ಕುಂದಾಪುರ ಮಿರರ್ ಸುದ್ದಿ…
Video:-
ಕುಂದಾಪುರ: ಬಿಲ್ಲವ ಸಮುದಾಯ ಸರ್ಕಾರದ ಮುಂದಿಟ್ಟ 10 ಬೇಡಿಕೆಗಳ ಈಡೇರಿಕೆಗಾಗಿ ಪಾದಯಾತ್ರೆ ಆರಂಭಿಸಲಾಗಿದ್ದು, ಫೆಬ್ರುವರಿ 14ರಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸಮುದಾಯದ ಜೊತೆಗೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಬಿಲ್ಲವ ಸಮುದಾಯದ ಸ್ವಾಮೀಜಿ ಡಾ. ಪ್ರಣವಾನಂದ ಸ್ವಾಮೀಜಿ ಸರ್ಕಾರವನ್ನು ಎಚ್ಚರಿಸಿದ್ದಾರೆ.

ಮಂಗಳವಾರ ಬ್ರಹ್ಮಾವರ ನಾರಾಯಣಗುರು ಭವನದಲ್ಲಿ ಬಿಲ್ಲವ ಸಮಾಜದ ಬೇಡಿಕೆಯ ಈಡೇರಿಕೆಗೆ ಹಾಗೂ ಸಮಾಜದ ಜಾಗೃತಿಗಾಗಿ ಮಂಗಳೂರಿನ ಕುದ್ರೋಳಿ ಕ್ಷೇತ್ರದಿಂದ ಆರಂಭಗೊಂಡ ಪಾದಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದರು.
ಕಳೆದ 6 ತಿಂಗಳಿಂದ ಸಮುದಾಯದ ಬೇಡಿಕೆಗೆ ಮನವಿ ಮಾಡಿಕೊಳ್ಳುತ್ತಿದ್ದರೂ ಸ್ಪಂದಿಸದೆ ಪಾದಯಾತ್ರೆ ಆರಂಭದ ಹಿಂದಿನ ದಿನ ನಿಗಮ ಮಂಡಳಿ ರಚಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ನಿಗಮ ರಚನೆಯ ಸರ್ಕಾರದ ಆದೇಶ ಪ್ರತಿ ಇದುವರೆಗೂ ನೀಡಿಲ್ಲ. ಕೇವಲ ಮುಖ್ಯಮಂತ್ರಿಗಳಿಗೆ ನೀಡಿದ ಮನವಿ ಪತ್ರವನ್ನೇ ಆದೇಶ ಪ್ರತಿ ಎಂಬಂತೆ ತೋರಿಸುತ್ತಿದ್ದಾರೆ. ಈ ರೀತಿಯ ಸುಳ್ಳು ಭರವಸೆಯನ್ನು ಈ ಹಿಂದಿನಿಂದಲೂ ನೀಡುತ್ತಾ ಬರಲಾಗಿದೆ. ಸಚಿವ ಸುನಿಲ್‌ಕುಮಾರ್ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮುದಾಯದ ಬೇಡಿಕೆ ಈಡೇರಿಸಲು ಮನಸ್ಸು ಮಾಡತ್ತಿಲ್ಲ. ಇವರು ಬೇಡಿಕೆ ಈಡೇರಿಕೆಗೆ ಸರ್ಕಾರದ ಆದೇಶ ಬಿಡುಗಡೆ ಮಾಡಲಿ. ಆದೇಶ ಪ್ರತಿ ನೋಡದೆ ಪಾದಯಾತ್ರೆ ನಿಲ್ಲಿಸುವ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಸಚಿವರು ಗೊಂದಲದ ಹೇಳಿಕೆಯನ್ನು ನೀಡಬಾರದು. ಮಾಡುತ್ತೇನೆ ಎಂದರೆ ಸಾಲದು. ಸಮಾಜದ ಕುಲ ಕಸುಬಾದ ಶೇಂದಿ ತೆಗೆಯುವುದನ್ನು 18 ವರ್ಷಗಳ ಹಿಂದೆ ನಿಲ್ಲಿಸಲಾಗಿದ ಎಂದು ಅಕ್ರೋಶ ಹೊರಹಾಕಿದರು.
ಪತ್ರಿಕಾಗೋಷ್ಟಿಯ ಸಂದರ್ಭ ಬಿಲ್ಲವ ಸಮಾಜದ ಮುಖಂಡ ಬಿ.ಎನ್.ಶಂಕರ ಪೂಜಾರಿ, ಐತಿಹಾಸಿಕ ಪಾದಯಾತ್ರೆ ಸಮಿತಿಯ ರಾಘವೇಂದ್ರ ಕೆ. ಅಮೀನ್, ಗೌರವಾಧ್ಯಕ್ಷ ದಿವಾಕರ ಸನಿಲ್, ಜಿಲ್ಲಾ ಸಂಚಾಲಕ ವಿಶುಕುಮಾರ್ ಕಲ್ಯಾಣಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷಕುಮಾರ್ ಬೈರಂಪಳ್ಳಿ, ಬ್ರಹ್ಮಾವರ ಬಿಲ್ಲವ ಸಂಘದ ಅಶೋಕ್ ಪೂಜಾರಿ ಹಾರಾಡಿ, ರಾಘು ಪೂಜಾರಿ ಹೇರೂರು, ಮೂರ್ತೆದಾರರ ಸಂಘದ ಅಧ್ಯಕ್ಷ ಕೊರಗ ಪೂಜಾರಿ, ಶ್ರೀ ನಾರಾಯಣಗುರು ವಿಚಾರ ವೇದಿಕೆಯ ಜಗನ್ನಾಥ ಕೋಟೆ, ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶಂಕರ ಪೂಜಾರಿ ಕುಕ್ಕಡೆ, ಬಿಲ್ಲವ ಸಂಘದ ಪ್ರಮುಖರಾದ ರಾಜು ಪೂಜಾರಿ ಉಪ್ಪೂರು, ಕರುಣಾಕರ ಪೂಜಾರಿ ಹಂದಾಡಿ, ಮೋಹನ್ ಪೂಜಾರಿ ಹಂದಾಡಿ, ಕೋಟ ಮೂರ್ತೆದಾರರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕೆಮ್ಮಣ್ಣು, ಬ್ರಹ್ಮಾವರ ಮೂರ್ತೆದಾರರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಕರ್ಕೇರ, ಬ್ರಹ್ಮಾವರ ಬಿಲ್ಲವ ಯುವ ವೇದಿಕೆಯ ಉಮೇಶ್ ಪೂಜಾರಿ ವಾರಂಬಳ್ಳಿ, ಅಶೋಕ್ ಪೂಜಾರಿ ಹೇರೂರು, ಗ್ರಾಮ ಪಂಚಾಯತ್ ಸದಸ್ಯ ಸದಾನಂದ ಪೂಜಾರಿ ವಾರಂಬಳ್ಳಿ, ಬ್ರಹ್ಮಾವರ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಸುಮತಿ, ಪಾದಯಾತ್ರೆ ಸಮಿತಿಯ ಸದಸ್ಯರು, ಬಿಲ್ಲಸ ಸಂಘದ ಸದಸ್ಯರು ಉಪಸ್ಥಿತರಿದ್ದರು.











