ಬಾಳೆಬೆಟ್ಟು ಫ್ರೆಂಡ್ಸ್ ಐದನೇ ವರ್ಷದ ಸ್ಪರ್ಶ ಸಂಭ್ರಮ 2023 – ನರೇಂದ್ರ ಕುಮಾರ್ ಕೋಟ ಅವರಿಗೆ ಹುಟ್ಟೂರ ಪ್ರಶಸ್ತಿ ಪ್ರದಾನ
ಕುಂದಾಪುರ ಮಿರರ್ ಸುದ್ದಿ…

ಕೋಟ : ಸಂಘಟನಾ ಶಕ್ತಿಯಿಂದ ಸಮಾಜ ಕಟ್ಟಲು ಸಾಧ್ಯವಿದೆ. ಸಮಾಜ ಕಟ್ಟುವಾಗ ಸಮರ್ಪಣಾ ಮನೋಭಾವನೆ ಇರಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟ ಮಣೂರು ಬಾಳೆಬೆಟ್ಟು ಫ್ರೆಂಡ್ಸ್, ಭಗತ್ ಸಿಂಗ್ ಯುವ ವೇದಿಕೆ ಕೋಟ ವತಿಯಿಂದ ಶನಿವಾರ ನಡೆದ ಸ್ಪರ್ಶ 5ನೇ ವರ್ಷದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಎಲ್ಲ ಕ್ಷೇತ್ರದಲ್ಲಿ ಭಾರತ ಎತ್ತರಕ್ಕೆ ಬೆಳೆದಿದೆ. ಜಾತಿ, ಧರ್ಮ ನಮ್ಮೆಲ್ಲರ ಬದುಕಿಗಿಂತ ದೇಶವೇ ಹೆಚ್ಚು ಎನ್ನುವ ಅನಿವಾರ್ಯತೆ ನಮ್ಮಲ್ಲಿರಬೇಕು ಎಂದರು.
ಬಾಳೆಬೆಟ್ಟು ಫ್ರೆಂಡ್ಸ್ ಅಧ್ಯಕ್ಷ ರತ್ನಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಸಾಧಕರಿಗೆ ಸನ್ಮಾನ
ಇದೇ ಸಂದರ್ಭ ಸಾಮಾಜಿಕ, ಕೃಷಿ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ವಿಶೇಷ ಅಭಿನಂದನೆ ಉಡುಪಿ ಆದರ್ಶ ಆಸ್ಪತ್ರೆಯ ಡಾ.ಜಿ.ಎಸ್.ಚಂದ್ರಶೇಖರ್, ದೈವ ನರ್ತಕ ನಾಗರಾಜ ಪಾಣ, ಧಾರ್ಮಿಕ ಚಿಂತಕಿ ಅಶ್ವತ್ತಮ್ಮ, ಹಿರಿಯ ಯಕ್ಷಗಾನ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ, ಕ್ರೀಡಾ ಸಾಧಕ ಗುರುರಾಜ್ ಪೂಜಾರಿ, ಚಲನಚಿತ್ರ ನಟ ಪ್ರಮೋದ್ ಶೆಟ್ಟಿ, ಡ್ರಾಮಾ ಜೂನಿಯರ್ ವಿಜೇತೆ ಸಮೃದ್ಧಿ ಕುಂದಾಪುರ, ಅಂತರಾಷ್ಟ್ರೀಯ ಯೋಗಪಟು ಧನ್ವಿ ಮರವಂತೆ, ಮಣೂರು ಮಧುಸೂಧನ ಬಾಯರಿ, ಶಿಲ್ಪಿ ನಾಗೇಶ್ ಆಚಾರ್ಯ ಕೋಟ, ಜಾನಕಿ ಹಂದೆ ಮಣೂರು, ಅವರನ್ನು ಗೌರವಿಸಲಾಯಿತು.
ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಅಧ್ಯಾಪಕ, ಸಾಹಿತಿ, ಸಂಘಟಕ ನರೇಂದ್ರ ಕುಮಾರ್ ಕೋಟ ಅವರಿಗೆ ಹುಟ್ಟೂರ ಪ್ರಶಸ್ತಿ ಮತ್ತು ನಿವೃತ್ತ ಯೋಧ ಎಂ.ಕೆ.ಶೆಟ್ಟಿ, ಯೋಧ ಗುರುಪ್ರಸಾದ್ ಕೋಟ್ಯಾನ್ ಅವರನ್ನು ಗೌರವಿಸಲಾಯಿತು,
ಶೈಕ್ಷಣಿಕ ಸಾಧಕರಾದ ಸುಚೇತ, ನಮೃತ ಹೇರ್ಳೆ, ಸುಶಾಂತ್, ರೋಶನ್ ಎನ್ ಆಚಾರ್, ರಾಕೇಶ್ ಮತ್ತು ಶ್ರಾವ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸ್ಥಳೀಯ ಆಯ್ದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ವಿತರಣೆ, ಅಶಕ್ತರಿಗೆ ಆರ್ಥಿಕ ನೆರವು ನೀಡಲಾಯಿತು.
ಕೋಟದ ಉದ್ಯಮಿ ಪ್ರಶಾಂತ್ ಕುಂದರ್, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಉದ್ಯಮಿಗಳಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಜಗದೀಶ ಕೆದೂರು, ವೇರಿಕೋರ್ಸ ತಜ್ಞ ಡಾ.ವಾಸುದೇವ ಉರಾಳ, ಸಾಫ್ಟ್‍ವೇರ್ ಇಂಜಿನಿಯರ್‍ಕಿರಣ್ ಕುಮಾರ ಮಯ್ಯ, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಉದ್ಯಮಿ ಕುಶಲ ಶೆಟ್ಟಿ, ಅಮೃತೇಶ್ವರಿ ದೇವಳದ ಟ್ರಸ್ಟಿ ಸುಬ್ರಾಯ ಆಚಾರ್ಯ,ಶಿಕ್ಷಣ ಸಂಯೋಜಕ ರಾಘವ ಶೆಟ್ಟಿ, ಮಣೂರು ಮಹಾಲಿಂಗೇಶ್ವರ ದೇವಳದ ಆದ್ಯಕ್ಷ ಸತೀಶ್ ಎಚ್ ಕುಂದರ್ ಇದ್ದರು.
ಭಗತ್ ಸಿಂಗ್ ಯುವ ವೇದಿಕೆಯ ಅಧ್ಯಕ್ಷ ಪ್ರಸಾದ್ ಬಿಲ್ಲವ ಸ್ವಾಗತಿಸಿದರು. ಸ್ಪರ್ಶ ಕಾರ್ಯಕ್ರಮದ ಸಂಚಾಲಕ ಹರೀಶ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಳೆಬೆಟ್ಟು ಫ್ರೆಂಡ್ಸ್ ಕಾರ್ಯದರ್ಶಿ ಅವಿನಾಶ್ ಶೆಟ್ಟಿ ವಂದಿಸಿದರು.ಪ್ರಣುತ್ ಆರ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.ಸ್ಪರ್ಶ ಟೀಮ್ ನ ವಿವೇಕ್ ಅಮಿನ್, ಗಿರೀಶ್ ಕುಮಾರ್ ಶೆಟ್ಟಿ ಸಹಕರಿಸಿದರು. ನಂತರ ಶಿವದೂತ ಗುಳಿಗ ನಾಟಕ ನಡೆಯಿತು.











