ಕುಂದಾಪುರ ಮಿರರ್ ಸುದ್ದಿ…
ಕೋಟ: ಅನಾರೋಗ್ಯ ಪೀಡಿತರಾಗಿ, ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದ ಐರೋಡಿ ಚನ್ನಕೇಶವ ಭಟ್ಟ ಇವರಿಗೆ ಗುಂಡ್ಮಿ ಶ್ರೀ ಮಹಾ ವಿಷ್ಣು ವೈದಿಕ ಮಂದಿರ ಇದರ ಆಡಳಿತ ಮಂಡಳಿಯ ವತಿಯಿಂದ ಸಹಾಯಧನ ವಿತರಿಸಲಾಯಿತು. ಶ್ರೀ ಮಹಾವಿಷ್ಣು ವೈದಿಕ ಮಂದಿರದಿಂದ ರೂಪಾಯಿ 10,000, ದಾನಿಗಳಾದ ವಾಣಿ ಶುಭಚಂದ್ರ ಹತ್ವಾರ್ ಕುಟುಂಬದಿಂದ 20,000, ಮಂಜುನಾಥ ನಾವಡ ಕೊರವಾಡಿ ಕುಂದಾಪುರ 30,000 ನೀಡಿ ಸಹಕರಿಸಿದರು.
ಈ ಸಂದರ್ಭದಲ್ಲಿ ವೈದಿಕ ಮಂದಿರದ ಕಾರ್ಯದರ್ಶಿ ಜಿ ರಾಮಚಂದ್ರ ಐತಾಳ, ಕೋಶಾಧಿಕಾರಿ ಜಿ ಉದಯಮಯ್ಯ ಇದ್ದರು.











