ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಮೊಗವೀರ ಸಮಾಜ ಇವತ್ತು ಮುನ್ನೆಡೆ ಸಾಧಿಸುತ್ತಿದೆ. ಸಮಾಜದ ಅಗತ್ಯತೆಗಳನ್ನು ಸರ್ಕಾರದ ಮುಂದಿಟ್ಟು ಸಮಾಜವನ್ನು ಮುನ್ನೆಡೆಸುವ ಕೆಲಸ ಇವತ್ತು ಜಿ.ಶಂಕರ್ ನೇತೃತ್ವದಲ್ಲಿ ಆಗುತ್ತಿದೆ. ಮೀನುಗಾರ ಪುರುಷರು ಸಮುದ್ರದಲ್ಲಿ ಮೀನು ಹಿಡಿದು ತಂದರೆ ಅದನ್ನು ಸಮರ್ಥವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮೂಲಕ ಮೀನುಗಾರರ ಮಹಿಳೆಯರು ಸ್ವಾವಲಂಬಿ ಜೀವನಕ್ಕೆ ಹೆಸರಾದವರು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.

ಮೊಗವೀರ ಮಹಾಜನ ಸೇವಾ ಸಂಘ ರಿ., ಮುಂಬೈ, ಕುಂದಾಪುರ ಶಾಖೆ ನೇತೃತ್ವದಲ್ಲಿ ಕುಂದಾಪುರದ ಚಿಕನ್‍ಸಾಲ್ ರಸ್ತೆಯಲ್ಲಿ ಸುಸಜ್ಜಿತವಾದ ಹವಾನಿಯಂತ್ರಿತ ಸಭಾಭವನ ನಿರ್ಮಾಣವಾದ ಮೊಗವೀರ ಭವನ ಉದ್ಘಾಟಿಸಿ ಮಾತನಾಡಿದರು.
ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮೊಗವೀರ ಸಮಾಜ ಪ್ರಾಮಾಣಿಕತೆ, ಪರಿಶ್ರಮ, ದೈವಭಕ್ತಿಗೆ ಹೆಸರಾದವರು. ಸಮಾಜದ ಅಭಿವೃದ್ದಿ, ಬೇಡಿಕೆಗಳನ್ನು ಸಮಾಜದ ಮುಖಂಡರಾದ ಜಿ.ಶಂಕರ್ ಅವರ ಮೂಲಕ ಈಡೇರಿಸಿಕೊಳ್ಳಲಾಗತ್ತಿದೆ. ಸಭಾಭವನಗಳ ನಿರ್ಮಾಣ ಹೀಗೆ ಸಮಾಜವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಕೆಲಸವಾಗುತ್ತಿರುವುದು ಶ್ಲಾಘನಾರ್ಹ ಎಂದರು.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರು, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಗೌರವಾಧ್ಯಕ್ಷರು ಆಗಿರುವ ನಾಡೋಜ ಡಾ|ಜಿ.ಶಂಕರ್ ಮಾತನಾಡಿ, ಈಗಾಗಲೇ ಮೊಗವೀರ ಸಮಾಜಕ್ಕೆ ಸೇರಿರುವ 11 ಸಭಾಭವನಗಳು ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ ಸಭಾ ಭವನ ನಿರ್ಮಾಣವಾಗಬೇಕು. ಹಾಗೂ ಬಗ್ವಾಡಿ ಕ್ಷೇತ್ರದ ಅಭಿವೃದ್ದಿಗೆ ಸರ್ಕಾರ 2 ಕೋಟಿ ಅನುದಾನ ಒದಗಿಸಬೇಕು. ಶಾಸಕರು ಆ ನಿಟ್ಟಿನಲ್ಲಿ ನಮ್ಮ ಬೇಡಿಕೆಯನ್ನು ಸರ್ಕಾರಕ್ಕೆ ತಲುಪಿಸಬೇಕು. ಬಗ್ವಾಡಿ ಶಕ್ತಿ ಕೇಂದ್ರ ಭಕ್ತಿಕೇಂದ್ರವಾಗಿ ಬೆಳೆಯಬೇಕು ಎಂದರು.
ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬೈ ಗೌರವಾಧ್ಯಕ್ಷ ಸುರೇಶ್ ಆರ್.ಕಾಂಚನ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‍ಪಾಲ್ ಎ.ಸುವರ್ಣ, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಉದ್ಯಮಿ ಆನಂದ್ ಸಿ.ಕುಂದರ್, ದ.ಕ ಮೊಗವೀರ ಮಹಾಜನ ಸೇವಾ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮುಂಬೈ ಉದ್ಯಮಿ ಗೋಪಾಲ ಎಸ್.ಪುತ್ರನ್, ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ|ಉಮೇಶ ಪುತ್ರನ್, ಬಾರ್ಕೂರು ಸಂಯುಕ್ತ ಸಭಾದ ಅಧ್ಯಕ್ಷ ಸತೀಶ ಅಮೀನ್, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಹಿರಿಯಡಕ, ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್, ಮೊಗವೀರ ಮಹಾಜನ ಸೇವಾ ಸಂಘ ಮುಂಬೈ ಬಗ್ವಾಡಿ ಹೋಬಳಿ ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ, ಮೊ.ಮ.ಸೇ.ಸಂ.ಬಗ್ವಾಡಿ ಹೋಬಳಿ ಮುಂಬೈ ಇದರ ಮಾಜಿ ಅಧ್ಯಕ್ಷರಾದ ರಮೇಶ ಬಂಗೇರ, ಮಹಾಬಲ ಎಂ.ಕುಂದರ್, ಎನ್.ಎಚ್ ಬಗ್ವಾಡಿ, ಎನ್.ಡಿ ಚಂದನ್, ಕರುಣಾಕರ ಜಿ.ಪುತ್ರನ್, ಎಂ.ವಿ.ಹೊಳ್ಮಗೆ, ನಾಗೇಶ್ ಎನ್.ಪುತ್ರನ್, ರತ್ನಾಕರ ಎನ್.ನಾಯ್ಕ್, ಮೊ.ಮ.ಸೇ.ಸಂ.ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಮಾಜಿ ಅಧ್ಯಕ್ಷರಾದ ಕೆ.ಕೆ ಕಾಂಚನ್, ಎಂ.ಎಂ.ಸುವರ್ಣ, ಬಿ.ಹೆರಿಯಣ್ಣ, ಶಿವರಾಮ ಪುತ್ರನ್, ಬೀಜಾಡಿ ಮೀ.ಪ್ರಾ.ಸ.ಸಂಘದ ಅಧ್ಯಕ್ಷೆ ರತ್ನ ಮೊಗವೀರ, ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ಸುನೀಲ್ ಜಿ.ನಾಯ್ಕ ಚಾತ್ರಬೆಟ್ಟು, ಬೈಂದೂರು ಘಟಕದ ಅಧ್ಯಕ್ಷ ರವಿರಾಜ ಚಂದನ್ ಕಳುವಾಡಿ, ಕುಂದಾಪುರ ಘಟಕದ ಅಧ್ಯಕ್ಷ ಚಂದ್ರಹಾಸ ಕೋಣಿ, ಹೆಮ್ಮಾಡಿ ಘಟಕದ ಅಧ್ಯಕ್ಷ ಲೋಹಿತಾಶ್ವ ಆರ್.ಕುಂದರ್, ಹಾಲಾಡಿ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಕುಂದಾಪುರ ಶಾಖಾ ಕಾರ್ಯದರ್ಶಿ ಪ್ರಭಾಕರ ಎನ್.ಮೊಗವೀರ , ಕೋಶಾಧಿಕಾರಿ ಸುಧಾಕರ ಕಾಂಚನ್ ಉಪಸ್ಥಿತರಿದ್ದರು.
ಮೊಗವೀರ ಮಹಾಜನ ಸೇವಾ ಸಂಘ ಮುಂಬೈ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ ಸ್ವಾಗತಿಸಿದರು. ಚಿನ್ಮಯ್ ಕಾಂಚನ್ ಬಟ್ಟೆಕುದ್ರು ಪ್ರಾರ್ಥನೆ ನೆರವೇರಿಸಿದರು. ಆರ್.ಜೆ ನಯನ ಕಾರ್ಯಕ್ರಮ ನಿರ್ವಹಿಸಿ, ಮೊಗವೀರ ಮಹಾಜನ ಸೇವಾ ಸಂಘ ಮುಂಬೈ ಬಗ್ವಾಡಿ ಹೋಬಳಿ ಗೌರವ ಪ್ರಧಾನ ಕಾರ್ಯದರ್ಶಿ ಮಂಜುನಾಥ ಎಂ.ನಾಯ್ಕ್ ವಂದಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9-30ರಿಂದ 10-15ರ ತನಕ ನೃತ್ಯ ವಸಂತ ನಾಟ್ಯಾಲಯ ಕುಂದಾಪುರ ಇದರ ನಿರ್ದೇಶಕಿ ವಿದುಷಿ ಶ್ರೀಮತಿ ಪ್ರವಿತಾ ಅಶೋಕ್ ಅವರ ಶಿಷ್ಯವೃಂದದವರಿಂದ ನೃತ್ಯ ಸಿಂಚನ, ಮಧ್ಯಾಹ್ನ 12-30ರಿಂದ 3 ಗಂಟೆಯ ತನಕ ಗಣೇಶ ಎರ್ಮಾಳ್ ಮತ್ತು ಬಳಗದವಿಂದ ಸುಗಮ ಸಂಗೀತ, ಗ್ರೂಪ್ ‘x’ ಡಾನ್ಸ್ ಅಕಾಡೆಮಿ, ಸುರತ್ಕಲ್ ಇವರಿಂದ ಜಾನಪದ ಹಾಗೂ ಸಿನಿಮಾ ನೃತ್ಯ ಸಂಗಮ, ಡ್ರಾಮಾ ಜ್ಯೂನಿಯರ್ ವಿಜೇತೆ ಕು|ಸಮೃದ್ಧಿ ಇವರಿಂದ ಯಕ್ಷ ನೃತ್ಯ, ಮಧ್ಯಾಹ್ನ 3 ಗಂಟೆಯಿಂದ ಕಾಂಚನಿ ಕಲಾಕೇಂದ್ರ ಮುಂಬೈ ಇವರ ಪ್ರಾಯೋಜಕತ್ವದಲ್ಲಿ ಭಾಗವತ ಸದಾಶಿವ ಅಮೀನ್ ಸಾರಥ್ಯದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ‘ದಾನಶೂರ ಕರ್ಣ’ ಪ್ರದರ್ಶನಗೊಂಡಿತು.











