ಪಾಂಡೇಶ್ವರ- ಪಂಚವರ್ಣ ಸಂಸ್ಥೆಯ 152ನೇ ಪರಿಸರಸ್ನೇಹಿ ಅಭಿಯಾನ – ಪರಿಸರದ ಬಗ್ಗೆ ಜಾಗೃತರಾಗದಿದ್ದರೆ ಆಪತ್ತು ಖಂಡಿತಾ- ಜ್ಯೋತಿ ಉದಯ್ ಕುಮಾರ್

0
633

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ; ಪರಿಸರದ ಬಗ್ಗೆ ಜಾಗೃತರಾಗದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಆಪತ್ತು ತಪ್ಪಿದಲ್ಲ ಎಂದು ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ಸಾಸ್ತಾನ ಹೇಳಿದರು.

Click Here

ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇದರ ನೇತ್ರತ್ವದಲ್ಲಿ ಮಹಿಳಾ ಮಂಡಲ ಪಾಂಡೇಶ್ಚರ ಸಾಸ್ತಾನ,ಸಂಜೀವಿನಿ ಒಕ್ಕೂಟ ಪಾಂಡೇಶ್ಚರ ಗ್ರಾ.ಪಂ ಇವರ ಸಂಯೋಜನೆಯೊಂದಿಗೆ 152 ನೇ ವಾರದ ಪರಿಸರಸ್ನೇಹಿ ಅಭಿಯಾನ ಪಾಂಡೇಶ್ವರ ಮಹಿಳಾಮಂಡಲದಿಂದ ಅಂಬೇಡ್ಕರ್ ರಸ್ತೆಯವರೆ ಸ್ವಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವ ಕೈಗಳು ಅದರಲ್ಲೂ ವಿದ್ಯಾವಂತರೇ ಈ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿರುವುದು ಬೇಸರದ ಸಂಗತಿ. ಪರಿಸರವನ್ನು ಶುಚಿಯಾಗಿಟ್ಟುಕೊಂಡು ಪರಿಸರಸ್ನೇಹಿಯಾಗಿ ಬದುಕಬೇಕಾದ ಅವಶ್ಯಕತೆ ಇದೆ ಎಂದು ಮನಗಾಣಿಸಿ ಸಂಘಸಂಸ್ಥೆಗಳ ಪರಿಸರ ಕಾಳಜಿಯನ್ನು ಕೊಂಡಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ತಾ.ಪಂ ಸದಸ್ಯೆ ರತ್ನಾ ಜೆ ರಾಜ್, ಪಾಂಡೇಶ್ಚರ ಸಂಜೀವಿನಿಒಕ್ಕೂಟದ ಅಧ್ಯಕ್ಷೆ ಲೀಲಾವತಿ ಗಂಗಾಧರ್, ಪಾಂಡೇಶ್ಚರ ಮಹಿಳಾ ಮಂಡಳದ ಅಧ್ಯಕ್ಷೆ ಸುಮಿತ್ರಾ ಸುಧಾಕರ್ ಪೂಜಾರಿ, ಪಾಂಡೇಶ್ಚರ ಗ್ರಾ.ಪಂ ಅಧ್ಯಕ್ಷೆ ಕಲ್ಪನಾ ದಿನಕರ್, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್, ಪಾಂಡೇಶ್ಚರ ಮಹಿಳಾಮಂಡಲದ ಹಾಗೂ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಪಂಚವರ್ಣ ಕಾರ್ಯಾಧ್ಯಕ್ಷ ರವೀಂದ್ರ ಕೋಟ ನಿರೂಪಿಸಿ ವಂದಿಸಿದರು.

Click Here

LEAVE A REPLY

Please enter your comment!
Please enter your name here