ಕುಂದಾಪುರ ಮಿರರ್ ಸುದ್ದಿ…

ಕುಂದಾಫುರ: ಕಟ್ಟಡ ನಿರ್ಮಾಣ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ರಿ) CWFI-CITU ಸಂಘಟನೆ ರಾಜ್ಯ ವ್ಯಾಪಿ ಆಗಸ್ಟ್ 17 ರಿಂದ 23 ವರೆಗೆ ಪ್ರಚಾರಾಂದೋಲನ ನಡೆಸಿ 24 ರಂದು ಜಿಲ್ಲಾ ಕೇಂದ್ರಗಳಲ್ಲಿ ಬೆಂಗಳೂರು ಕಲ್ಯಾಣ ಮಂಡಳಿ ಎದುರುಗಡೆ ಪ್ರತಿಭಟನೆ ನಡೆಸಲಿದೆ ಎಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) CWFI-CITUತಿಳಿಸಿದೆ.
ಇದರ ಅಂಗವಾಗಿ ಆಗಸ್ಟ್ 21ರಂದು ಕುಂದಾಪುರ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಹಾಗೂ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ರಾಜ್ಯ ಕಾರ್ಮಿಕ ಸಚಿವರಿಗೆ ಮನವಿ ನೀಡಲಿದ್ದಾರೆ. ಆಗಸ್ಟ್ 24 ಡಿಸಿ ಕಚೇರಿ ಚಲೋ ಹಾಗೂ ಬೆಂಗಳೂರಿನ ಕಲ್ಯಾಣ ಮಂಡಳಿ ಎದುರು ಧರಣಿ ನಡೆಯಲಿದ್ದು, ಅಂದು ಬೆಳಿಗ್ಗೆ 10 ಗಂಟೆಗೆ ಮಣಿಪಾಲ ಟೈಗರ್ ಸರ್ಕಲ್ ನಿಂದ ಜಿಲ್ಲೆಯ ಸಹಸ್ರಾರು ಕಟ್ಟಡ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಹೊರಟು ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ.
ಕಲ್ಯಾಣ ಮಂಡಳಿಯಲ್ಲಿ ಬಾಕಿ ಇರುವ ಶೈಕ್ಷಣಿಕ ಧನಸಹಾಯ ಅರ್ಜಿ ವಿಲೇವಾರಿ, ಕಾರ್ಡ್ ನವೀಕರಣಕ್ಕೆ ವೇತನ ಚೀಟಿ, ಹಾಜರಾತಿ ಪಟ್ಟಿ ಕಡ್ಡಾಯ ಆದೇಶವನ್ನು ವಾಪಸ್, ಹೊಸ ನೋಂದಣಿಗೆ ಕಾರ್ಮಿಕ ಸಂಘ ಹಾಗೂ ಇಲಾಖೆಗೆ ಮಾತ್ರ ಅವಕಾಶ ನೀಡಬೇಕು. ಕಟ್ಟಡ ಕಾರ್ಮಿಕರ ಕುಟುಂಬಕ್ಕೆ ಆರೋಗ್ಯ ಸಂಜೀವಿನಿ ಜಾರಿ, ತಿರಸ್ಕ್ರತ ಪಿಂಚಣಿ ಅರ್ಜಿ ಪುರಸ್ಕರಿಸಬೇಕು, ಕಾರ್ಮಿಕ ಇಲಾಖೆಯೇ ಜೀವಿತಾವಧಿ ಪ್ರಮಾಣಪತ್ರ ನೀಡಬೇಕು. ಯಾವುದೇ ಸ್ಥಳದಲ್ಲಿ ಅಪಘಾತವಾಗಿ ಅಂಗವೂನವಾದರೂ ಪಿಂಚಣಿ ನೀಡಬೇಕು, ಅವಲಂಬಿತ ಮಕ್ಕಳಿಗೆ ಕೊನೆವರೆಗೂ ಸೌಲಭ್ಯ, ಮಂಡಳಿಯ ಹಣವನ್ನು ಇಲಾಖೆಗಾಗಿಯೇ ಬಳಸಿಕೊಳ್ಳಬೇಕು. ಮನೆ ನಿರ್ಮಾಣಕ್ಕೆ ಒಂದು ಬಾರಿ ರೂ. 5ಲಕ್ಷ ಸಹಾಯಧನ ನೀಡುವುದು, ಭವಿಷ್ಯನಿಧಿ ಜ್ಯಾರಿ, ಪ್ರತೀ ತಾಲೂಕಿಗೆ ಕಾರ್ಮಿಕ ನಿರೀಕ್ಷಕರ ನೇಮಕಾತಿ, ಕಡಿಮೆ ದರಕ್ಕೆ ಮರಳು ನೀಡುವುದು ರಾಜ್ಯದ ಮುಂದಿರುವ ಬೇಡಿಕೆಗಳಾದರೆ, ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ದುರ್ಬಳಕೆ ತಡೆಯುವುದು, ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳ ರದ್ದತಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ಮತ್ತು ಸೇವಾ ಷರತ್ತುಗಳು) ಕಾಯ್ದೆ -1996 ಮತ್ತು ಸೆಸ್ ಕಾಯ್ದೆ -1996 ಹಾಗೂ ಅಂತರ್ ರಾಜ್ಯ ವಲಸೆ ಕಾರ್ಮಿಕರ ಕಾಯ್ದೆ -1979 ಕಾಯ್ದೆ ಬಲಪಡಿಸುವುದು, ಕಟ್ಟಡ ಸಾಮಾಗ್ರಿಗಳ ಬೆಲೆ ಏರಿಕೆ ತಡೆಯುವುದು, ಕೇಂದ್ರ ಸರ್ಕಾರದ ಮುಂದಿರುವ ಬೇಡಿಕೆಗಳಾಗಿವೆ,











