ಬೈಲೂರು: ಸರಕಾರಿ ಶಾಲೆಯೊಂದು ಶತಮಾನ ಕಾಣುವುದು ಒಂದು ಐತಿಹಾಸಿಕ ಸಾಧನೆ – ಶ್ರೀಧರ ನಾಯಕ

0
371

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಮತ್ತು ಹಳೆ ವಿದ್ಯಾಥಿ ಸಂಘ ಬೈಲೂರು ಇವರ ಸಹಯೋಗದೊಂದಿಗೆ ನಡೆದ ಬಣ್ಣದ ಗರಿ ಶತ ಸಂಭ್ರಮ‌ 2023ರ ಪತಾಕೆ ಧ್ವಜ ವಂದನಾ ಸಂಭ್ರಮದಲ್ಲಿ ಧ್ವಜಾರೋಹಣಗೈದು ಮಾತನಾಡಿದರು.

ಶಂಕರನಾರಾಯಣ ಗ್ರಾಪಂ ಅಧ್ಯಕ್ಷೆ ಲತಾ ಡಿ.ಎಸ್‌ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಶಾಲಾ ಎಸ್‌ ಡಿ ಎಮ್‌ ಸಿ ಅಧ್ಯಕ್ಷ ಸಂತೋಷ ಕುಮಾರ ಉದ್ಘಾಟಿಸಿದರು.

Click Here

ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ಮತ್ತು ಹಳೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಏರ್ಪಡಿಸಿದ ಬೆಸುಗೆ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಯಕರ ಶೆಟ್ಟಿ ಅಧ್ಯಕ್ಷರು ಶತಮಾನೋತ್ಸವ ಸಮಿತಿ, ಗ್ರಾಮ ಪಂಚಾಯತ್‌ ಶಂಕರನಾರಾಯಣದ ಸದಸ್ಯರುಗಳಾದ , ಶಂಕರನಾರಾಯಣ ಭಟ್‌ ಕೊಂಡಳ್ಳಿ, ವತ್ಸಲಾ ಶೆಟ್ಟಿ, ಲಕ್ಷ್ಮೀ, ಗೀತಾ, ಶಂಕರ ಶಿಕ್ಷಣ ಸಂಯೋಜಕರು ಅಂಪಾರು ವೃತ್ತ, ಆಶಾಲತಾ ಶಿವರಾಮ ಶೆಟ್ಟಿ ಉಪಾಧ್ಯಕ್ಷರು ಶತಮಾನೋತ್ಸವ ಸಮಿತಿ, ಸುಬ್ರಹ್ಮಣ್ಯ ಐತಾಳ್‌ ಉಪಾಧ್ಯಕ್ಷರು ಶತಮಾನೋತ್ಸವ ಸಮಿತಿ, ಶಿವರಾಮ ಶೆಟ್ಟಿ ಖಾಜಾಂಚಿ ಶತಮಾನೋತ್ಸವ ಸಮಿತಿ, ಆನಂದ ಮೊಗವೀರ ಅಧ್ಯಕ್ಷರು ರಚನಾ ಕ್ರೋಡಬೈಲೂರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಗಿರಿಜಾ ಸ್ವಾಗತಿಸಿದರು, ಸಹ ಶಿಕ್ಷಕ ಆನಂದ್‌ ಕುಲಾಲ್‌ ಪ್ರಸ್ತಾವನೆಗೈದರು.ಪ್ರೌಢ ಶಾಲಾ ಸಹಶಿಕ್ಷಕರಾದ ನಾರಾಯಣ ಅಡಿಗ ಮತ್ತು ಗೌರವ ಶಿಕ್ಷಕಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸಹ ಶಿಕ್ಷಕ ಸಂತೋಷ ನಿರೂಪಿಸಿದರು, ಸಹಶಿಕ್ಷಕಿ ಸಂದ್ಯಾ ಕೆ ವಂದಿಸಿದರು.

Click Here

LEAVE A REPLY

Please enter your comment!
Please enter your name here