ಕೊಲ್ಲೂರು ದೇವಳಕ್ಕೆ ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೈ ಭೇಟಿ

0
333

Click Here

Click Here

ಕುಂದಾಪುರ ಮಿರರ್ ಸುದ್ದಿ…

Video:

ಕುಂದಾಪುರ : ಶಂಕರಾಚಾರ್ಯರು ಆರಂಭಿಸಿದ ಶಾಕ್ತೈ ಪೂಜೆ ಅತ್ಯಂತ ಶ್ರೇಷ್ಟ ಪೂಜೆ ಎನ್ನಿಸಿದೆ ಎಂದು ಗೋವಾ ರಾಜ್ಯಪಾಲ ಪಿ.ಎಸ್ ಶ್ರೀಧರನ್ ಪಿಳ್ಳೈ ಹೇಳಿದರು.

ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಪತ್ನಿ ರೀನಾ ಸಹಿತ ಕುಟುಂಬದೊಂದಿಗೆ ಭಾನುವಾರ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.

Click Here

ತಿರುಪತಿಯಂತಹಾ ಕ್ಷೇತ್ರಗಳಲ್ಲಿಯೂ ಶಾಕ್ತೈ ಪೂಜೆ ನಡೆಯುತ್ತಿದೆ. ಆದರೆ ಕೊಲ್ಲೂರು ಕ್ಷೇತ್ರದ ಪೂಜೆಗೆ ವಿಶೇಷ ಮಹತ್ವವಿದೆ ಎಂದ ಅವರು, ಮುಂದಿನ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಭಕ್ತರನ್ನು ಇಲ್ಲಿಗೆ ಆಹ್ವಾನಿಸುತ್ತೇನೆ ಎಂದರು.

ಉಡುಪಿಯಿಂದ ಕೊಲ್ಲೂರು ದೇವಳಕ್ಕೆ ಆಗಮಿಸಿದ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ರಾಜ್ಯಪಾಲರು ತುಪ್ಪದ ದೀಪದಿಂದ ಆರತಿ ಬೆಳಗಿದರು. ಬ್ರಹ್ಮಾರ್ಪಣ ನೆರವೇರಿಸಿದರು ಹಾಗೂ ಅರ್ಚನೆ ಮಾಡಿಸಿದರು.

ದೇವಾಲಯದ ಆವರಣದಲ್ಲಿ ವೀರಭದ್ರಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ, ದೇವಳದ ಪ್ರಧಾನ ತಂತ್ರಿ ಹಾಗೂ ಅರ್ಚಕ ಡಾ ಕೆ. ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ತಮ್ಮ ಮೊಮ್ಮಕ್ಕಳಿಗೆ ವಿದ್ಯಾರಂಭ ಮಾಡಿಸಿದರು.

ಬಳಿಕ ದೇವಳದ ಕಛೇರಿಯಲ್ಲಿ ವ್ಯವಸ್ಥಾಪನಾ ಸಮಿತಿ ವತಿಯಿಂದ ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರಿಗೆ ಶಾಲು ಹೊದಿಸಿ ಗೌರವಿಸಿ, ಶ್ರೀದೇವಿಯ ಪ್ರಸಾದ ನೀಡಲಾಯಿತು.

ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರತ್ನಾ ರಮೇಶ್ ಕುಂದರ್, ಸಂಧ್ಯಾ ರಮೇಶ್, ಕೊಲ್ಲೂರು ಉದ್ಯಮಿ ಚಿಕ್ಕಯ್ಯ ಮೊಗವೀರ, ಬೈಂದೂರು ತಹಶೀಲ್ದಾರ್ ಶ್ರೀಕಾಂತ್ ಕೆ ಹೆಗ್ಡೆ, ಬೈಂದೂರು ಪಟ್ಟಣ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್, ಕೊಲ್ಲೂರು ಗ್ರಾಮ ಲೆಕ್ಕಾಧಿಕಾರಿ ವೀರೇಶ್, ದೇವಳದ ಅರ್ಚಕ ಡಾ. ಕೆ ನರಸಿಂಹ ಅಡಿಗ, ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಇದ್ದರು.

Click Here

LEAVE A REPLY

Please enter your comment!
Please enter your name here