ಕುಂದಾಪುರ ಕಲ್ಲಾಗರ ಕೆರೆಯಲ್ಲಿ ಮೀನುಗಳ ಸಾವು

0
229

Click Here

Click Here

ಕುಂದಾಪುರ ಮಿರರ್ ಸುದ್ದಿ…


ಕುಂದಾಪುರ : ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಕಲ್ಲಾಗರ ಕೆರೆಯಲ್ಲಿ ಸಾವಿರಾರು ಮೀನುಗಳು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು ಶುಕ್ರವಾರ ಕಂಡು ಬಂದಿದೆ.

ಶುಕ್ರವಾರ ಬೆಳಿಗ್ಗೆ ಕೆರೆಯಲ್ಲಿ ಮೀನುಗಳು ಸತ್ತು ತೇಲುತ್ತಿರುವುದನ್ನು ಕಂಡ ಸಾರ್ವಜನಿರು ತಕ್ಷಣ ಪುರಸಭೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧಿಕಾರಿಗಳು ಪೌರ ಕಾರ್ಮಿಕರ ಮೂಲಕ ದೋಣಿಯ ನೆರವಿನಿಂದ ಸತ್ತ ಮೀನುಗಳನ್ನು ಕೆರೆಯಿಂದ ತೆರವು ಮಾಡಿದ್ದಾರೆ.

Click Here

ಸ್ಥಳಕ್ಕೆ ಪರಿಸರ ಅಭಿಯಂತರರು, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಬೇಟಿ ನೀಡಿದ್ದಾರೆ. ಮೀನುಗಳ ಸಾಮೂಹಿಕ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಯಾವ ಕಾರಣದಿಂದ ಮೀನುಗಳು ಸಾವೀಗಿಡಾಗಿವೆ ಎನ್ನುವುದರ ಬಗ್ಗೆ ಪರೀಕ್ಷೆಗೆ ಕಳುಹಿಸಲಾಗಿದೆ.

ಈ ಕೆರೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮೀನುಗಳಿದ್ದು, ಪಾಚಿಯೂ ತುಂಬಿದೆ. ಕಲುಷಿತ ಪದಾರ್ಥಗಳು ನೀರಿಗೆ ಸೇರಿರಬಹುದು ಎಂದು ಅಂದಾಜಿಸಲಾಗಿದೆ. ಯಾವುದೇ ನಿರ್ದಿಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ.

Click Here

LEAVE A REPLY

Please enter your comment!
Please enter your name here