ಕುಂದಾಪುರ ಮಿರರ್ ಸುದ್ದಿ…
ಕೋಟ: ಪುರಾಣಪ್ರಸಿದ್ಧ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ ಇದರ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ಮಂಗಳವಾರ ಹಾಗೂ ಬುಧವಾರ ಸಂಪನ್ನಗೊಂಡಿತು.

ಮಂಗಳವಾರ ರಾತ್ರಿ ಹಾಲು ಹಬ್ಬ ಗೆಂಡಸೇವೆ ಹಾಗೂ ಬುಧವಾರ ತುಲಾಭಾರ ಸೇವೆ ನೆರವೆರಿತು.
ಸಾವಿರಾರು ಭಕ್ತಾಧಿಕಾರಿಗಳು ಶ್ರೀ ದೇವಿಯ ದರ್ಶನ ಪಡೆದು ವಿವಿಧ ಸೇವೆಗಳನ್ನು ಸಮರ್ಪಿಸಿ, ಮಹಾಅನ್ನಸಂತರ್ಪಣೆಯಲ್ಲಿ ಭಾಗವಹಿಸಿದರು.
ಶ್ರೀ ದೇವಳ ವಿದ್ಯುತ್ ದೀಪಾಲಂಕಾರ ಹಾಗೂ ಪುಷ್ಭಾಲಂಕಾರ ಹಾಗೂ ಹಣ್ಣು ಹಂಪಲುಗಳಿಂದ ಶೃಂಗರಿಸಲಾಗಿತ್ತು.ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್,ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ , ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮದೇವ ಐತಾಳ್, ಸುಬ್ರಾಯ ಆಚಾರ್ಯ, ಸತೀಶ್ ಹೆಗ್ಡೆ,ಚಂದ್ರ ಪೂಜಾರಿ, ಸುಶೀಲಸೋಮಶೇಖರ್, ಜ್ಯೋತಿ ಶೆಟ್ಟಿ, ಸುಂದರ್ ಕೆ,ಅರ್ಚಕ ಪ್ರತಿನಿಧಿ ಸುಬ್ರಾಯ ಜೋಗಿ ಮತ್ತಿತರರು ಉಪಸ್ಥಿತರಿದ್ದರು.











