ಕುಂದಾಪುರ ಮಿರರ್ ಸುದ್ದಿ…
ಕೋಟ: ಉತ್ತರ ಕನ್ನಡ ಜಿಲ್ಲೆಯ ಕುಮಟ ಗಿಬ್ಸ್ ಹೈಸ್ಕೂಲ್‍ನಲ್ಲಿ ಶುಕ್ರವಾರ ಗೆಳೆಯರ ಬಳಗ ಹಾಗೂ ಹೆಲ್ತ್ ಪಾಯಿಂಟ್ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಪುರುಷರ ಪವರ್ ಲಿಫ್ಟಿಂಗ್ ಸ್ಪರ್ಧೆ 83 ಕೆ. ಜಿ. ಒ1 ವಿಭಾಗದಲ್ಲಿ ಒಟ್ಟು 560 ಕೆ.ಜಿ. ಭಾರ ಎತ್ತಿವುದರ ಮೂಲಕ ಉದಯ ಪೂಜಾರಿ ಉಪ್ಲಾಡಿ ರವರು ಬೆಳ್ಳಿ ಪದಕ ಪಡೆದಿದ್ದಾರೆ, ಇವರು “ರೀವ್ ಫಿಟ್ನೆಸ್ ಸಾಲಿಗ್ರಾಮ ” ಇದರ ಸದಸ್ಯರಾಗಿದ್ದು, ನ್ಯಾಷನಲ್ ಲೆವೆಲ್ ಪವರ್ ಲಿಫ್ಟರ್ ರೋಷನ್ ದೇವಾಡಿಗ ಸಾಲಿಗ್ರಾಮ ಹಾಗೂ ಮಹೇಶ್ ದೇವಾಡಿಗ ಸಾಲಿಗ್ರಾಮ ಇವರಲ್ಲಿ ತರಬೇತಿ ಪಡೆದಿರುತ್ತಾರೆ.











