ಕುಂದಾಪುರ ಮಿರರ್ ಸುದ್ದಿ…

ಕೋಟ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ” ಸ್ವಚ್ಛ ಭಾರತ್ ಮಿಷನ್ ನಗರ 2.0 ಯೋಜನೆಯಡಿ, ಮೇ 20ರಿಂದ ಜೂ 5ರ ವರೆಗೆ ನೆಡೆಸಲಾಗುವ ” ನನ್ನ ಲೈಫ್ ನನ್ನ ಸ್ವಚ್ಛ ನಗರ ಅಭಿಯಾನ ಕಾರ್ಯಕ್ರಮ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿ ಎದುರು ಕೇಂದ್ರಗಳನ್ನು ತೆರೆಯುವ ಮೂಲಕ ಶನಿವಾರ ಚಾಲನೆ ನೀಡಲಾಯಿತು.
ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಇಂದುಶ್ರೀ ಮಾತಾನಾಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗೆ ಆಯ್ದ ಮರುಬಳಕೆಯ ಮಸ್ತುಗಳನ್ನು ಸ್ವಯಂಪ್ರೇರಿತರಾಗಿ ಆರ್. ಆರ್. ಆರ್ ಕೇಂದ್ರಕ್ಕೆ ನೀಡುವಂತೆ ವಿನಂತಿಸಿದರು.
ಮೇ 20 ರಿಂದ ವಿಶ್ವ ಪರಿಸರ ದಿನವಾದ ಜೂನ್ 5 ರವರೆಗೆ ಜನರು ತಮ್ಮಲ್ಲಿರುವ ಮರುಬಳಕೆಯ ತ್ಯಾಜ್ಯವನ್ನು ನೀಡಿ, ಬದಲಿ ವಸ್ತುಗಳನ್ನು ಪಡೆದು ಸ್ವಚ್ಛ ಸಾಲಿಗ್ರಾಮ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕಾಗಿ ಕರೆನೀಡಿದರು.
ಆರ್ ಆರ್ ಆರ್ ಕೇಂದ್ರದ ಬಗ್ಗೆ ಮಾಹಿತಿ
ಪಟ್ಟಣ ಪಂಚಾಯತ್ ಕಿರಿಯ ಆರೋಗ್ಯ ನಿರೀಕ್ಷಕಿ ಮಮತಾ ಯೋಜನೆಯ ಮಾಹಿತಿ ನೀಡಿ, ಕೇಂದ್ರ ಸರಕಾದ ನಿರ್ದೇಶನದಂತೆ ತ್ಯಾಜ್ಯ ಪ್ರಮಾಣ ಕಡಿಮೆ (ರೆಡ್ಯೂಸ್) , ಮರುಬಳಕೆ (ರೀಯೂಸ್), ಪುನರ್ ಬಳಕೆ ( ರಿ ಸೈಕಲ್) ವಿಚಾರಗಳನ್ನು ಒಳಗೊಂಡ ಅಭಿಯಾನ ಇದಾಗಿದ್ದು, ಆರ್ ಆರ್ ಆರ್ ಕೇಂದ್ರಕ್ಕೆ ಮರುಬಳಕೆಯ ಆರು ವಸ್ತುಗಳನ್ನು ನೀಡಲು ಅವಕಾಶ ನೀಡಲಾತ್ತಿದೆ, ನೀಡಿದ ವಸ್ತುವನ್ನು ದಾಖಲಿಸಿ, ಸೂಕ್ತ ಬದಲಿ ಪ್ರೋತ್ಸಾಹ ವಸ್ತುವನ್ನು ನೀಡಲಾಗುತ್ತದೆ. ಇದಲ್ಲದೇ ಹಸ್ತಾಕ್ಷರ ಅಭಿಯಾನ, ಸೆಲ್ಫೀ ಬೋರ್ಡ್ ಅಭಿಯಾನವನ್ನೂ ಅಳವಡಿಸಲಾಗಿದೆ ಎಂಬ ಮಾಹಿತಿ ನೀಡಿದರು. ಪಟ್ಟಣ ಪಂಚಾಯತ್‍ನ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.











