ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಜಡ್ಕಲ್ ವ್ಯವಸಾಯ ಸಂಘ ಕೇವಲ ನಾಲ್ಕು ವರ್ಷದಲ್ಲಿ ಈ ಗ್ರಾಮೀಣ ಪ್ರದೇಶದಲ್ಲಿ ಹವಾನಿಯಂತ್ರಿತ ಕಟ್ಟಡ ನಿರ್ಮಿಸಿದೆ. ಇದು ಸಹಕಾರದಿಂದ ಮಾತ್ರ ಸಾಧ್ಯ. ಇದು ಮಾದರಿಯಾಗಿದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಜಡ್ಕಲ್ ಗ್ರಾಮದ ಬೀಸಿನಪಾರೆಯಲ್ಲಿ ನಿರ್ಮಾಣ ಮಾಡಲಾದ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಕಟ್ಟಡ ‘ಸಹಕಾರ ಸಿರಿ’ಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂಘ ಪ್ರಥಮ ವರ್ಷದಿಂದಲೇ ಲಾಭಾಂಶ ಹೆಚ್ಚಿಸಿಕೊಳ್ಳುತ್ತಾ ಬಂದಿದೆ. ಈ ಸಾಲಿನಲ್ಲಿ ಒಂದು ಕೋಟಿ ಲಾಭ ಮಾಡಿದರೆ ಎಸ್.ಸಿ.ಡಿಸಿಸಿ ಬ್ಯಾಂಕಿನ ಮಹಾಸಭೆಯಲ್ಲಿ ಚಿನ್ನ ನೀಡಿ ವಿಶೇಷವಾಗಿ ಗೌರವಿಸುತ್ತೇನೆ ಎಂದು ಹೇಳಿದ ಅವರು ನೂತನ ಕಟ್ಟಡ ನಿರ್ಮಾಣ, ಹವಾನಿಯಂತ್ರಿತ ವ್ಯವಸ್ಥೆ ಅಳವಡಿಸಿದಕ್ಕೆ ರೂ.5 ಲಕ್ಷ ಹಾಗೂ ಕಟ್ಟಡ ನಿರ್ಮಾಣಕ್ಕೆ 5 ಲಕ್ಷ ನೀಡುವುದಾಗಿ ಘೋಷಿಸಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ವಹಿಸಿದ್ದರು. ಭದ್ರತಾ ಕೊಠಡಿಯನ್ನು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಉದ್ಘಾಟಿಸಿದರು. ಸಭಾಭವನವನ್ನು ಸೆಳ್ಕೋಡು ಶ್ರೀ ಮಹಿಷಾಮರ್ದಿನಿ ದೇವಸ್ಥಾನದ ಆಡಳೀತ ಮೊಕ್ತೇಸರ ವೇ.ಮೂ.ಸೂರ್ಯನಾರಾಯಣ ಭಟ್ ಉದ್ಘಾಟಿಸಿದರು. ಪ್ರೇರಕರ ಕೊಠಡಿಯನ್ನು ಜಡ್ಕಲ್ ಸೈಂಟ್ ಜೋರ್ಜ್ ಫೊರೋನ್ ಚರ್ಚ್ ಧರ್ಮಗುರುಗಳಾದ ರೆ|ಫಾ|ಥೋಮಸ್ ಪಾರೆಕಾಟಿಲ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ರಾಜು ಪೂಜಾರಿ, ಎಂ.ಮಹೇಶ ಹೆಗ್ಡೆ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾದ ಹೆಚ್.ಹರಿಪ್ರಸಾದ್ ಶೆಟ್ಟಿ, ಜಡ್ಕಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ, ಉಡುಪಿ, ದ.ಕ ಜಿಲ್ಲೆಯ ನಬಾರ್ಡ್ ಡಿ.ಡಿ.ಎಂ.ಸಂಗೀತ ಕರ್ತ, ರೆ|ಫಾ| ಆಗಸ್ಟಿನ್ ಭಾಗವಹಿಸಿದ್ದರು.
ಸಂಘದ ಉಪಾಧ್ಯಕ್ಷರಾದ ದೇವದಾಸ ವಿ.ಜೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ ಶರ್ಮ, ನಿರ್ದೇಶಕರಾದ ಸುರೇಂದ್ರ ನಾಯ್ಕ್, ಜೋಷಿ ಪಿ.ಷಿ., ಮಹಾಬಲ ಪೂಜಾರಿ, ಮುತ್ತ, ಮನೋಜ್ ಪಿ.ಜೆ., ನಾರಾಯಣ ಶೆಟ್ಟಿ, ಜೋಸೆಫ್ ಕೆ.ಎಂ., ವಿನೋದ್ ಜೋರ್ಜ್, ಗುರುರಾಜ ಪೂಜಾರಿ, ಶ್ರೀಮತಿ ರೋಸಮ್ಮ, ಶ್ರೀಮತಿ ಸವಿತಾ ಶೆಟ್ಟಿ, ವಲಯ ಮೇಲ್ವಿಚಾರಕರಾಗಿ ಶಿವರಾಮ್ ಪೂಜಾರಿ ಯಡ್ತರೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಗೌರವಿಸಲಾಯಿತು. ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಮಾಜಿ ಯೋಧ, ಸಂಘದ ನಿರ್ದೇಶಕ ಜೋಷಿ ಪಿ.ಷಿ ಅವರನ್ನು ಸನ್ಮಾನಿಸಲಾಯಿತು. ಕಟ್ಟಡ ನಿರ್ಮಾಣ ಮಾಡಿದ ಸೈಮನ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಕ್ಷತ್ರ ನವೋದಯ ಸ್ವಸಹಾಯ ಸಂಘವನ್ನು ಉದ್ಘಾಟಿಸಲಾಯಿತು.
ಸಂಘದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಆರ್.ಜೆ ರೇವತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ವಿನೋದ್ ಜೋರ್ಜ್ ವಂದಿಸಿದರು.











