ಕುಂದಾಪುರ: ಆಜ್ರಿ ಶನೀಶ್ವರ ಯಕ್ಷ ಪ್ರಶಸ್ತಿ – ಮಾಯಾ ಮಹಿಷ ವಧೆ ಪೌರಾಣಿಕ ಪ್ರಸಂಗ ಲೋಕಾರ್ಪಣೆ

0
413

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ತೆರೆಮರೆಯ ಕಾಯಿಗಳಂತೆ ನಾಲ್ಕೈದು ದಶಕಗಳಿಂದ ಯಕ್ಷರಂಗದಲ್ಲಿ ಮಿಂಚಿ ಕಲಾರಸಿಕರನ್ನು ರಂಜಿಸಿದ ಹಿರಿಯ ಕಲಾ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ಗ್ರಾಮೀಣ ಭಾಗದ ಯಕ್ಷಗಾನ ಮೇಳವೊಂದು ಮಾಡುತ್ತಿರುವುದು ಕರಾವಳಿಗೆ ಹೆಮ್ಮೆ ತಂದಿದೆ.

ಕುಂದಾಪುರ ತಾಲೂಕಿನ ಆಜ್ರಿ ಚೋನಮನೆ ಶನೀಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ಆಜ್ರಿಯಲ್ಲಿ ಇಬ್ಬರು ಯಕ್ಷದಿಗ್ಗಜರಿಗೆ ಎರಡನೇ ವರ್ಷದ ಶನೀಶ್ವರ ಪ್ರಶಸ್ತಿ ನೀಡಲಾಯಿತು.

ಇದುವರೆಗೆ ಯಾವುದೇ ಪ್ರಶಸ್ತಿಗಳಿಗೆ ಭಾಜನರಾಗದ ಹಿರಿಯ ಕಲಾವಿದರನ್ನು ಗುರುತಿಸುವುದು ಶನೀಶ್ವರ ಪ್ರಶಸ್ತಿಯ ವಿಶೇಷತೆ. ಅದರಂತೆ ಹಿರಿಯ ರಂಗಕರ್ಮಿಗಳಾದ, ಕಳೆದ 41 ವರ್ಷಗಳಿಂದ ಯಕ್ಷ ಸೇವೆ ಮಾಡುತ್ತಿರುವ ಬ್ರಹ್ಮೇರಿ ಶೀನ ನಾಯ್ಕ್ ಹಾಗೂ ನೂರಾರು ಯಕ್ಷ ಕಲಾವಿದರಿಗೆ ತರವೇತಿ ನೀಡಿದ ಮಹಾಬಲ ದೇವಾಡಿಗರಿಗೆ ಈ ಬಾರಿಯ ಶನೀಶ್ವರ ಪ್ರಶಸ್ತಿ ಒಲಿದು ಬಂತು.

Click Here

ಆಜ್ರಿ ಪೇಟೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ, ಶನೀಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ರಂಗಸಜ್ಜಿಕೆಯಲ್ಲಿಯೇ ನಡೆದ ಈ ಪ್ರಶಸ್ತಿ ಪದಾನ ಕಾರ್ಯಕ್ರಮ ಅವಿಸ್ಮರಣೀಯವಾಯಿತು. ಆಜ್ರಿ ಚೋನಮನೆ ಶ್ರೀ ಶನೀಶ್ವರ ಕ್ಷೇತ್ರದ ಧರ್ಮದರ್ಶಿ ಅಶೋಕ್ ಕುಮಾರ್ ಶೆಟ್ಟಿ ಚೋನಮನೆಯವರು ಪ್ರಶಸ್ತಿಯ ಮಹತ್ವ ವಿವರಿಸಿದರು.

ಶನೀಶ್ವರ ಪ್ರಶಸ್ತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಶನೀಶ್ವರ ಯಕ್ಷಾಭಿಮಾನಿ ಬಳಗದ ಅಧ್ಯಕ್ಷ ಮಂಜುನಾಥ ಶೆಟ್ಟಿ ಜಡ್ಡಿನಮನೆ ಪ್ರಶಸ್ತಿ ಆಯ್ಕೆಯ ವಿವರಣೆ ನೀಡಿದರು.

ಇದೇ ಸಂದರ್ಭ ಮಾಯಾ ಮಹಿಷವಧೆ ಎನ್ನುವ ನೂತನ ಯಕ್ಷ ಪ್ರಸಂಗವನ್ನು ಲೋಕಾರ್ಪಣೆಗೊಳಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ ಶೆಟ್ಟಿ ಜಡ್ಡಿನಮನೆ ವಹಿಸಿದ್ದರು. ಆಜ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಕುಮಾರ್ ಮೂಡಿಕೆರೆ, ಯುವಕ ಮಂಡಲದ ಅಧ್ಯಕ್ಷ ಅರುಣ್ ಶೆಟ್ಟಿ, ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ವೇಣುಗೋಪಾಲ ಶೆಟ್ಟಿ, ಜಗದೀಶ್ ಶೆಟ್ಟಿ, ಅನಂತಮೂರ್ತಿ ಮಾವಿನಮನೆ, ರಿಕ್ಷಾ ಚಾಕ ಮಾಲಕ ಸಂಘದ ಅಧ್ಯಕ್ಷ ಚಂದ್ರ ಕುಲಾಲ್, ಜಯಂತ್ ಶೆಟ್ಟಿ ಕುಂಟೋಡಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಯಕ್ಷಗಾನ ಪ್ರದರ್ಶನಗೊಂಡಿತು.

Click Here

LEAVE A REPLY

Please enter your comment!
Please enter your name here