ಶ್ರೀ ನಾರಾಯಣಗುರು ಮಹಿಳಾ ಸಹಕಾರ ಸಂಘ ಉದ್ಘಾಟನೆ
Video:
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಮಹಿಳೆಯರಲ್ಲಿ ಪ್ರತಿಯೊಂದು ವ್ಯವಸ್ಥೆಯನ್ನು ಯಶಸ್ವಿಯಾಗಿ ಮುನ್ನೆಡೆಸುವ ಸಾಮಥ್ರ್ಯವಿದೆ. ಅದೇ ರೀತಿ ಈ ಸಹಕಾರ ಸಂಘವೂ ಕೂಡಾ ಮಾದರಿಯಾಗಿ ಮೂಡಿಬರಲಿ ಎಂದು ಉದ್ಯಮಿ ಸತೀಶ್ ಕೋಟ್ಯಾನ್ ಹೇಳಿದರು.
ಅವರು ಕುಂದಾಪುರದ ಸುಶಾನ್ ಪ್ಲಾಜಾ ಕಟ್ಟಡದಲ್ಲಿ ಆರಂಭಗೊಂಡ ಶ್ರೀ ನಾರಾಯಣಗುರು ಮಹಿಳಾ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶುಭಾಶಂಸನೆ ನೀಡಿದ ಕೋಡಿ ಶ್ರೀ ಚಕ್ರಮ್ಮ ದೇವಸ್ಥಾನದ ಅಧ್ಯಕ್ಷರಾದ ಗೋಪಾಲ ಪೂಜಾರಿ ಅವರು, ಮಹಿಳೆಯರ ಆರ್ಥಿಕ ಸ್ವಾವಲಂಬನೆಯ ಉದ್ದೇಶದಿಂದ ಆರಂಭವಾಗಿರುವ ಈ ಸಂಘ ದ್ಯೇಯೋದ್ದೇಶದಂತೆ ಯಶಸ್ಸಿನ ಹೆಜ್ಜೆ ಇಡುವ ಮೂಲಕ ಪ್ರಬುದ್ಧವಾಗಿ ಮುನ್ನೆಡೆಯಲಿ ಎಂದರು.
ಸಂಘದ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ಸಮಾಜಕ್ಕೆ ಆರ್ಥಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಆರಂಭಿಸಲಾಗಿದೆ. ಜಿಲ್ಲಾ ಮಟ್ಟದ ಮಹಿಳಾ ಸಹಕಾರ ಸಂಘವಾಗಿ ಆರಂಭವಾಗಿರುವ ಈ ಸಹಕಾರ ಸಂಘದ ನೇತೃತ್ವದಲ್ಲಿ ಗ್ರಾಮ ಮಟ್ಟದಲ್ಲಿ ಸ್ವಸಹಾಯ ಸಂಘಗಳ ರಚಿಸಿ, ಅದರ ಮೂಲಕ ಮಹಿಳೆಯರಿಗೆ ಸಾಲಸೌಲಭ್ಯ ನೀಡಿ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಲಾಗುವುದು ಎಂದರು.
ಗಣಕೀಕರಣ ವಿಭಾಗವನ್ನು ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಉದ್ಘಾಟಿಸಿದರು. ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಸ್ವ-ಸಹಾಯ ವಿವಿಧೋದ್ದೇಶ ಸಹಕಾರ ಸಂಘ ನಿ., ಕೋಟ ಇದರ ಅಧ್ಯಕ್ಷೆ ಸುಧಾ ಎ.ಪೂಜಾರಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾರಾಯಣಗುರು ಮಹಿಳಾ ಸಹಕಾರ ಸಂಘದ ಮುಖ್ಯ ಪ್ರವರ್ತಕರಾದ ಗುಣರತ್ನ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಘದ ಪ್ರವರ್ತಕರಾದ ಸುನೇತ್ರಾ ಎಸ್.ಕೋಟ್ಯಾನ್, ನಿರ್ಮಲ ಆರ್.ಪೂಜಾರಿ, ಹೇಮಾವತಿ ಆರ್.ಪೂಜಾರಿ, ಬೇಬಿ ಶ್ರೀಕಾಂತ್, ಕುಸುಮ ರಾಮ ಪೂಜಾರಿ, ಆರತಿ ಜಿ.ಪೂಜಾರಿ, ಜಾನಕಿ ಬಿಲ್ಲವ, ಗಾಯತ್ರಿ, ಅಶ್ವಿನಿ, ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪಾ ಉಪಸ್ಥಿತರಿದ್ದರು.
ಪ್ರವರ್ತಕಿ ಸುನೇತ್ರಾ ಎಸ್.ಕೋಟ್ಯಾನ್ ವಂದಿಸಿದರು.ರಾಜೇಶ ಕಡ್ಗಿಮನೆ ಕಾರ್ಯಕ್ರಮ ನಿರ್ವಹಿಸಿದರು.











