ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮಹಾರಾಷ್ಟ್ರದ ರೋಹಾದಲ್ಲಿ ಡಿ.26 ರಿಂದ 28ವರೆಗೆ ನಡೆದ 6ನೇ ರಾಷ್ಟೀಯ ಜೂನಿಯರ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್‍ಶಿಪ್ ಮತ್ತು 12ನೇ ಮಿಕ್ಸ್ ಬಾಕ್ಸಿಂಗ್ ವಿಶ್ವ ಚಾಂಪಿಯನ್‍ಶಿಪ್ ಆಯ್ಕೆ ಪ್ರಕ್ರಿಯೆಯಲ್ಲಿ ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ಎಂ.ಕೆ ಹುಬ್ಬಳ್ಳಿಯ ಕ್ರೀಡಾಪಟು ಸಾಸ್ತಾನದ ಐರೋಡಿಯ ಕುಮಾರಿ ಸೌಮ್ಯ ಶೆಟ್ಟಿ 60 ಕೆಜಿ ತೂಕದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಮೇ 2026 ಇಂಗ್ಲೆಂಡ್‍ನಲ್ಲಿ ನಡೆಯಲಿರುವ 12ನೇ ಜೂನಿಯರ್ ಮಿಕ್ಸ್ ಬಾಕ್ಸಿಂಗ್ ವಿಶ್ವ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾಗಿದ್ದಾರೆ.











