ಕುಂದಾಪುರ :ಮರಳು ತುಂಬಿದ ಟಿಪ್ಪರ್ ಲಾರಿ ಹೊಂಡಾ ಅಕ್ಟಿವ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಹಂಗಳೂರು ಯೂನಿಟಿ ಹಾಲ್ ಬಳಿ ಸಂಭವಿಸಿದೆ.
ಕೋಟೇಶ್ವರ ಕಡೆ ತೆರಳುತ್ತಿದ್ದ ಕೃಷ್ಣಮೂರ್ತಿ ಅಡಿಗ ಬೀಜಾಡಿ ಮೃತ ದುರ್ದೈವಿ.
ಮರಳು ತುಂಬಿದ ಟಿಪ್ಪರ್ ವಾಹನ ಕೂಡಾ ಕೋಟೇಶ್ವರ ಕಡೆ ಹೋಗುತ್ತಿದ್ದು ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆರ ಬೈಕ್ ಸವಾರ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.