ಬೆಳ್ವೆ: ಮಾನವೀಯತೆಗೆ ಸಾಕ್ಷಿಯಾದ ಸರಳ ವಿವಾಹ : ಕೋವಿಡ್ ಮಹಾಮಾರಿಯಲ್ಲೀ ತಾಯಿಯನ್ನು ಕಳೆದುಕೊಂಡಿರುವ ಮೂವರು ಒಡನಾಡಿ ಸಹೋದರಿಯರಿಗೆ ವಿವಾಹ ಭಾಗ್ಯ

0
396

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಅಲ್ವಾಡಿ ಗ್ರಾಮದಲ್ಲಿ ಹಿಂದೆ ಕೋವಿಡ್ ಮಹಾಮಾರಿಯಿಂದ ತಾಯಿಯನ್ನು ಕಳೆದುಕೊಂಡಿರುವ ಒಂದೇ ಕುಟುಂಬದ ಮೂವರು ಒಡನಾಡಿ ಸಹೋದರಿಯರ ಸರಳ ವಿವಾಹವು ಉಡುಪಿ ಜಿಲ್ಲಾ ನಮ್ಮ ನಾಡ ಒಕ್ಕೂಟದ ಅಧ್ಯಕ್ಷರಾದ ಮುಸ್ತಾಕ್ ಅಹಮ್ಮದ್ ಬೆಳ್ವೆ ಮಾರ್ಗದರ್ಶನದಲ್ಲಿ ನಮ್ಮ ನಾಡ ಒಕ್ಕೂಟ(ರಿ) ಸೆಂಟ್ರಲ್ ಕಮಿಟಿ – ಹೆಬ್ರಿ ಘಟಕ, ಇಸ್ಲಾಮಿಕ್ ಯೂತ್ ಫೆಡರೇಷನ್ ಬೆಳ್ವೆ ಇವರ ಆಶ್ರಯದಲ್ಲಿ ಬೆಳ್ವೆ ಜುಮ್ಮಾ ಮಸೀದಿ ಜಮಾತ್ ಕಮೀಟಿ ಮತ್ತು ಬೆಳ್ವೆ ಪರಿಸರದ ಅನಿವಾಸಿ ಭಾರತೀಯರ ಸಹಕಾರದೊಂದಿಗೆ ಬೆಳ್ವೆ ಜುಮ್ಮಾ ಮಸೀದಿ ವಠಾರದಲ್ಲಿ ಮಾನವೀಯತೆಯ ನೆಲೆಯ ಸಹಾಯದೊಂದಿಗೆ ಇತ್ತೀಚೆಗೆ ನಡೆದ ಸರಳ ವಿವಾಹವು ಮೂವರು ಒಡ ಹುಟ್ಟಿದ ಸಹೋದರಿಯರ ವೈವಾಹಿಕ ಜೀವನಕ್ಕೆ ಆಸರೆಯಾಯಿತು.

ನಮ್ಮ ನಾಡ ಹೆಬ್ರಿ ಒಕ್ಕೂಟದ ಅಧ್ಯಕ್ಷ ಮೊಹಮ್ಮದ್ ರಫೀಕ್ ಅಜೆಕಾರು ,ಪ್ರಧಾನ ಕಾರ್ಯದರ್ಶಿ ಅಬ್ದುಲ್ ಶುಕೂರು ಬೆಳ್ವೆ, ಇಸ್ಲಾಮಿಕ್ ಯೂತ್ ಫೆಡರೇಷನ್ ಬೆಳ್ವೆ ಅಧ್ಯಕ್ಷ ಮೊಹಮ್ಮದ್ ನಝೀರ್ ,ಕಾರ್ಯದರ್ಶಿ ಮೊಹಮ್ಮದ್ ಆಸಿಫ್ ಅಲ್ಬಾಡಿ ಸಾರಥ್ಯದಲ್ಲಿ ಸರಳ ವಿವಾಹ ಕಾರ್ಯಕ್ರಮ ನಡೆಯಿತು.

Click Here

ಬೆಳ್ವೆ ಜುಮ್ಮಾ ಮಸೀದಿಯ ಖತೀಬ್ ಮೌಲಾನ ಮೊಹಮ್ಮದ್ ರಫೀಕ್ ನಿಕಾಹ ಖುತುಬ್ ಪಾರಾಯಣ ಗೈದರು. ಉಡುಪಿ ಮೌಲಾನ ಆಸೀಫ್ ಅಲ್ಬಾಡಿ ನಿಖಾಹ ನೆರವೇರಿಸಿದರು. ಉಡುಪಿ ಜಿಲ್ಲಾ ನಮ್ಮ ನಾಡ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮೌಲಾನ ಜಮೀರ್ ಅಹಮ್ಮದ್ ರಷದಿ, ನಮ್ಮ ನಾಡ ಒಕ್ಕೂಟದ ಸೆಂಟ್ರಲ್ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ ಸರಳ ವಿವಾಹ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.

ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸತೀಶ್ ಕಿಣಿ ಬೆಳ್ವೆ, ಬೆಳ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್. ಚಂದ್ರಶೇಖರ್ ಶೆಟ್ಟಿ ಸೂರ್ಗೋಳಿ, ಸದಸ್ಯ ಕರುಣಾಕರ ಶೆಟ್ಟಿ,ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸೂರ್ಗೋಳಿ, ಬೆಳ್ವೆ ಶ್ರಿ ಶಂಕರನಾರಾಯಣ ದೇವಳದ ಆಡಳಿತ ಮೊಕ್ತೇಸರ ಶಂಕರ ಶೆಟ್ಟಿ ಬೆಳ್ವೆ, ದಿನಕರ ಶೆಟ್ಟಿ ಅಲ್ಬಾಡಿ, ಬೆಳ್ವೆ ಜುಮ್ಮಾ ಮಸೀದಿ ಅಧ್ಯಕ್ಷ ಅಹಮದ್ ಬ್ಯಾರಿ, ಕಾರ್ಯದರ್ಶಿ ಇಕ್ಬಾಲ್, ಉಪಾಧ್ಯಕ್ಷ ಶಕೀಲ್,ಕೋಶಾಧಿಕಾರಿ ಅನ್ಸಾರ್ ಬೆಳ್ವೆ, ಜೊತೆ ಕಾರ್ಯದರ್ಶಿ ಷರೀಫ್ ಬೆಳ್ವೆ,ಮದ್ರಸ ಕಮಿಟಿ ಉಪಾಧ್ಯಕ್ಷ ಅಬ್ದುಲ್ ಬ್ಯಾರಿ, ಕಾರ್ಯದರ್ಶಿ ಇಸ್ಮಾಯಿಲ್,ನಮ್ಮ ನಾಡ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಅಬ್ಬು ಮೊಹಮ್ಮದ್ ಕುಂದಾಪುರ,ಹೆಬ್ರಿ ಘಟಕದ ಉಪಾಧ್ಯಕ್ಷ ಸಮದ್ ಹೈಕಾಡಿ, ಜಿಲ್ಲಾ ಕಮೀಟಿ ಸದಸ್ಯ ಖಾದರ್ ಮೂಡುಗೋಪಾಡಿ, ದಸ್ತಗೀರ್ ಕಂಡ್ಲೂರ್, ಪಿರು ಸಾಹೇಬ್ ಉಡುಪಿ, ಮುನಾವರ್ ಆಜೆಕಾರು,ಫಾರೂಕ್ ಬೆಳ್ವೆ, ಅಫ್ವನ್ ಕೋಡಿ, ಇಸ್ಮಾಯಿಲ್, ಜಫ್ರುಲ್ಲ, ರಹ್ಮತುಲ್ಲಾ ಹುಡೆ,ಅರಫತ್ ಅಲ್ಬಾಡಿ,ರೇಹಾನ್ ಬೆಳ್ವೆ ,ಫಾರೂಕ್ ಬೆಳ್ವೆ,ಮುನಾವರ ಅಜೆಕಾರು, ಜೀಫ್ರಿ ಸಾಹೇಬ್.ಶಾವಲ್ ಹಮೀದ್ ಹಾಗೂ ಇನ್ನೀತರರು ಉಪಸ್ಥಿತರಿದ್ದರು.

ಬಹರೈನ್ ಮಯ್ಯಧಿ ಬ್ಯಾರಿ, ಸೌದಿ ಅರೇಬಿಯಾದ ಸಲೀಂ ಪುತ್ತಿಗೆ, ಇಲ್ಯಾಸ್ ಬೆಳ್ವೆ, ಫರ್ವೇಜ್ ಅಲ್ಬಾಡಿ, ಯುಎಇ ಯ ನಿವಾಸಿ ಫಹಿಂ ಬೆಳ್ವೆ ,ನಝೀರ್, ನವಾಝ್, ಹನೀಫ್ ಟಿ.ಕೆ, ಓಮಾನ್ನ ಅಕ್ತರ್ ನವಾಝ್,ಜಯಶನವಾಝ್,ಜಾವೇದ್ ,ಒಮಾನ್ ಅಕ್ತರ್, ಸೆಂಟ್ರಲ್ ಕಮಿಟಿ ಅಧ್ಯಕ್ಷ ಮೊಹಮ್ಮದ್ ಸಲೀಂ ದುಬಾಯಿ, ಯು ಎಸ್ .ಎ ಅಬ್ದುಲ್ ಸಮಿ, ಸರ್ಫರಾಜ್ ಕುವೇಟ್,ಅಫ್ವನ್ ಕೋಡಿ, ಆಸೀರ್ ಬೆಂಗಳೂರು,ಇಸ್ಮಾಯಿಲ್ ಶಿರೂರು ಇವರುಗಳು ಸರಳ ವಿವಾಹ ಕಾರ್ಯಕ್ಕೆ ವಿಶೇಷ ಸಹಕಾರ ನೀಡಿದರು.

Click Here

LEAVE A REPLY

Please enter your comment!
Please enter your name here