ಕುಂದಾಪುರ ಮಿರರ್ ಸುದ್ದಿ…
ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ಹಾಗೂ ಆಂಜನೇಯ ದೇವಸ್ಥಾನದ ವಾರ್ಷಿಕ ಬ್ರಹ್ಮರಥೋತ್ಸವ ಸೋಮವಾರ ಜರಗಿತು.

ಬೆಳಗ್ಗೆ ಉತ್ಸವಾದಿ ಕಾರ್ಯಕ್ರಮಗಳು, ರಥಾರೋಹಣ, ಸಂಜೆ ರಥಾವರೋಹಣ, ಓಲಗ ಮಂಟಪದಲ್ಲಿ ವಿಶೇಷಪೂಜೆ ಪುನಸ್ಕಾರ, ಅಷ್ಟಾವಧಾನ, ಮಹಾ ಮಂಗಳಾರತಿ, ಶಯನೋತ್ಸವ ಕಾರ್ಯಕ್ರಮಗಳು ನಡೆದವು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ.ಎಸ್. ಕಾರಂತ, ಉಪಾಧ್ಯಕ್ಷ ವೇ. ಮೂ. ಗಣೇಶ ಮೂರ್ತಿ ನಾವಡ, ಕಾರ್ಯದರ್ಶಿ ಪಿ. ಲಕ್ಷ್ಮೀನಾರಾಯಣ ತುಂಗ, ಕೋಶಾಧಿಕಾರಿ ವೇ. ಮೂ. ಪರಶುರಾಮ ಭಟ್ಟ ಸದಸ್ಯರಾದ ಎ.ವಿ. ಶ್ರೀಧರ ಕಾರಂತ, ಕೆ. ಅನಂತಪದ್ಮನಾಭ ಐತಾಳ, ವೇ. ಮೂ. ಜಿ. ಚಂದ್ರಶೇಖರ ಉಪಾಧ್ಯ, ಪಿ. ಸದಾಶಿವ ಐತಾಳ, ಶ್ರೀಧರ ರಾವ್ ಆರ್.ಎಂ., ತಂತ್ರಿ ವೇ. ಮೂ. ಕೃಷ್ಣಸೋಮಯಾಜಿ, ಜೋಯಿಸರಾದ ವೇ. ಮೂ. ರತ್ನಾಕರ ಸೋಮಯಾಜಿ ಮೊದಲಾದವರು ಉಪಸ್ಥಿತರಿದ್ದರು.











