ಪಚ್ಚಿಲೆ ಕೃಷಿಯ ಮೂಲಕ ಯಶಸ್ಸು ಸಾಧಿಸಿ – ಡಾ.ಪ್ರೇಮಾನಂದ
ಕುಂದಾಪುರ ಮಿರರ್ ಸುದ್ದಿ…
ಕೋಟ : ಕರಾವಳಿ ಭಾಗದಲ್ಲಿ ಪಚ್ಚಲೆ ಕೃಷಿ ಯಶಸ್ವಿ ಉದ್ಯಮವಾಗಿಸಿ ಕೊಂಡಿದ್ದಾರೆ. ಇದರ ಆಯಾಮ ತಿಳಿದು ತೊಡಗಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಉಡುಪಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ.ಪ್ರೇಮಾನಂದ.ಕೆ ಹೇಳಿದರು.
ಕೋಡಿ ಕನ್ಯಾಣದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ ,ಮೀನುಗಾರಿಕಾ ಇಲಾಖೆ,ಸ್ಕೋಡೈ ಸಂಸ್ಥೆ ಶಿರಸಿ ,ಉಡುಪಿ ಮೀನುಗಾರರ ಉತ್ಪಾದಕ ಕಂಪನಿ ಜಂಟಿ ಆಶ್ರಯದಲ್ಲಿ ಮೀನುಗಾರಿಕೆ ಮತ್ತು ಉದ್ಯಮಶೀಲತೆ ಹಾಗೂ ಬೆಳವಣಿಗೆ ಅವಕಾಶಗಳು ಕುರಿತು ಕಾರ್ಯಾಗಾರದಲ್ಲಿ ಮಾತನಾಡಿ ಕೋಡಿ ಭಾಗದಲ್ಲಿ ಸಾಕಷ್ಟು ಜನರು ಪಚ್ಚಿಲೆ ಕೃಷಿಯನ್ನು ಆಯ್ದುಕೊಂಡು ಅದರ ಅನುಷ್ಠಾನಗೊಳಿಸಿದ್ದಾರೆ.ಆ ಕ್ಷೇತ್ರದ ಮೂಲಕ ಹಲವು ಪ್ರಶಸ್ತಿಗೂ ಕೂಡಾ ಭಾಜನರಾಗಿದ್ದಾರೆ.ಆಹಾರ ಸುರಕ್ಷತೆ ಅನುಸಾರ ಅದರ ಗುಣಮಟ್ಟವನ್ನು ಗಮನದಲ್ಲಿಇರಿಸಿಕೊಂಡು ಈ ಕ್ಷೇತ್ರದಲ್ಲಿ ಇನ್ನಷ್ಟು ತೊಡಗಿಕೊಳ್ಳುವಂತಾಗಿ ಎಂದು ಕರೆ ಇತ್ತರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ಮುಖ್ಯಸ್ಥ ಲೋಹಿತ್ ಕಾರ್ವಿ ವಹಿಸಿದ್ದರು.
ಕಾರ್ಯಕ್ರಮವನ್ನು ಮಂಗಳೂರಿನ ರಿಜನಲ್ ಸೆಂಟರ್ ಆಫ್ ಐಸಿಆರ್ ಸಿಎಂಎಫಾರ್‍ಐ ಕರ್ನಾಟಕ ಇದರ ಪ್ರಾಂಶುಪಾಲೆ, ವಿಜ್ಞಾನಿ ಡಾ.ಗೀತಾ ಶೆಶಿಕುಮಾರ್ ಉದ್ಘಾಟಿಸಿದರು.
ಮುಖ್ಯ ಅಭ್ಯಾಗತರಾಗಿ ಉಡುಪಿ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಜಿ.ಎಮ್ ಶಿವ ಕುಮಾರ್,ಉದ್ಯಮಿ ಶಂಕರ್ ಕುಂದರ್,ಕೋಟದ ತೋಳಾರ್ ಓಷಿಯನ್ ಪ್ರಾಡಕ್ಟ್ ಇದರ ಪ್ರದಾನವ್ಯವಸ್ಥಾಪಕ ಯೋಗಿಶ್ ,ಕೋಡಿ ಗ್ರಾಮಪಂಚಾಯತ್ ಸದಸ್ಯೆ ಜಯಶ್ರೀ ,ಸ್ಕೋಡೈ ಸಂಸ್ಥೆ ಶಿರಸಿ ಇದರ ಸಂಯೋಜಕ ಗಂಗಾಧರ್ ನಾಯ್ಕ್,ಕಿನಾರ ಮೀನುಗಾರರ ಉತ್ಪಾದಕ ಕಂಪನಿಯ ಮುಖ್ಯ ಕಾರ್ಯವಾಹಕ ರಘು ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು. ಮಾಲತಿ ಸ್ವಾಗತಿಸಿದರೆ ಸ್ಕೋಡೈ ಸಂಸ್ಥೆಯ ಸಿಬ್ಬಂದಿ ಭೂಮಿಕಾ ಕಾರ್ಯಕ್ರಮ ನಿರೂಪಿಸಿದರು. ಕಿನಾರ ಮೀನುಗಾರರ ಉತ್ಪಾದಕ ಕಂಪನಿಯ ನಿರ್ದೇಶಕ ಸುದಿನ ಕೋಡಿ ಸಹಕರಿಸಿದರು.











