ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಚಿಕ್ಕನ್‍ಸಾಲ್ ರಸ್ತೆಯ ಶ್ರೀಮೈಲಾರೇಶ್ವರ ದೇವಳದ ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಬುಧವಾರ ಸಂಜೆ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ತಾಲೂಕಿನ ವಿವಿಧೆಡೆ ಯಿಂದ ಹರಿದುಬಂದ ಹಸಿರುವಾಣಿಗೆ ದೇವಳದ ವಠಾರದಲ್ಲಿ ಅರ್ಚಕ ಬಾಲಚಂದ್ರ ಭಟ್ ಪೂಜಾವಿಧಿವಿಧಾನ ನಡೆಸುವ ಮೂಲಕ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಎತ್ತಿನಗಾಡಿ, ಕಂಬಳದ ಕೋಣ, ಕುಣಿತ ಭಜನೆ, ಚಂಡೆ ವಾದನ, ಹಲವು ಸಂಘ ಸಂಸ್ಥೆಗಳ ಭಜನೆ, ತಟ್ಟಿರಾಯ, ಗೊಂಬೆನರ್ತನ, ಕೊಂಬುಕಹಳೆಯೊಂದಿಗೆ ಹಸಿರುವಾಣಿ ಮೆರವಣಿಗೆ ನಡೆಯಿತು.

ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಶೋಕ ಬೆಟ್ಟಿನ್, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ದಪೇದಾರ್, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ ಬಿಲ್ಲವ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿಗಳಾದ ಸಿ.ಎಚ್.ಗಣೇಶ್, ಕೆ.ಪಿ.ಅರುಣ್, ಖಜಾಂಚಿ ನಾಗರಾಜ ದಪೇದಾರ್, ಮೈಲಾರೇಶ್ವರ ಯುವಕ ಮಂಡಲ ಜಿ.ಆರ್.ಪ್ರಕಾಶ್, ರಾಮಕ್ಷತ್ರೀಯ ಯುವಕ ಮಂಡಳಿ ಅಧ್ಯಕ್ಷ ಮಹೇಶ್ ಬೆಟ್ಟಿನ್, ಪುರಸಭೆ ಸದಸ್ಯರಾದ ದೇವಕಿ ಪಿ.ಸಣ್ಣಯ್ಯ, ಸಂತೋಷ್ ಶೆಟ್ಟಿ, ಪ್ರಮುಖರಾದ ಡಿ.ಸತೀಶ್, ಅರುಣ ಬಾಣ, ಕೃಷ್ಣಮೂರ್ತಿ, ಕೆ.ಟಿ.ದಿನೇಶ್ ಅಮೀನ್ ಮೊದಲಾದವರು ಇದ್ದರು.











