ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಖಿದ್ಮಾಹ್ ಫೌಂಡೇಶನ್, ಕುಂದಾಪುರ-ಬೈಂದೂರು ತಾಲೂಕು ಘಟಕದ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖಿದ್ಮಾಹ್ ಫೌಂಡೇಶನ್ ಅಧ್ಯಕ್ಷರಾದ ಶೇಖ್ ಅಬು ಮೊಹಮ್ಮದ್ ವಹಿಸಿದ್ದರು.
ಆಸ್ಪತ್ರೆಯ ಮುಖ್ಯ ಆಡಳಿತ ಶಸ್ತ್ರಚಿಕಿತ್ಸಕರಾದ ಡಾ.ರೊಬರ್ಟ್ ರೆಬೆಲ್ಲೊ, ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ರಾಧಾಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಸಂಸ್ಥೆಯ ಸದಸ್ಯರಾದ ಸೈಫುದ್ದೀನ್ ಖುರಾನ್ ಪಠಣ ಮಾಡಿದರು.ಉಪಾಧ್ಯಕ್ಷರಾದ ಅಸ್ಘರ್ ಆಲಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಮೊಹಮ್ಮದ್ ರಫೀಕ್ ವಂಡ್ಸೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ಇಬ್ರಾಹೀಮ್ ಬೆದ್ರೆ, ಮೊಹಮ್ಮದ್ ಹನೀಫ್, ಎಹೆತೆಶಾಮ್, ಎನ್.ಎಸ್ ಇರ್‍ಫಾನ್, ಆಶ್ರಫ್ ನಾಗೂರು ಭಾಗವಹಿಸಿದ್ದರು.











