ಕುಂದಾಪುರ ಮಿರರ್ ಸುದ್ದಿ…
ಕೋಟ: ಬರೇ ಪೇಟೆ ಕೆಡೆ ಮುಖ ಮಾಡಿ ಕೂರದಿರಿ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳಿ ಇಲ್ಲವಾದಲ್ಲಿ ಶ್ರೀಲಂಕಾ,ಪಾಕಿಸ್ತಾನಕ್ಕೆ ಬಂದ ದುಸ್ಥಿತಿ ನಮ್ಮಲ್ಲಿಯೂ ಆಗಬಹುದು ಎಂದು ಯುವ ಕೃಷಿಕ ಮಣೂರು ಪಡುಕರೆ ನಾಗೇಶ್ ಮಯ್ಯ ಹೇಳಿದರು.
ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇದರ ನೇತ್ರತ್ವದಲ್ಲಿಗೆಳೆಯರ ಬಳಗ ಕಾರ್ಕಡ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ತಿಂಗಳ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ 22ನೇ ಮಾಲಿಕೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಪ್ರಸ್ತುತ ಯುವ ಸಮುದಾಯ ಕೃಷಿ ಕಾಯಕದಲ್ಲಿ ತೊಡಗಿ ಕೊಳ್ಳಬೇಕು ಆ ಮೂಲಕ ವಿಶ್ವದಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸುವ ದೇಶಗಳಿಗೆ ನಮ್ಮ ದೇಶ ಮಾದರಿಯಾಗಬೇಕು, ರೈತ ಬೆಳೆದರೆ ಮಾತ್ರ ಎಲ್ಲರೂ ಆಹಾರ ರೂಪದಲ್ಲಿ ಸೇವಿಸಲು ಸಾಧ್ಯ ಇಲ್ಲವಾದಲ್ಲಿ ನಮ್ಮ ನೆರೆಯ ದೇಶದ ರೀತಿಯಲ್ಲಿ ನಾವುಗಳು ಅನುಭವಿಸಬೇಕಾದಿತು ಎಂದು ಎಚ್ಚರಿಸಿದು. ರೈತರು ಬೆಳೆದ ಬೆಳೆಗಳಿಗೆ ಸಮರ್ಪಕ ದರ ಸಿಗಬೇಕು ಆ ಮೂಲಕ ರೈತರಿಗೆ ಪ್ರೋತ್ಸಾಹ ನೀಡಿ ಇನ್ನಷ್ಟು ಕೃಷಿ ಕಾರ್ಯದಲ್ಲಿ ಮುಂಚೂಣಿಗೆ ಬರುವಂತೆ ಸರಕಾರ ಮಾಡಬೇಕು, ಕೃಷಿಕರನ್ನು ಗುರುತಿಸುವ ಸಂಘಸಂಸ್ಥೆಗಳ ಕಾರ್ಯ ನಿಜಕ್ಕೂ ಅರ್ಥಪೂರ್ಣ ಶ್ಲಾಘನೀಯಕಾರ್ಯ ಎಂದರು.
ಈ ಸಂದರ್ಭದಲ್ಲಿ ನಾಗೇಶ್ ಮಯ್ಯ ಇವರನ್ನು ಕೃಷಿ ಪರಿಕರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್ಯ ವಹಿಸಿದ್ದರು.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಸಂಯೋಜಕ ರವೀಂದ್ರ ಮೊಗವೀರ ಕೃಷಿ ಇಲಾಖೆ ಹಾಗೂ ಕೃಷಿ ವಿಮಾ ಯೋಜನೆಯ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ಮುಖ್ಯ ಅಭ್ಯಾಗತರಾಗಿ ಕರ್ಣಾಟಕ ಬ್ಯಾಂಕ್ ನಿವೃತ್ತ ಪ್ರಭಂಧಕ ಕೋಡಿ ಚಂದ್ರಶೇಖರ್ ನಾವಡ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮಣೂರು ಭಾಸ್ಕರ್ ಶೆಟ್ಟಿ , ಕೋಟ ರೈತಧ್ವನಿಸಂಘ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ,ಕೋಟ ಗ್ರಾ.ಪಂ ಉಪಾಧ್ಯಕ್ಷೆ ಜಯಂತಿ ಪೂಜಾರಿ, ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ,ಕೋಟ ಪಡುಕರೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೋಶಾಧಿಕಾರಿ ಶಶಿಧರ ತಿಂಗಳಾಯ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್,ಹಂದಟ್ಟು ಮಹಿಳಾ ಬಳಗದ ಶಕೀಲ ಪೂಜಾರಿ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಉಪಸ್ಥಿತರಿದ್ದರು.
ಪಂಚವರ್ಣ ಮಹಿಳಾ ಮಂಡಲದ ಉಪಾಧ್ಯಕ್ಷೆ ವಸಂತಿ ಪೂಜಾರಿ ಸ್ವಾಗತಿಸಿದರು.ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ನಿರೂಪಿಸಿದರು. ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು. ನಂತರ ಕೃಷಿ ಸನ್ಮಾನದ ಪ್ರಯುಕ್ತ ನಾಗೇಶ್ ಮಯ್ಯ ಅವರ ವಠಾರದಲ್ಲಿ ಪರಿಸರಜಾಗೃತಿಯ ಮೂಲಕ ಗಿಡ ನೆಡಲಾಯಿತು.











