ಕೋಟೇಶ್ವರ :ದೃಢ ಸಂಕಲ್ಪದಿಂದ ಮುನ್ನೆಡೆದಾಗ ಯಶಸ್ಸು ಸಾಧ್ಯ- ಜಯಪ್ರಕಾಶ್ ಹೆಗ್ಡೆ

0
598

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ನನಗೂ ಸಾಧ್ಯ ಎಂಬ ಮನಸ್ಸಿನ ದೃಢ ಸಂಕಲ್ಪದಿಂದ ಉದ್ಯಮ ಆರಂಭಿಸಿ ಶ್ರದ್ದೆ, ಪರಿಶ್ರಮ, ನಿರಂತರ ಆಸಕ್ತಿಯಿಂದ ಮುನ್ನೆಡೆದಾಗ ಯಶಸ್ಸು ಸಾಧ್ಯ. ಸ್ಪರ್ಧಾತ್ಮಕವಾದ ಈ ದಿನಗಳಲ್ಲಿ ಉದ್ಯಮ ಕ್ಷೇತ್ರಗಳಲ್ಲಿಯೂ ಕೂಡಾ ಸ್ಪರ್ಧೆ ಎದುರಿಸಲು ಸಿದ್ಧವಿರಬೇಕು ಎಂದು ಹಿಂದುಳಿದ ವರ್ಗಗಳ ಅಭಿವೃದ್ದಿ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಹೇಳಿದರು.

ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಟೇಶ್ವರ,ಇವರ ಉದ್ಯೋಗ ಮತ್ತು ಸ್ಥಾನೀಕರಣ ಘಟಕ ಆಶ್ರಯದಲ್ಲಿ ಅಂತರಾಳ ಫೌಂಡೇಶನ್ ರಿ., ಕುಂದಾಪುರ ಇವರ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ಒಂದು ದಿನದ ಉದ್ಯಮಶೀಲತಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

Click Here

ಅಭಿವೃದ್ದಿಯ ಪ್ರಥಮ ಆದ್ಯತೆಗಳು ಆರೋಗ್ಯ ಮತ್ತು ಶಿಕ್ಷಣಕ್ಕೆ ಸಿಗಬೇಕು. ಸರ್ಕಾರ ವ್ಯವಸ್ಥೆಯಲ್ಲಿಯೂ ಕೂಡಾ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಸೌಲಭ್ಯಗಳಿಂದ ಕೂಡಿರಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೇಂದ್ರ ಎಸ್.ನಾಯಕ ಅಧ್ಯಕ್ಷತೆ ವಹಿಸಿದ್ದರು.

ಅರಣ್ಯ ಗುತ್ತಿಗೆದಾರರಾದ ಜೆ.ಪಿ ಶೆಟ್ಟಿ, ಅಂತರಾಳ ಫೌಂಡೇಶನ್ ನಿರ್ದೇಶಕಿ ಲೀನಾ ನಾಯಕ್, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ನಾಗರಾಜ ಯು ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಾಪಾಲನಾಧಿಕಾರಿಗಳು ಮತು ಉದ್ಯೋಗ ಮತ್ತು ಸ್ಥಾನೀಕರಿಣ ಘಟಕದ ರಾಮರಾಯ ಆಚಾರ್ಯ ಸ್ವಾಗತಿಸಿದರು. ಅಂತರಾಳ ಫೌಂಡೇಶನ್ ಟ್ರಸ್ಟಿ ವಿವೇಕ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ವೆಂಕಟೇಶ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.

Click Here

LEAVE A REPLY

Please enter your comment!
Please enter your name here