ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

0
504

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ಎಳೆ ವಯಸ್ಸಿನಿಂದ ಮಕ್ಕಳಿಂದ ಇಳಿ ವಯಸ್ಸಿನ ಮಹಿಳೆಯವರೆಗೂ ನಡೆದ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ, ಅತ್ಯಾಚಾರಗೈದ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ಮಂಗಳೂರು ಇವರ ನೇತೃತ್ವದಲ್ಲಿ ಕುಂದಾಪುರದಲ್ಲಿ ಪ್ರತಿಭಟನೆ ನಡೆಯಿತು.

Click Here


ಅ.ಭಾ.ವಿ.ಪ ಉಡುಪಿ ಜಿಲ್ಲೆ ಜಿಲ್ಲಾ ಸಂಚಾಲಕ್ ಅಶೀಶ್ ಶೆಟ್ಟಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ವೀರ ವನಿತೆಯರನ್ನು ಹೊಂದಿರುವ ಈ ನಾಡಿನಲ್ಲಿ ಹೆಣ್ಣಿಗೆ ಪೂಜನೀಯವಾದ ಸ್ಥಾನ ನೀಡಿದೆ. ನೆಲ, ಜಲ, ದೇಶ ಎಲ್ಲದ್ದಕ್ಕೂ ಹೆಣ್ಣಿನ ಸ್ಥಾನ ನೀಡಿರುವ ಪರಂಪರೆ ನಮ್ಮದು. ಆದರೆ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಮನುಷ್ಯತ್ವವನ್ನು ಮೀರಿದವುಗಳಾಗಿವೆ. ಅತ್ಯಾಚಾರಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಮತ್ತೆ ಇಂಥಹ ಕೃತ್ಯಗಳು ನಡೆಯಂತೆ ಕಾನೂನಿನ ಭಯ ಮೂಡಿಸುವ ಕೆಲಸ ಆಗಬೇಕು ಎಂದರು.

ಈ ಸಂದರ್ಭದಲ್ಲಿ ರಾಜ್ಯ ಸಹ ಕಾರ್ಯದರ್ಶಿ ಮಣಿಕಂಠ ಕಳಸ, ನಿರಕ್ಷಿತ, ಪ್ರಸನ್ನ, ತಾ.ಸಂಚಾಲಕ ಪ್ರಜ್ವಲ್, ಆಶಿಶ್ ಬೋಳ, ವಿಜೇತ್, ಯಶಸ್ವಿನಿ ಬೀಜಾಡಿ, ದೀಪಕ್, ರಶ್ಮಿತಾ, ರಾಹುಲ್, ರಶ್ಮಿತಾ, ಹೃತಿಕ್, ಪಲ್ಲವಿ, ಸಂಜಯ್, ಮೇಘ ಮೊದಲಾದವರು ಭಾಗವಹಿಸಿದ್ದರು. ತಾಲೂಕಿನ ಐದು ಶಿಕ್ಷಣ ಸಂಸ್ಥೆಗಳ ಎಬಿವಿಪಿ ಸಂಘಟನೆಯ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಳಿಕ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

Click Here

LEAVE A REPLY

Please enter your comment!
Please enter your name here