ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕುಂದೇಶ್ವರ ದೇವಸ್ಥಾನ ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಏಜುಕೇಶನ್ (ಸ್ಪೇಸ್) ಸಿಎ/ಸಿಎಸ್/ಸಿಎಂಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯು ವಿದ್ಯಾರ್ಥಿಗಳು ಇನ್ಟಿಟ್ಯೂಟ್ ಆಫ್ ಚಾರ್ಟರ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿಎ ಅಂತಿಮ ಮತ್ತು ಸಿಎ ಪೌಂಡೇಶನ್ ಪರೀಕ್ಷೆಯಲ್ಲಿ ಶ್ರೇಷ್ಠ ಸಾಧನೆ ತೋರಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಮಂಗಳವಾರ ನಡೆಯಿತು. ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್‍ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿಯವರು ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಕಠಿಣ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಮತ್ತು ಭೋಧಕ ಸಿಬ್ಭಂದಿಗಳ ಪ್ರಯತ್ನಕ್ಕೆ ಫಲ ದೊರಕಿದೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಮತ್ತು ಸಂಸ್ಥೆಯ ಬೋಧಕ ಸಿಬ್ಬಂದಿಗಳ ಸತತ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಯಿತು ಎಂದರು.








ಚಾರ್ಟರ್ ಅಕೌಂಟೆಂಟ್ ಅರುಣ್ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಸಂಸ್ಥೆಯ ವಿಲಾಸ್ ಶೆಟ್ಟಿ, ಸಿಎ ಅಂತಿಮ ಪರೀಕ್ಷೆಯಲ್ಲಿ 528 ಅಂಕ ಗಳಿಸುವುದರೊಂದಿಗೆ ಉತ್ತಮ ಅಂಕಗಳೊಂದಿಗೆ ಸಿ.ಎ. ಕೋರ್ಸ್ ಪೂರ್ಣಗೊಳಿಸಿ ಲೆಕ್ಕ ಪರಿಶೋಧಕರಾಗಿ ಹೊರಹೊಮ್ಮಿದ್ದಾರೆ. ಸಂಸ್ಥೆಯ ಪುನೀತ್ ಶೆಟ್ಟಿ 215 ಅಂಕಗಳೊಂದಿಗೆ ಸಿ.ಎ. ಅಂತಿಮ ಪರೀಕ್ಷೆಯ ಪ್ರಥಮ ಗ್ರೂಪಿನಲ್ಲಿ ತೇರ್ಗಡೆ ಹೊಂದಿದ್ದಾರೆ. ಶಿಕ್ಷಪ್ರಭಾ ಸಂಸ್ಥೆಯ ವಿದ್ಯಾರ್ಥಿಗಳು ಸಿ.ಎ. ಪೌಂಡೇಶನ್ ಪರೀಕ್ಷೆಯಲ್ಲಿ ಕೂಡ ಅತ್ಯುತ್ತಮ ಸಾಧನೆ ತೋರಿದ್ದು ವಿದ್ಯಾರ್ಥಿಗಳಾದ ಅನುಷೇಕ್ ಎ. ಕುಂದರ್ – 332, ಅಭಿಷೇಕ್ ಡಿ. 302, ಕಿರಣ್ ಕಾಮತ್ 299, ಆದಿತ್ಯ ದೇವಾಡಿಗ 298, ಜೆಸಿತಾ ಡಿ. 284, ರಾಮನಾಥ ಶೆಣೈ 282, ಸುಪ್ರೀತಾ 274, ಶ್ರೇಯಾ ಭಟ್, 268, ರೋಹನ್ ಶೆಟ್ಟಿ 266, ಅಭಿಶ್ರೀ 263, ಮಂದಾರಾ 260, ಭುವನ್ ರಾಜ್ ಶೆಟ್ಟಿ 252, ಹರೀಶ್ ನಾಯ್?ಕ 248, ವಿಖ್ಯಾತ್ 248, ಚೇತನಾ 245, ರವಿಕಿರಣ್ 245, ಅಮೃತಾ ಕೆ. 243, ನಾದಶ್ರೀ 240, ಶ್ರೀಷನ್ ಶೆಟ್ಟಿ 240, ರಾಘವೇಂದ್ರ ಪೂಜಾರಿ 238, ಅಕ್ಷಿತಾ 234, ದೀಕ್ಷಾ ಶಾನುಭಾಗ್ 229, ಮನೀಷ್ ಕೋಟ 226, ಸಿಂಚನಾ 226, ವಿಜೇಂದ್ರ ಕಿಣಿ 224, ಸಹನಾ ಎಸ್. 223, ಶಮಂತ್ ಕೊಠಾರಿ 223, ಶಾಂಭವಿ ಬಂಗೇರ 222, ಆಹಿಷ್ ಶೆಟ್ಟಿ 216, ಪ್ರಿಯಾ ಶೆಟ್ಟಿ 215, ಶ್ರೀಮಾ ಶೆಟ್ಟಿ 215, ಅಕ್ಷತಾ 214, ಸ್ನೇಹಾ 214, ಅಕ್ಷತಾ ಟಿ. 209, ಅನುಷಾ 208, ಅರ್ಪಣ್ ಪೂಜಾರಿ 207, ಗ್ಲೇವಿತಾ 204, ವೈಷ್ಣವಿ ಶೆಟ್ಟಿ 204, ಮನೋಜ್ 202, ಚಿರಾಗ್ ಶೆಟ್ಟಿ 201, ಇಂಚರಾ 201 ಅಂಕಗಳೊಂದಿಗೆ ಸಿ.ಎ. ಪೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.











