ಕುಂದಾಪುರ ಮಿರರ್ ಸುದ್ದಿ…
ಕೋಟ: ಜೈ ಕುಂದಾಪ್ರ ಸೇವಾ ಟ್ರಸ್ಟ್ ನೊಂದವರಿಗೆ ನೆರವಿನ ದಾರಿ ದೀಪ ತುರ್ತು ಯೋಜನೆ- 41ನೇ, ಸಹಾಯ ಹಸ್ತ ಹಸ್ತಾಂತರ ಕಾರ್ಯಕ್ರಮ ಇತ್ತೀಚಿಗೆ ನೆರವೇರಿತು.

ಕೋಟದ ಗುರುಪ್ರಸಾದ್ ಮೊಗವೀರ ಟಿಪ್ಪರ್ ಲಿಫ್ಟ್ ಮಾಡುವ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ಟಿಪ್ಪರ್ ಸ್ಪರ್ಶಿಸಿ, ವಿದ್ಯುತ್ ಶಾಕ್ ನಿಂದ ತೀವ್ರವಾಗಿ ಮೈ, ಕೈ, ಕಾಲು ಸುಟ್ಟು ಹೋಗಿದ್ದು ಕೆ.ಎಂ.ಸಿ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರಿಗೆ ಜೈ ಕುಂದಾಪ್ರ ಸೇವಾ ಸಂಸ್ಥೆ ಹಾಗೂ ದಾನಿಗಳ ಸಹಾಯದಿಂದ ಒಟ್ಟು ಮಾಡಿದ 10,000/- ರೂ ಗಳ ಚೆಕ್ ಅನ್ನು ಅವರ ಮನೆಯವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಜೈ ಕುಂದಾಪ್ರ ಸೇವಾ ಸಂಸ್ಥೆಯ ಸ್ಥಾಪಕಾಧ್ಯಕ್ಷ ಪುಂಡಲೀಕ ಮೊಗವೀರ, ಗೌರವ ಅಧ್ಯಕ್ಷ ಶ್ರೀಕಾಂತ್ ಶಣೈ ಕೋಟ, ಪ್ರಧಾನ ಕಾರ್ಯದರ್ಶಿ ಜಯರಾಜ್ ಪಡುಕೆರೆ ,ಸಂಸ್ಥೆಯ ಗೌರವ ಸಲಹೆಗಾರರಾದ ದಿನೇಶ್ ಗಾಣಿಗ ,ಸಂತೋಷ್ ಪಡುಕರೆ, ಪದಾಧಿಕಾರಿಗಳಾದ ಕೋಟ ಸಂತೋಷ್, ಮನೀಶ್ ಕುಲಾಲ್, ಅಕ್ಷಯ ಕೋಟ, ಸುರೇಶ್ ಶೆಟ್ಟಿ, ಸತ್ಯ ಪ್ರಕಾಶ್,ಶಿವರಾಜ್ ಪಡುಕರೆ, ಅಕ್ಷಿತ್ ಮೆಂಡನ್, ದಿನೇಶ್ ಕೋಟ, ಶಿವರಾಂ ಕೋಡಿ, ಸತೀಶ್ ಪಡುಕರೆ,ಮಹಿಳಾ ಘಟಕದ ನಿರ್ವಾಹಕಿ ದಿವ್ಯ ಕುಂದಾಪುರ ಉಪಸ್ಥಿತಿಯಿದ್ದರು.











