ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕೋಡಿಯ ಸೀವಾಕ್‍ಗೆ ಅತ್ಯಂತ ಅಗತ್ಯವಾಗಿದ್ದ ಪ್ರವೇಶದ ಮೆಟ್ಟಿಲು ವ್ಯವಸ್ಥೆಯನ್ನು ಲಯನ್ಸ್ ಕ್ಲಬ್ ಹಂಗಳೂರು ಸುಮಾರು 1 ಲಕ್ಷ ರೂ.ಮಿಕ್ಕಿ ವೆಚ್ಚದಲ್ಲಿ ಕೊಡುಗೆಯಾಗಿ ನೀಡಿತು. ಇದರ ಉದ್ಘಾಟನೆ ಕಾರ್ಯಕ್ರಮ ಜ.27ರಂದು ನಡೆಯಿತು.
ಕೊಡುಗೆಯನ್ನು ಉದ್ಘಾಟಿಸಿದ ಲಯನ್ಸ್ ಜಿಲ್ಲೆ 317ಸಿ ಇದರ ಗವರ್ನರ್ ಡಾ.ಎಂ.ಕೆ ಭಟ್ ಮಾತನಾಡಿ ಲಯನ್ಸ್ ಜನಸಾಮಾನ್ಯರಿಗೆ ಅಗತ್ಯವಾಗಿರುವ ಸೇವೆಯನ್ನು ನೀಡುತ್ತಾ ಬಂದಿದೆ. ಹಂಗಳೂರು ಲಯನ್ಸ್ ಕ್ಲಬ್ ಕೋಡಿ ಸೀವಾಕ್ ಬರುವ ಜನತೆಯ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಮೆಟ್ಟಿಲು ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದೆ. ಇದು ಸುವರ್ಣಕ್ಷರದಲ್ಲಿ ಬರೆಯಬೇಕಾದ ವಿನೂತನ ಕಾರ್ಯಕ್ರಮವಾಗಿದೆ ಎಂದರು.
ಈ ಸಂದರ್ಭದಲ್ಲಿ ಸವಿತಾ ಭಟ್, ಲಯನ್ಸ್ ಕ್ಲಬ್ ಹಂಗಳೂರು ಅಧ್ಯಕ್ಷ ರಜತ್ ಹೆಗ್ಡೆ, ಕಾರ್ಯದರ್ಶಿ ವಿಲ್ಪ್ರೇಡ್ ಮೆನೇಜಸ್, ಕೋಶಾಧಿಕಾರಿ ರೋಹನ್ ವಿ.ಕೊಸ್ತಾ, ಪುರಸಭೆ ಸದಸ್ಯೆ ಲಕ್ಷ್ಮೀ, ಕುಂದಾಪುರ ನಗರ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಪುರಸಭೆ ನಾಮನಿರ್ದೇಶಿತ ಸದಸ್ಯ ನಾಗರಾಜ ಕಾಂಚನ್, ಲಯನ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.











