ಕುಂದಾಪುರ ಮಿರರ್ ಸುದ್ದಿ…
ಕೋಟ: ಬಾಂಧವ್ಯ ಬ್ಲಡ್ ಕರ್ನಾಟಕ ಸಂಸ್ಥೆಯ ಸಂಸ್ಥಾಪಕ ದಿನೇಶ್ ಬಾಂಧವ್ಯ ಸೆ.13 ರಿಂದ ತಿರುಪತಿ ಪಾದಯಾತ್ರೆ ಹೊರಟಿದ್ದು ಈ ಯಾತ್ರೆಯಲ್ಲಿ ಡೋನೆಟ್ ಬ್ಲೆಡ್ ಸೇವ್ ಲೈಫ್ ಎನ್ನುವ ಪತಾಕೆಯನ್ನು ಹಿಡಿದು ಪ್ರತಿದಿನ 40-45 ಕಿ ಮೀ ಕ್ರಮಿಸಲಿದ್ದಾರೆ.

ಪಾದಯಾತ್ರೆಯು ಸಾಸ್ತಾನದಿಂದ ಕೊಂಡಾಡಿ, ಹೊಸ್ಮಾರ್ , ಧರ್ಮಸ್ಥಳ, ಗುಂಡ್ಯಾ, ಸಕಲೇಶಪುರ, ಹಾಸನ, ಶೆಟ್ಟಿ ಹಳ್ಳಿ,ಕುಣಿಗಲ್ ಯಡಿಯೂರು, ಶಿವಗಂಗೆ, ರಾಜಘಟ್ಟ, ಕೈವಾರ, ರಾಯಲ್ಪಾಡು, ವಾಯಲ್ಪಾಡು ಪಿಲೇರು, ಬಾಕ್ರ ಪೇಟೆ, ಶ್ರೀನಿವಾಸಮಂಗಾಪುರ, ಶ್ರಿವಾರಿ ಮೆಟ್ಟಿಲಿನಿಂದ ತಿರುಪತಿ ತಿಮ್ಮಪ್ಪನ ದರ್ಶನವನ್ನು ಸೆ 29ರಂದು ಮಾಡಲಿದ್ದಾರೆ, ದಿನೇಶ್ ಬಾಂಧವ್ಯ ಈಗಾಗಲೇ 41 ಬಾರಿ ರಕ್ತದಾನ ಮಾಡಿದ್ದು ಇವರಿಗೆ ಪಾದಯಾತ್ರೆ ರೂವಾರಿ ಲಕ್ಷೀನಾರಾಯಣ್ ರಾವ್ ಮತ್ತು ಶ್ರೀಧರ್ ಪಿ ಎಸ್ ಪತಾಕೆ ದಿನೇಶ್ ಬಾಂಧವ್ಯರಿಗೆ ನೀಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಯೋಗೀಶ್ ದೇವಾಡಿಗ, ವಿಜಯ್ ಕುಮಾರ್, ಸಂತೋಷ್ ಕಾಂಚನ್, ಅಶೋಕ್, ಗಣೇಶ್ ಮತ್ತಿತ್ತರು ಉಪಸ್ಥಿತರಿದ್ದರು.











