ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬಹಳ ಹಿಂದೆ ಇದ್ದ ಚಿಕ್ಕಮ್ಮಸಾಲು ಹೆಸರನ್ನು ಚಿಕ್ಕನ್ ಸಾಲ್ ಎಂದು ಕರೆಯಲಾಗುತ್ತಿದ್ದು, ಚಿಕ್ಕಮ್ಮ ಸಾಲು ಎಂದು ಮರು ನಾಮಕರಣ ಮಾಡುವಂತೆ ಆಗ್ರಹಿಸಿ ಕುಂದಾಪುರ ಪುರಸಭೆಗೆ ಮನವಿ ಮಾಡಲಾಯಿತು.
ಅನಾದಿ ಕಾಲದಿಂದಲೂ ಇದ್ದ ‘ಚಿಕ್ಕಮ್ಮ ಸಾಲು’ ಹೆಸರನ್ನು ಈಗಿನ ಆಡು ಭಾಷೆಗೆ ಬದಲಾಯಿಸಿ ಅನಾದಿಕಾಲದ ಹೆಸರಿಗೆ ಕಳಂಕ ತಂದಿದ್ದಾರೆ. ಹಿಂದೆ ಕಳುವಿನ ಬಾಗಿಲು (ದೋಣಿ ದಾಟಲು ಇರುವ ಸ್ಥಳ)ಇದ್ದು ಅಲ್ಲಿ ದೋಣಿ ದಾಟಿಸುವ ಚಿಕ್ಕಣ್ಣ ಎಂಬಾತ ದೋಣಿಯನ್ನು ಆನಗಳ್ಳಿಯಿಂದ ಚಿಕ್ಕಮ್ಮ ದೇವಸ್ಥಾನಕ್ಕೆ ಜನಗಳನ್ನು ದಾಟಿಸುತ್ತಿದ್ದ. ಇದರಿಂದಾಗಿ ಇಲ್ಲಿಗೆ ಚಿಕ್ಕಣ್ಣ ಸಾಲು ಎಂಬ ಹೆಸರಾಗಿತ್ತು.
ಕಾಲ ಕಳೆದಂತೆ ಸೇತುವೆ ನಿರ್ಮಾಣಗೊಂಡಿತ್ತು. ಬಳಿಕ ನೆರೆ ಪ್ರವಾಹದಲ್ಲಿ ಸೇತುವೆಯು ಮುಳುಗಡೆಗೊಂಡಿತ್ತು. ಮರು ನಿರ್ಮಾಣದ ವೇಳೆಗೆ ಚಿಕ್ಕಮ್ಮನ ದೇವಸ್ಥಾನ ಇದ್ದುದ್ದರಿಂದ ಚಿಕ್ಕಮ್ಮ ಸಾಲು ಎಂದು ಕರೆಯಲ್ಪಟ್ಟಿತ್ತು. ಅದು ಕಾಲ ಕಳೆದಂತೆ ಚಿಕನ್ ಸಾಲ್ ಆಗಿ ಆಡು ಭಾಷೆಯಾಯಿತು.
ಆದುದರಿಂದ ಹಿಂದೆ ಇದ್ದ ಚಿಕ್ಕಮ್ಮಸಾಲು ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿ ಪುರಸಭೆ ಮುಖ್ಯಾಧಿಕಾರಿ ಹೆಚ್ ಮಂಜುನಾಥ ಅವರಿಗೆ ಮನವಿ ನೀಡಲಾಯಿತು. ಈ ಸಂದರ್ಬಬ ಸಾಮಾಜಿಕ ಹೊರಾಟಗಾರ ದಿನೇಶ್ ಪುತ್ರನ್ ವಿಠಲವಾಡಿ, ನಿತಿನ್ ವಿಠಲವಾಡಿ, ಪುರಸಭಾ ಸದಸ್ಯ ಗಿರೀಶ ಜಿ.ಕೆ, ವೆಂಕಟೇಶ ಪ್ರಭು,(ಚಿಕ್ಕಮ್ಮ ಸಾಲ್) ಭರತ್, ಹರ್ಷಿತ್ ಮೊದಲಾದವರಿದ್ದರು.











