ಕುಂದಾಪುರ ಮಿರರ್ ಸುದ್ದಿ…
ಕೋಟ: ಕರ್ನಾಟಕ ರಾಜ್ಯ ಸರಕಾರಿ ಎನ್‍ಪಿಎಸ್ ನೌಕರರ ಸಂಘ ಬೆಂಗಳೂರು ಜಿಲ್ಲಾ ಘಟಕ ಉಡುಪಿ ತಾಲೂಕು ಘಟಕಗಳ ಸಹಯೋಗದೊಂದಿಗೆ ಇತ್ತೀಚಿಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ವೊಟ್ ಫಾರ್ ಓಪಿಎಸ್ ಹಳೆಪಿಂಚಣಿಗಾಗಿ ಆಗ್ರಹಿಸಿ ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಇತರೆ ಇಲಾಖೆಗಳ ಎನ್‍ಪಿಎಸ್ ನೌಕರರ ನೇತೃತ್ವದಲ್ಲಿ ಆಯಾ ಭಾಗದ ಗ್ರಾಮಪಂಚಾಯತ್ ಅಧ್ಯಕ್ಷೆ ಕಲ್ಪನಾ ದಿನಕರ್ ಹಾಗೂ ಉಪಾಧ್ಯಕ್ಷ ಸಿಲ್ವೆಸ್ಟರ್ ಡಿಸೋಜ ಮತ್ತು ಸದಸ್ಯರಿಗೆ ಮನವಿ ನೀಡಿ ವೊಟ್ ಫಾರ್ ಓಪಿಎಸ್ ಬಗ್ಗೆ ತಿಳಿಸುವ ಅಭಿಯಾನ ಹಮ್ಮಿಕೊಂಡಿತು. ಅದರಂತೆ ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರಿಗೆ ಭಾಗದ ಎಲ್ಲಾ ಎನ್‍ಪಿಎಸ್ ನೌಕರರು ಮನವಿಯನ್ನು ಸಲ್ಲಿಸಿದರು. ಈ ಮನವಿಯನ್ನು ತಮ್ಮ ಭಾಗದ ಶಾಸಕರಿಗೆ ನೀಡಿ, ವೊಟ್ ಫಾರ್ ಓಪಿಎಸ್ ಬಗ್ಗೆ ಮನವರಿಕೆ ಮಾಡುವುದರೊಂದಿಗೆ ಮುಂಬರುವ ಬಜೆಟ್ ಅಧಿವೇಶನದಲ್ಲಿ ಶಾಸಕರು ಚರ್ಚಿಸಲು ಒತ್ತಾಯಿಸುವಂತೆ ತಿಳಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಪಾಂಡೇಶ್ವರ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ ,ಕಾರ್ಯದರ್ಶಿ ವಿಜಯ ಭಂಡಾರಿ, ಗ್ರಾಮಕರಣಿಕರು,ಮೆಸ್ಕಾಂ ಇಲಾಖೆಯಿಂದ ದಿನೇಶ್ ಪುತ್ರನ್ ಸೇರಿದಂತೆ ಎಲ್ಲಾ ಲೈನ್‍ಮೆನ್ ಉಪಸ್ಥಿತರಿದ್ದರು.











