Video:
ಕುಂದಾಪುರ ಮಿರರ್ ಸುದ್ದಿ…

ಕೋಟ: ನಮ್ಮದು ಹೆಸರಿಗೆ ಡಬಲ್ ಇಂಜಿನ್ ಸರ್ಕಾರ ಅಲ್ಲ, ಕರೋನ ಸಮಯದಲ್ಲಿ ವ್ಯಾಕ್ಸಿನ್, ಸ್ಟೀಲ್ ಉತ್ಪಾದಕ ಘಟಕ, ಮೊಬೈಲ್ ಉತ್ಪಾದಕ ಘಟಕ, ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಹೀಗೆ ಹಲವಾರು ಯೋಜನೆಗಳನ್ನು ಡಬಲ್ ಇಂಜಿನ್ ಸರ್ಕಾರ ನೀಡಿದೆ.
ಕರ್ನಾಟಕಕ್ಕೆ ಈ ವರ್ಷವೇ ರಾಷ್ಟ್ರೀಯ ಹೆದ್ದಾರಿಗೆ ಒಂದು ಲಕ್ಷ ಕೋಟಿ ಅನುದಾನವನ್ನು ಘೋಷಿಸಲಿದ್ದೇವೆ. ಹಾಗೆ ತುಮಕೂರಿನಲ್ಲಿ ಅತಿ ದೊಡ್ಡ ಉತ್ಪಾದನಾ ಘಟಕ ಸ್ಥಾಪಿತವಾಗಲಿದ್ದು, ಮುಂದಿನ ದಿನಗಳಲ್ಲಿ ದಕ್ಷಿಣದ ಅತಿ ದೊಡ್ಡ ಉದ್ಯಮ ಕೇಂದ್ರವಾಗಲಿದೆ. ಹೆಲಿಕ್ಯಾಪ್ಟರ್ ತಯಾರಿಕೆ, ರೈಲ್ವೆ ಭೋಗಿಗಳ ತಯಾರಿಕಾ ಘಟಕ ತುಮಕೂರಿನಲ್ಲಿ ಸ್ಥಾಪಿತವಾಗಲಿದೆ. ಅಲ್ಲದೆ ಹಲವಾರು ಜನರಿಗೆ ಎಲ್ಲಿ ಉದ್ಯೋಗ ಲಭಿಸಲಿದೆ.
ಬಿಜೆಪಿ ಸರ್ಕಾರ ರೈತರಿಗೆ ಮತ್ತು ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆರ್ಥಿಕ ವ್ಯವಸ್ಥೆಯನ್ನು ಹೆಚ್ಚಿಸಲು ಬೊಮ್ಮಾಯಿ ಸರ್ಕಾರ ಈಗಾಗಲೇ ಸಾಕಷ್ಟು ಅನುದಾನ ನೀಡಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರ ಇರುವಾಗ ಪ್ರಧಾನ್ ಮಂತ್ರಿ ಆವಾಸ್ ಯೋಜನ, ಆಯುಷ್ಮಾನ್ ಯೋಜನೆ, ಕಿಸಾನ್ ಯೋಜನೆಯನ್ನು ಕೇಂದ್ರದಿಂದ ಕರ್ನಾಟಕದ ಜನತೆಗೆ ನೀಡಲು ವಿಫಲವಾಗಿತ್ತು, ಆದರೆ ಯಡಿಯೂರಪ್ಪ ಮತ್ತು ಬೊಮ್ಮಾಯಿ ಈ ಎಲ್ಲಾ ಯೋಜನೆಯನ್ನು ಸಮರ್ಪಕವಾಗಿ ಕರ್ನಾಟಕದ ಜನತೆಗೆ ತಲುಪಿಸಲು ಯಶಸ್ವಿಯಾಗಿದೆ. ಅಲ್ಲದೆ ಪಿಎಫ್‍ಐ ಸಂಘಟನೆಯನ್ನು ಬ್ಯಾನ್ ಮಾಡಿ ನಮ್ಮ ಡಬಲ್ ಇಂಜಿನ್ ಸರ್ಕಾರದ ಶಕ್ತಿಯನ್ನು ಈಗಾಗಲೇ ಕರ್ನಾಟಕಕ್ಕೆ ತೋರಿಸಿದ್ದೇವೆ. ಸಿದ್ದರಾಮಯ್ಯ ಚುನಾವಣೆ ಪ್ರಚಾರದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಇದನ್ನು ಕೇಳಿದರೆ ನಗು ಬರುತ್ತಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇವರುಗಳ ಅಕ್ರಮ ಆಸ್ತಿ, ಭೂಕಬಳಿಕೆ, ಮನಿ ಲಾಂಡ್ರಿಂಗ್ ಪ್ರಕರಣ ದಾಡಿಯಲ್ಲಿ ಈಗ ಬೇಲ್‍ನಲ್ಲಿ ಹೊರಗಿದ್ದಾರೆ . ರಾಹುಲ್ ಗಾಂಧಿ ಹಾಗೂ ಇತರ ಕಾಂಗ್ರೆಸ್ ಲೀಡರ್ ಕಥೆ ಸಹ ಇದೇ ಆಗಿದೆ. ಕಾಂಗ್ರೆಸ್ ನಲ್ಲಿ ನಾಯಕರುಗಳು ಒಂದೇ ಜೈಲ್ನಲ್ಲಿ ಇಲ್ಲ ಬೇಲ್‍ನಲ್ಲಿ ಹೊರಗಿದ್ದಾರೆ.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ವಿಧಾನಸಭಾ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಮುಖಂಡರಾದ ಉದಯ್ ಕುಮಾರ್ ಶೆಟ್ಟಿ, ಶ್ಯಾಮಲ ಕುಂದರ್, ಸುಲತಾ ಹೆಗ್ಡೆ, ರಾಜು ಪೂಜಾರಿ, ಜಯೇಂದ್ರ ಪೂಜಾರಿ, ಸುರೇಶ್ ಕುಂದರ್, ಸುರೇಶ್ ಶೆಟ್ಟಿ ,ಸತೀಶ್ ಪೂಜಾರಿ,ಸತೀಶ್ ಬಾರಿಕೆರೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಿಜೆಪಿ ಮುಖಂಡ ಬೈಕಾಡಿ ಸುಪ್ರಸಾದ್ ಶೆಟ್ಟಿ ನಿರೂಪಿಸಿದರು.ಈ ಮೊದಲು ಸಾಲಿಗ್ರಾಮದ ಆಂಜನೇಯ ದೇವಳದ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಹಸ್ರ ಸಂಖ್ಯೆಯಲ್ಲಿ ಕಾರ್ಯಕರ್ತರು ರೋಡ್ ಶೋ ನಲ್ಲಿಭಾಗಿಯಾದರು.
ಶಾಸಕ ಹಾಲಾಡಿಗೆ ಅಭಿಮಾನಿಗಳ ಮಹಾಪೂರ
ರೋಡ್ ಶೋ ಉದ್ದಕ್ಕೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ,ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿವರ ಪರವಾಗಿ ಕಾರ್ಯಕರ್ತರು ಘೋಷಣೆಗಳ ಮಹಾಪೂರ ಹರಿಸಿದರು. ಅದರಲ್ಲೂ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಾರ್ಯಕರ್ತರ ನಡುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಮನ ಸೆಳೆದು ಕಾರ್ಯಕ್ರಮದ ನಂತರ ಅಭಿಮಾನಿಗಳು ಹಾಗೂ ಕಾರ್ಯಕರ್ತರ ದಂಡು ಹಾಲಾಡಿ ಶ್ರೀನಿವಾಸ ಶೆಟ್ಟಿ ನಡೆದುಹೋದ ದಾರಿ ಉದ್ದಕ್ಕೂ ರೋಡ್ ಶೋ ವಿಶೇಷವಾಗಿ ಗಮನ ಸೆಳೆಯಿತು.











