ಕುಂದಾಪುರ ಮಿರರ್ ಸುದ್ದಿ…
ಕೋಟ: ಅಭಿಮಾನ್ ಫ್ರೆಂಡ್ಸ್, ನಾಗಬನ ಹಂದಟ್ಟು ಕೋಟ ಇವರ 11ನೇ ವರ್ಷದ ಸಾರ್ವಜನಿಕ ಶಿವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಇತ್ತೀಚಿಗೆ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ದಾನಗುಂದ ಅಂಗನವಾಡಿ ಕಾರ್ಯಕರ್ತೆ ಸುಶೀಲ ಹಾಗೂ ಸ್ಥಳೀಯ ಸಮಾಜಸೇವಕರು, ಕೃಷಿಕರು ಹಾಗೂ ಯಕ್ಷಗಾನ ನೈಪತ್ಯ ಕಲಾವಿದರಾದ ನಾಗರಾಜ ಪೂಜಾರಿ ಮತ್ತು ರಾಜು ಪೂಜಾರಿಯವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಆನೆಗುಡ್ಡೆ ವಿನಾಯಕ ದೇವಸ್ಥಾನದ ಮೆನೇಜರ್ ಆನಂದರಾಮ ಉರಾಳ್, ಯಕ್ಷದೇಗುಲದ ಸುದರ್ಶನ ಉರಾಳ, ಮಂಜುನಾಥ ಉರಾಳ,ಕೋಟತಟ್ಟು ಪಂಚಾಯತ್ ಸದಸ್ಯೆ ಪೂಜಾ ಹಾಗೂ ಅಭಿಮಾನ್ ಫ್ರೆಂಡ್ಸ್‍ನ ಅಧ್ಯಕ್ಷ ರಮೇಶ ಪೂಜಾರಿ, ಉಪಾಧ್ಯಕ್ಷ ಸತೀಶ್ ಎಸ್., ಕಾರ್ಯದರ್ಶಿ ಸುಧೀರ, ಜೊತೆಕಾರ್ಯದರ್ಶಿ ದೇವರಾಜ್, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.











