ಷರಾಗಿ ಜಿ.ಎನ್.ಪಾಂಡು ಆಯ್ಕೆ

    ಕೋಟ ಗ್ರಾ.ಪಂಗೆ ಅಧ್ಯಕ್ಷರಾಗಿ ಜ್ಯೋತಿ ಬಿ.ಶೆಟ್ಟಿ, ಉಪಾಧ್ಯಕ್ಷರಾಗಿ ಜಿ.ಎನ್.ಪಾಂಡು ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟ ಗ್ರಾಮಪಂಚಾಯತ್ ಎರಡನೆ ಅವಧಿಗೆ ನೂತನ ಅಧ್ಯಕ್ಷರಾಗಿ ಜ್ಯೋತಿ ಬಿ ಶೆಟ್ಟಿ , ಉಪಾಧ್ಯಕ್ಷರಾಗಿ ಜಿ.ಎನ್ ಪಾಂಡು ಪೂಜಾರಿ ಅವಿರೋಧವಾಗಿ ಆಯ್ಕೆಯಾದರು.

    25ಸದಸ್ಯ ಬಲದ ಕೋಟ ಗ್ರಾಮಪಂಚಾಯತ್‍ನಲ್ಲಿ ಬಿಜೆಪಿ ಬೆಂಬಲಿತ 23, ಕಾಂಗ್ರೆಸ್ ಬೆಂಬಲಿತ 2ಸದಸ್ಯರನ್ನು ಹೊಂದಿದೆ.
    ಶುಕ್ರವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬ್ರಹ್ಮಾವರ ಬೋರ್ಡ್ ಹೈಸ್ಕೂಲ್ ಉಪಪ್ರಾಂಶುಪಾಲೆ ಉಮಾ ಬಿ. ಪಾಲ್ಗೊಂಡರು.

    ಕೋಟ ಗ್ರಾಮಪಂಚಾಯತ್ ನಿರ್ಗಮಿತ ಅಧ್ಯಕ್ಷ ಅಜಿತ್ ದೇವಾಡಿಗ ಹಾಗೂ ಉಪಾಧ್ಯಕ್ಷೆ ಜಯಂತಿ ಪೂಜಾರಿ ನೂತನವಾಗಿ ಅಧಿಕಾರ ವಹಿಸಿಕೊಂಡ ಅಧ್ಯಕ್ಷ ಉಪಾಧ್ಯಕ್ಷರುಗಳಿಗೆ ಅಧಿಕಾರ ಹಸ್ತಾಂತರಿಸಿದರು.

    ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರ್ವಹಿಸಿದರು.ಪಂಚಾಯತ್ ಲೆಕ್ಕಪರಿಶೋಧಕಿ ಪೂರ್ಣಿಮಾ ಅಧಿಕಾರಿ ವಂದಿಸಿದರು.

  • ಐರೋಡಿ ಗ್ರಾ.ಪಂ ಅಧ್ಯಕ್ಷರಾಗಿ ಸಕು, ಉಪಾಧ್ಯಕ್ಷರಾಗಿ ಗೀತಾ ಶೆಟ್ಟಿ ಆಯ್ಕೆ

    ಐರೋಡಿ ಗ್ರಾ.ಪಂ ಅಧ್ಯಕ್ಷರಾಗಿ ಸಕು, ಉಪಾಧ್ಯಕ್ಷರಾಗಿ ಗೀತಾ ಶೆಟ್ಟಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಐರೋಡಿ ಗ್ರಾಮಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಶುಕ್ರವಾರ ಐರೋಡಿ ಗ್ರಾಮದಲ್ಲಿ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷರಾಗಿ ಸಕು, ಉಪಾಧ್ಯಕ್ಷರಾಗಿ ಗೀತಾ ನಾಮಪತ್ರ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಯಾಗಿ ಸಾಲಿಗ್ರಾಮ ಪ.ಪಂ ಮುಖ್ಯಾಧಿಕಾರಿ ಇಂದು ಶ್ರೀ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅಧ್ಯಕ್ಷರಾಗಿ ಸಕು, ಉಪಾಧ್ಯಕ್ಷರಾಗಿ ಗೀತಾ ಶೆಟ್ಟಿಯವರನ್ನು ಅಂತಿಮವಾಗಿ ಘೋಷಿಸಿದರು.

    ಐರೋಡಿ ಗ್ರಾಮಪಂಚಾಯತ್ ನಲ್ಲಿ ಒಟ್ಟು 16ಸಂಖ್ಯಾಬಲದಲ್ಲಿ 13ಬಿಜೆಪಿ ಬೆಂಬಲಿತರು ಹಾಗೂ 3ಕಾಂಗ್ರೆಸ್ ಬೆಂಬಲಿತರು ಇದ್ದು ಅವಿರೋಧ ಆಯ್ಕೆಯಲ್ಲಿ ಭಾಗಿಯಾದರು. ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಪಂಚಾಯತ್ ಸದಸ್ಯರು ಅಭಿನಂದನೆ ಸಲ್ಲಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.

    ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ,ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ರಮೇಶ್ ಕಾರಂತ್,ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸುರೇಶ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.

     

  • ಖಿದ್ಮಾಹ್ ಫೌಂಡೇಶನ್ ವತಿಯಿಂದ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ

    ಖಿದ್ಮಾಹ್ ಫೌಂಡೇಶನ್ ವತಿಯಿಂದ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಖಿದ್ಮಾಹ್ ಫೌಂಡೇಶನ್, ಕುಂದಾಪುರ-ಬೈಂದೂರು ತಾಲೂಕು ಘಟಕದ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ ಮಾಡಲಾಯಿತು.

    ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖಿದ್ಮಾಹ್ ಫೌಂಡೇಶನ್ ಅಧ್ಯಕ್ಷರಾದ ಶೇಖ್ ಅಬು ಮೊಹಮ್ಮದ್ ವಹಿಸಿದ್ದರು.

    ಆಸ್ಪತ್ರೆಯ ಮುಖ್ಯ ಆಡಳಿತ ಶಸ್ತ್ರಚಿಕಿತ್ಸಕರಾದ ಡಾ.ರೊಬರ್ಟ್ ರೆಬೆಲ್ಲೊ, ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ರಾಧಾಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

    ಸಂಸ್ಥೆಯ ಸದಸ್ಯರಾದ ಸೈಫುದ್ದೀನ್ ಖುರಾನ್ ಪಠಣ ಮಾಡಿದರು.ಉಪಾಧ್ಯಕ್ಷರಾದ ಅಸ್ಘರ್ ಆಲಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಮೊಹಮ್ಮದ್ ರಫೀಕ್ ವಂಡ್ಸೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

    ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ಇಬ್ರಾಹೀಮ್ ಬೆದ್ರೆ, ಮೊಹಮ್ಮದ್ ಹನೀಫ್, ಎಹೆತೆಶಾಮ್, ಎನ್.ಎಸ್ ಇರ್‍ಫಾನ್, ಆಶ್ರಫ್ ನಾಗೂರು ಭಾಗವಹಿಸಿದ್ದರು.

  • ಕುಂದಾಪುರ :ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾಲನೆ

    ಕುಂದಾಪುರ :ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾಲನೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :ಪಿ.ಎಂ.ಪೋಷಣ್ ಅಕ್ಷರ ದಾಸೋಹ ಕಾರ್ಯಕ್ರಮದಡಿ ಶಾಲಾ ಮಕ್ಕಳಿಗೆ ಅಪೌಷ್ಠಿಕತೆ ಮತ್ತು ಅನಿಮಿಯ ನಿವಾರಣೆಗಾಗಿ ಸರ್ಕಾರಿ ಮತ್ತು ಅನುದಾನಿಕ ಶಾಲೆಗಳಲ್ಲಿ 1-10ನೇ ತರಗತಿ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಕುಂದಾಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಚಾಲನೆ ನೀಡಿದರು.

    ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟದೊಂದಿಗೆ ಪೂರಕ ಪೌಷ್ಠಿಕ ಆಹಾರವಾಗಿ ಮೊಟ್ಟೆಯನ್ನು, ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು, ಶೇಂಗಾ ಚಿಕ್ಕಿಯನ್ನು ವಿತರಿಸಲಾಗುತ್ತಿದೆ.

  • ಗೋಪಾಡಿ ಗ್ರಾ.ಪಂ. ಅಧ್ಯಕ್ಷರಾಗಿ ಸುರೇಶ್ ಶೆಟ್ಟಿ, ಉಪಾಧ್ಯಕ್ಷರಾಗಿ ಶಾಂತ ಆಯ್ಕೆ

    ಗೋಪಾಡಿ ಗ್ರಾ.ಪಂ. ಅಧ್ಯಕ್ಷರಾಗಿ ಸುರೇಶ್ ಶೆಟ್ಟಿ, ಉಪಾಧ್ಯಕ್ಷರಾಗಿ ಶಾಂತ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಗೋಪಾಡಿ ಗ್ರಾಮ ಪಂಚಾಯತ್‌ನ 2ನೇ ಅವಧಿಗೆ ಅಧ್ಯಕ್ಷರಾಗಿ ಸತತ ೪ ಬಾರಿ ಸದಸ್ಯರಾದ ಬಿಜೆಪಿ ಬೆಂಬಲಿತ ಸುರೇಶ್ ಶೆಟ್ಟಿ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಶಾಂತ ಇವರು ಅವಿರೋಧವಾಗಿ ಆಯ್ಕೆಯಾದರು.

    ಈ ಗ್ರಾಮ ಪಂಚಾಯತ್‌ನಲ್ಲಿ ಒಟ್ಟು ೯ ಸ್ಥಾನಗಳಿದ್ದು ಈ ಪೈಕಿ ಬಿಜೆಪಿ ಬೆಂಬಲಿತ ೯ ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯ ಸಾಧಿಸಿದ್ದರು.

    ಈ ಬಾರಿಯ ೨ನೇ ಅವಧಿಗೆ ಚುನಾವಣೆಯಲ್ಲಿ ಸರಕಾರದ ನಿಯಮಗಳಂತೆ ಅಧ್ಯಕ್ಷ ಪಟ್ಟ ಸಾಮಾನ್ಯ ವರ್ಗ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಜಾತಿ ಮಹಿಳೆಗೆ ಮೀಸಲಾತಿ ಪ್ರಕಟವಾಗಿದ್ದು ಈ ೨ ಹುದ್ದೆಗಳು ಯಾವುದೇ ಗೊಂದಲಗಳಿಲ್ಲದೇ ಅವಿರೋಧವಾಗಿ ಆಯ್ಕೆಯಾಯಿತು.

    ಕುಂದಾಪುರ ಅರಣ್ಯ ಇಲಾಖೆ ಆರ್‌ಎಫ್‌ಒ ಕಿರಣ್ ಬಾಬು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಚುನಾವಣಾಕಾರಿಯಾಗಿ ಚುನಾವಣಾ ಕ್ರಮಗಳನ್ನು ನಡೆಸಿಕೊಟ್ಟರು.

  • ಬಸ್ರೂರು ಗ್ರಾ.ಪಂ. ಅಧ್ಯಕ್ಷರಾಗಿ ದಿನಕರ ಶೆಟ್ಟಿ, ಉಪಾಧ್ಯಕ್ಷರಾಗಿ ಭಾಗಿರಥಿ ಆಯ್ಕೆ

    ಬಸ್ರೂರು ಗ್ರಾ.ಪಂ. ಅಧ್ಯಕ್ಷರಾಗಿ ದಿನಕರ ಶೆಟ್ಟಿ, ಉಪಾಧ್ಯಕ್ಷರಾಗಿ ಭಾಗಿರಥಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ..

    ಕುಂದಾಪುರ : ಬಸ್ರೂರು ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ದಿನಕರ ಶೆಟ್ಟಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ದಿನಕರ ಶೆಟ್ಟಿ, ಕಾಂಗ್ರೆಸ್ ಬೆಂಬಲತರಾಗಿ ಗಿರಿಜಾ ಶೆಟ್ಟಿ ನಾಮಪತ್ರ ಸಲ್ಲಿಸಿದ್ದರು. ಇಲ್ಲಿ ಒಟ್ಟು 17 ಸ್ಥಾನವಿದ್ದು, ಬಿಜೆಪಿ 11, ಕಾಂಗ್ರೆಸ್ 5, ಸಿಪಿಐಎಂ 1 ಬೆಂಬಲಿತದ್ದಾರೆ. ಚುನಾವಣೆಯಲ್ಲಿ 11 ಮತಗಳನ್ನು ಪಡೆದರು. ಗಿರಿಜಾ ಶೆಟ್ಟಿ 5 ಮತ ಪಡೆದರು. 1 ಮತ ಅಸಿಂಧುವಾಯಿತು.
    ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಭಾಗಿರಥಿ ಆಯ್ಕೆಯಾದರು.
    ಬಸ್ರೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ ಹಿಂ.ವ.ಬ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂ.ವ.ಅ.-ಮ ಸ್ಥಾನಕ್ಕೆ ಮೀಸಲಾಗಿತ್ತು. ಚುನಾವನಾಧಿಕಾರಿಯಾಗಿ ಕುಂದಾಪುರ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಶಾಂತ ಎಮ್, ಕರ್ತವ್ಯ ನಿರ್ವಹಿಸಿದರು.

  • ಕುಂದಾಪುರ: “ಚಿಕ್ಕಮ್ಮಸಾಲ್’ ಮರು ನಾಮಕರಣಕ್ಕೆ ಆಗ್ರಹ

    ಕುಂದಾಪುರ: “ಚಿಕ್ಕಮ್ಮಸಾಲ್’ ಮರು ನಾಮಕರಣಕ್ಕೆ ಆಗ್ರಹ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಬಹಳ ಹಿಂದೆ ಇದ್ದ ಚಿಕ್ಕಮ್ಮಸಾಲು ಹೆಸರನ್ನು ಚಿಕ್ಕನ್ ಸಾಲ್ ಎಂದು ಕರೆಯಲಾಗುತ್ತಿದ್ದು, ಚಿಕ್ಕಮ್ಮ ಸಾಲು ಎಂದು ಮರು ನಾಮಕರಣ ಮಾಡುವಂತೆ ಆಗ್ರಹಿಸಿ ಕುಂದಾಪುರ ಪುರಸಭೆಗೆ ಮನವಿ ಮಾಡಲಾಯಿತು.

    ಅನಾದಿ ಕಾಲದಿಂದಲೂ ಇದ್ದ ‘ಚಿಕ್ಕಮ್ಮ ಸಾಲು’ ಹೆಸರನ್ನು ಈಗಿನ ಆಡು ಭಾಷೆಗೆ ಬದಲಾಯಿಸಿ ಅನಾದಿಕಾಲದ ಹೆಸರಿಗೆ ಕಳಂಕ ತಂದಿದ್ದಾರೆ. ಹಿಂದೆ ಕಳುವಿನ ಬಾಗಿಲು (ದೋಣಿ ದಾಟಲು ಇರುವ ಸ್ಥಳ)ಇದ್ದು ಅಲ್ಲಿ ದೋಣಿ ದಾಟಿಸುವ ಚಿಕ್ಕಣ್ಣ ಎಂಬಾತ ದೋಣಿಯನ್ನು ಆನಗಳ್ಳಿಯಿಂದ ಚಿಕ್ಕಮ್ಮ ದೇವಸ್ಥಾನಕ್ಕೆ ಜನಗಳನ್ನು ದಾಟಿಸುತ್ತಿದ್ದ. ಇದರಿಂದಾಗಿ ಇಲ್ಲಿಗೆ ಚಿಕ್ಕಣ್ಣ ಸಾಲು ಎಂಬ ಹೆಸರಾಗಿತ್ತು.
    ಕಾಲ ಕಳೆದಂತೆ ಸೇತುವೆ ನಿರ್ಮಾಣಗೊಂಡಿತ್ತು. ಬಳಿಕ ನೆರೆ ಪ್ರವಾಹದಲ್ಲಿ ಸೇತುವೆಯು ಮುಳುಗಡೆಗೊಂಡಿತ್ತು. ಮರು ನಿರ್ಮಾಣದ ವೇಳೆಗೆ ಚಿಕ್ಕಮ್ಮನ ದೇವಸ್ಥಾನ ಇದ್ದುದ್ದರಿಂದ ಚಿಕ್ಕಮ್ಮ ಸಾಲು ಎಂದು ಕರೆಯಲ್ಪಟ್ಟಿತ್ತು. ಅದು ಕಾಲ ಕಳೆದಂತೆ ಚಿಕನ್ ಸಾಲ್ ಆಗಿ ಆಡು ಭಾಷೆಯಾಯಿತು.

    ಆದುದರಿಂದ ಹಿಂದೆ ಇದ್ದ ಚಿಕ್ಕಮ್ಮಸಾಲು ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿ ಪುರಸಭೆ ಮುಖ್ಯಾಧಿಕಾರಿ ಹೆಚ್ ಮಂಜುನಾಥ ಅವರಿಗೆ ಮನವಿ ನೀಡಲಾಯಿತು. ಈ ಸಂದರ್ಬಬ ಸಾಮಾಜಿಕ ಹೊರಾಟಗಾರ ದಿನೇಶ್ ಪುತ್ರನ್ ವಿಠಲವಾಡಿ, ನಿತಿನ್ ವಿಠಲವಾಡಿ, ಪುರಸಭಾ ಸದಸ್ಯ ಗಿರೀಶ ಜಿ.ಕೆ, ವೆಂಕಟೇಶ ಪ್ರಭು,(ಚಿಕ್ಕಮ್ಮ ಸಾಲ್) ಭರತ್, ಹರ್ಷಿತ್ ಮೊದಲಾದವರಿದ್ದರು.

  • ಕಾಲ್ತೋಡು ಗ್ರಾ.ಪಂ. ಅಧ್ಯಕ್ಷರಾಗಿ ಬಿ. ಅಣ್ಣಪ್ಪ ಶೆಟ್ಟಿ ಭಟ್ನಾಡಿ ಉಪಾಧ್ಯಕ್ಷರಾಗಿ ಗೌರಿ ಪೂಜಾರಿ ಆಯ್ಕೆ

    ಕಾಲ್ತೋಡು ಗ್ರಾ.ಪಂ. ಅಧ್ಯಕ್ಷರಾಗಿ ಬಿ. ಅಣ್ಣಪ್ಪ ಶೆಟ್ಟಿ ಭಟ್ನಾಡಿ ಉಪಾಧ್ಯಕ್ಷರಾಗಿ ಗೌರಿ ಪೂಜಾರಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕಾಲ್ತೋಡು ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಬಿ. ಅಣ್ಣಪ್ಪ ಶೆಟ್ಟಿ ಭಟ್ನಾಡಿ ಅವರು 3ನೇ ಭಾರಿಗೆ, ಉಪಾಧ್ಯಕ್ಷರಾಗಿ ಗೌರಿ ಪೂಜಾರಿ ಆಯ್ಕೆಯಾಗಿದ್ದಾರೆ.

    10 ಕಾಂಗ್ರೆಸ್ ಹಾಗೂ 3 ಬಿಜೆಪಿ ಬೆಂಬಲಿತ ಸದಸ್ಯ ಬಲವಿರುವ ಕಾಲ್ತೋಡು ಪಂಚಾಯತಿಯಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಬಂದಿತ್ತು.

  • ಗೊಳಿಹೊಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ವಸಂತ್ ಹೆಗ್ಢೆ ಹಾಗೂ ಉಪಾಧ್ಯಕ್ಷರಾಗಿ ಇಂದಿರಾ ಆಯ್ಕೆ

    ಗೊಳಿಹೊಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ವಸಂತ್ ಹೆಗ್ಢೆ ಹಾಗೂ ಉಪಾಧ್ಯಕ್ಷರಾಗಿ ಇಂದಿರಾ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಗೊಳಿಹೊಳೆ ಗ್ರಾಮ ಪಂಚಾಯಿತಿನ ಎರಡನೇ ಅವಧಿಗೆ ಗೊಳಿಹೊಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ವಸಂತ್ ಹೆಗ್ಢೆ ಹಾಗೂ ಉಪಾಧ್ಯಕ್ಷರಾಗಿ ಇಂದಿರಾ ಆಯ್ಕೆಯಾಗಿದ್ದಾರೆ.

    ಗೊಳಿಹೊಳೆ ಗ್ರಾಮ ಪಂಚಾಯಿತಿನಲ್ಲಿ ಒಟ್ಟು 16 ಸದಸ್ಯರ ಬಲವನ್ನು ಹೊಂದಿದ್ದು, ಅದರಲ್ಲಿ 10 ಜನ ಕಾಂಗ್ರೆಸ್ ಬೆಂಬಲಿತ ಸದಸ್ಯರು, 6 ಜನ ಬಿಜೆಪಿ ಬೆಂಬಲಿತ ಸದಸ್ಯರು ಇದ್ದಾರೆ.

  • ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಪ್ರತಿಭಟನಾ ಸಪ್ತಾಹ – ಆಗಸ್ಟ್ 21, 24ರಂದು ರಾಜ್ಯ ಮಟ್ಟದ ಹೋರಾಟ

    ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಪ್ರತಿಭಟನಾ ಸಪ್ತಾಹ – ಆಗಸ್ಟ್ 21, 24ರಂದು ರಾಜ್ಯ ಮಟ್ಟದ ಹೋರಾಟ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಫುರ: ಕಟ್ಟಡ ನಿರ್ಮಾಣ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ರಿ) CWFI-CITU ಸಂಘಟನೆ ರಾಜ್ಯ ವ್ಯಾಪಿ ಆಗಸ್ಟ್ 17 ರಿಂದ 23 ವರೆಗೆ ಪ್ರಚಾರಾಂದೋಲನ ನಡೆಸಿ 24 ರಂದು ಜಿಲ್ಲಾ ಕೇಂದ್ರಗಳಲ್ಲಿ ಬೆಂಗಳೂರು ಕಲ್ಯಾಣ ಮಂಡಳಿ ಎದುರುಗಡೆ ಪ್ರತಿಭಟನೆ ನಡೆಸಲಿದೆ ಎಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) CWFI-CITUತಿಳಿಸಿದೆ.

    ಇದರ ಅಂಗವಾಗಿ ಆಗಸ್ಟ್ 21ರಂದು ಕುಂದಾಪುರ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಹಾಗೂ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ರಾಜ್ಯ ಕಾರ್ಮಿಕ ಸಚಿವರಿಗೆ ಮನವಿ ನೀಡಲಿದ್ದಾರೆ. ಆಗಸ್ಟ್ 24 ಡಿಸಿ ಕಚೇರಿ ಚಲೋ ಹಾಗೂ ಬೆಂಗಳೂರಿನ ಕಲ್ಯಾಣ ಮಂಡಳಿ ಎದುರು ಧರಣಿ ನಡೆಯಲಿದ್ದು, ಅಂದು ಬೆಳಿಗ್ಗೆ 10 ಗಂಟೆಗೆ ಮಣಿಪಾಲ ಟೈಗರ್ ಸರ್ಕಲ್ ನಿಂದ ಜಿಲ್ಲೆಯ ಸಹಸ್ರಾರು ಕಟ್ಟಡ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಹೊರಟು ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ.

    ಕಲ್ಯಾಣ ಮಂಡಳಿಯಲ್ಲಿ ಬಾಕಿ ಇರುವ ಶೈಕ್ಷಣಿಕ ಧನಸಹಾಯ ಅರ್ಜಿ ವಿಲೇವಾರಿ, ಕಾರ್ಡ್ ನವೀಕರಣಕ್ಕೆ ವೇತನ ಚೀಟಿ, ಹಾಜರಾತಿ ಪಟ್ಟಿ ಕಡ್ಡಾಯ ಆದೇಶವನ್ನು ವಾಪಸ್, ಹೊಸ ನೋಂದಣಿಗೆ ಕಾರ್ಮಿಕ ಸಂಘ ಹಾಗೂ ಇಲಾಖೆಗೆ ಮಾತ್ರ ಅವಕಾಶ ನೀಡಬೇಕು. ಕಟ್ಟಡ ಕಾರ್ಮಿಕರ ಕುಟುಂಬಕ್ಕೆ ಆರೋಗ್ಯ ಸಂಜೀವಿನಿ ಜಾರಿ, ತಿರಸ್ಕ್ರತ ಪಿಂಚಣಿ ಅರ್ಜಿ ಪುರಸ್ಕರಿಸಬೇಕು, ಕಾರ್ಮಿಕ ಇಲಾಖೆಯೇ ಜೀವಿತಾವಧಿ ಪ್ರಮಾಣಪತ್ರ ನೀಡಬೇಕು. ಯಾವುದೇ ಸ್ಥಳದಲ್ಲಿ ಅಪಘಾತವಾಗಿ ಅಂಗವೂನವಾದರೂ ಪಿಂಚಣಿ ನೀಡಬೇಕು, ಅವಲಂಬಿತ ಮಕ್ಕಳಿಗೆ ಕೊನೆವರೆಗೂ ಸೌಲಭ್ಯ, ಮಂಡಳಿಯ ಹಣವನ್ನು ಇಲಾಖೆಗಾಗಿಯೇ ಬಳಸಿಕೊಳ್ಳಬೇಕು. ಮನೆ ನಿರ್ಮಾಣಕ್ಕೆ ಒಂದು ಬಾರಿ ರೂ. 5ಲಕ್ಷ ಸಹಾಯಧನ ನೀಡುವುದು, ಭವಿಷ್ಯನಿಧಿ ಜ್ಯಾರಿ, ಪ್ರತೀ ತಾಲೂಕಿಗೆ ಕಾರ್ಮಿಕ ನಿರೀಕ್ಷಕರ ನೇಮಕಾತಿ, ಕಡಿಮೆ ದರಕ್ಕೆ ಮರಳು ನೀಡುವುದು ರಾಜ್ಯದ ಮುಂದಿರುವ ಬೇಡಿಕೆಗಳಾದರೆ, ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ದುರ್ಬಳಕೆ ತಡೆಯುವುದು, ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳ ರದ್ದತಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ಮತ್ತು ಸೇವಾ ಷರತ್ತುಗಳು) ಕಾಯ್ದೆ -1996 ಮತ್ತು ಸೆಸ್ ಕಾಯ್ದೆ -1996 ಹಾಗೂ ಅಂತರ್ ರಾಜ್ಯ ವಲಸೆ ಕಾರ್ಮಿಕರ ಕಾಯ್ದೆ -1979 ಕಾಯ್ದೆ ಬಲಪಡಿಸುವುದು, ಕಟ್ಟಡ ಸಾಮಾಗ್ರಿಗಳ ಬೆಲೆ ಏರಿಕೆ ತಡೆಯುವುದು, ಕೇಂದ್ರ ಸರ್ಕಾರದ ಮುಂದಿರುವ ಬೇಡಿಕೆಗಳಾಗಿವೆ,