ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಡಿ ಕುಂದಾಪುರ ಇದರ ವತಿಯಿಂದ ಪ್ರತಿ ತಿಂಗಳ ಕೊನೆಯ ಭಾನುವಾರ ನಡೆಯುವ “ಸ್ವಚ್ಛ ಕಡಲತೀರ – ಹಸಿರು ಕೋಡಿ” ಅಭಿಯಾನ 20 ನೇ ಹಂತ ಎ.30ರಂದು ನೆರವೇರಿತು.
ನಮ್ಮ ಬದುಕಿನಲ್ಲಿ ಒಂದಷ್ಟು ಸಮಯವನ್ನು ನಮ್ಮ ಸಮಾಜಕ್ಕೆ ಮೀಸಲಿಡಬೇಕು. ಇದು ದೇವರ ಕೆಲಸ ಎಂದು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಪರಿಸರ ಪ್ರೇಮಿ ಸಂಚಾಲಕರಾದ ಸಯ್ಯದ್ ಮೊಹಮ್ಮದ್ ಬ್ಯಾರಿ ಇವರು ಶುಭ ಹಾರೈಸಿದರು.
ಸಂಯೋಜಕರಾದ ಪ್ರೊ. ಆಕಾಶ್ ಮಾತನಾಡಿ “ನಾವೇನೇ ಪಡೆದಿದ್ದರೂ ಈ ಸುಂದರ ಪರಿಸರದಿಂದಲೇ, ಹಾಗಾಗಿ ಈ ಪರಿಸರವನ್ನು ಸುಂದರವಾಗಿಟ್ಟು ಮುಂದಿನ ಪೀಳಿಗೆಗೆ ಕೊಡುವುದು ನಮ್ಮೆಲ್ಲರ ಜವಬ್ದಾರಿ” ಎಂದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ ಎಂ ಅಬ್ದುಲ್ ರೆಹಮಾನ್, ಸಲಹಾ ಮಂಡಳಿಯ ಸದಸ್ಯರಾದ ಅಬುಶೇಕ್ ಸಾಹೇಬ್, ವಿಶ್ವಸ್ಥ ಮಂಡಳಿಯ ಸದಸ್ಯರಾದ ಡಾ. ಆಸೀಫ್, ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಡಾ. ಫಿರ್ದೋಸ್, ಡಾ. ಶಮೀರ್, ಡಾ. ಸುರೇಶ್ ಶೆಟ್ಟಿ, ಜಯಶೀಲ ಶೆಟ್ಟಿ, ಅಶ್ವಿನಿ ಶೆಟ್ಟಿ, ಜಟ್ಟಪ್ಪ ಹಾಗೂ ಬೋಧಕ – ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಈ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.











