ಜು.4.ಕ್ಕೆ ಕೋಟದ ಪಂಚವರ್ಣ ಸಂಘಟನೆಯ 47ನೇ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ – ಹಿರಿಯ ಕೃಷಿಕರಾದ ಮಣೂರು ಭಾಗಿ ಪೂಜಾರಿ ಆಯ್ಕೆ

ಕುಂದಾಪುರ ಮಿರರ್ ಸುದ್ದಿ…

ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಇದರ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ರೈತ ಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಸ್ನೇಹಕೂಟ ಮಣೂರು ಇವರುಗಳ ಸಂಯುಕ್ತ ಸಹಯೋಗದೊಂದಿಗೆ ಪ್ರತಿ ತಿಂಗಳು ಸಾಧಕ ಕೃಷಿಕನನ್ನು ಗುರುತಿಸುವ ಸರಣಿ ಕಾರ್ಯಕ್ರಮ, ರೈತರೆಡೆಗೆ ನಮ್ಮ ನಡಿಗೆ ಮಾಲಿಕೆಗೆ ಇದೀಗ 47ರ ಸರಣಿಯ ಹಿನ್ನಲ್ಲೆಯಲ್ಲಿ ಸ್ನೇಹಕೂಟ ದಶಮ ಸಂಭ್ರಮದ ಪ್ರಯುಕ್ತ ಸಾಧಕ ಕೃಷಿಕರ ಮನೆಯಂಗಳಕ್ಕೆ ತೆರಳಿ ಕೃಷಿ ಪರಿಕರವನ್ನು ನೀಡಿ ಗೌರವಿಸುವ ಕಾರ್ಯ ಇದೇ ಜು.4ರ ಶುಕ್ರವಾರ ಸಂಜೆ 4.30ಕ್ಕೆ ನಡೆಯಲಿದ್ದು, ಕೃಷಿ ಕ್ಷೇತ್ರದ ಹಿರಿಯ ಸಾಧಕಿ ಮಣೂರು ನಡುಬೆಟ್ಟು ಭಾಗಿ ಪೂಜಾರಿ ಇವರನ್ನು ಗೌರವಿಸುವ ಕಾರ್ಯಕ್ರಮ ಜರಗಲಿದೆ ಎಂದು ಸಂಘದ ಅಧ್ಯಕ್ಷ ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *

More posts